Pension Scheme : 60 ವರ್ಷ ಮೇಲ್ಪಟ್ಟ ಅಜ್ಜ-ಅಜ್ಜಿಯರು ಇನ್ನು ಪೆನ್ಷನ್ ಬಂದಿಲ್ಲ ಅಂದರೆ ಈ ಕೆಲಸವನ್ನ ಕಡ್ಡಾಯವಾಗಿ ಮಾಡಿಕೊಳ್ಳಬೇಕು.

Pension Scheme : ನಮಸ್ಕಾರ ಸ್ನೇಹಿತರೇ, 60 ವರ್ಷ ಮೇಲ್ಪಟ್ಟ ವಯಸ್ಸಾದ ಅಜ್ಜ-ಅಜ್ಜಿಯರಿಗೆ ಹಾಗು ವಿಧವೆಯರಿಗೆ ಮತ್ತು ಅಂಗವಿಕಲರಿಗೆ ಇದೇ ತಿಂಗಳು ಈ ಕೆಲಸ ಕಡ್ಡಾಯವಾಗಿ ಮಾಡದೇ ಹೋದರೆ ಮುಂದಿನ ತಿಂಗಳಿನಿಂದ ನಿಮಗೆ ಪಿಂಚಣಿಯ ಹಣ ಸಿಗುವುದಿಲ್ಲ. ಪ್ರತೀ ತಿಂಗಳು ಪಿಂಚಣಿ ಹಣ ಪಡೆಯುತ್ತಿರುವ ಪ್ರತಿಯೊಬ್ಬರಿಗೂ ಕೂಡ ಈ ಕೆಲಸವನ್ನು ಇದೇ ತಿಂಗಳ ಒಳಗಾಗಿ ಕಡ್ಡಾಯವಾಗಿ ಮಾಡತಕ್ಕದ್ದು.

Whatsapp Group Join
Telegram channel Join

ಇದೇ ತಿಂಗಳು ಅಂದರೆ ಅಕ್ಟೋಬರ್ 31 ರೊಳಗಾಗಿ ಪ್ರತೀ ತಿಂಗಳ ಪಿಂಚಣಿ ಹಣವನ್ನ ಪಡೆದುಕೊಳ್ಳುತ್ತಿರುವ ವೃದ್ಧರು, ವಿಧವೆಯರು, ಅಂಗವಿಕಲರು ಸೇರಿದಂತೆ ಇನ್ನೂ ಇತರೇ ಪ್ರತೀ ತಿಂಗಳು ಪಿಂಚಣಿ ಹಣ ಪಡೆದುಕೊಳ್ಳುತ್ತಿರುವ ಎಲ್ಲರಿಗೂ ಕೂಡ ಈ ಕೆಲಸ ಮಾಡಿ ಮುಗಿಸಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲವಾದರೆ ನಿಮಗೆ ಮುಂದಿನ ತಿಂಗಳಿನಿಂದ ನೀಡಲಾಗುವ ಪಿಂಚಣಿ ಹಣವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಅಧೀಕೃತ ಆದೇಶ ಹೊರಡಿಸಿದೆ.

ಇದನ್ನೂ ಕೂಡ ಓದಿ : Farmers Loan Waiver : ಬರಪೀಡಿತ ಜಿಲ್ಲೆಗಳ ರೈತರ ಮುಖದಲ್ಲಿ ಮಂದಹಾಸ.! ಎಲ್ಲಾ ರೈತರ ಸಾಲಮನ್ನಾಗೆ ಸೂಚನೆ ನೀಡಿತಾ ಸರ್ಕಾರ.?

Whatsapp Group Join
Telegram channel Join

ಕೆಲವೊಬ್ಬರಿಗೆ ಇತ್ತೀಚಿಗೆ ಪಿಂಚಣಿ ಹಣ ಬರುವುದು ನಿಂತಿರುತ್ತದೆ. ಇನ್ನು ಕೆಲವರಿಗೆ ಇತ್ತೀಚಿಗೆ ಹೊಸ ಅರ್ಜಿ ಸಲ್ಲಿಸಿದರೂ ಇನ್ನೂ ಕೂಡ ಹಣ ಬಂದಿರುವುದಿಲ್ಲ. ರಾಜ್ಯದಲ್ಲಿ ಮಾಶಾಸನ ಪಡೆಯುತ್ತಿರುವಂತಹ ಪ್ರತಿಯೊಬ್ಬರಿಗೂ ಕೂಡ ಈ ತಿಂಗಳು ಮುಗಿಯುವುದರೊಳಗಾಗಿ ಈ ಕೆಲಸವನ್ನ ಎಲ್ಲರೂ ಮಾಡಿಕೊಳ್ಳತಕ್ಕದ್ದು. ರಾಜ್ಯ ಸರ್ಕಾರದಿಂದ ಅಧೀಕೃತ ಆದೇಶವನ್ನ ಪ್ರಕಟಿಸಲಾಗಿದ್ದು, ಇಂದೇ ನೇರವಾಗಿ ಭೇಟಿ ಮಾಡಿಕೊಳ್ಳಿ.

ವೃದ್ದಾಪ್ಯ ವೇತನ, ವಿಧವಾ ವೇತನ ಸೇರಿ ವಿವಿಧ ಮಾಶಾಸನ ಫಲಾನುಭವಿಗಳಿಗೆ ಮುಖ್ಯ ಮಾಹಿತಿ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಪಿಂಚಣಿ ರದ್ದು, ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ವೇತನ, ವಿಧವಾ ವೇತನ, ಮೈತ್ರಿ, ಮನಸ್ವಿನಿ ಯೋಜನೆಯಡಿ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳು ಕಡ್ಡಾಯವಾಗಿ ನಿಮಮ ಅಂಚೆ ಖಾತೆ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮತ್ತು ಎನ್ ಪಿಸಿಐ(NPCI) ಮ್ಯಾಪಿಂಗ್ ಮಾಡಿಸಬೇಕಾಗುತ್ತದೆ.

ಇದನ್ನೂ ಕೂಡ ಓದಿ : Neethu Vanajakshi : ನೀತು ವನಜಾಕ್ಷಿ ಬಗ್ಗೆ ನಿಮಗೆ ಗೊತ್ತಿರದ ಕೆಲವೊಂದು ರಹಸ್ಯಗಳು / ನೀತು ಹಿಂದೆ ಹೇಗಿದ್ದರು ಗೊತ್ತಾ.?

ಸರ್ಕಾರವು ಫಲಾನುಭವಿಯ ಮಾಶಾಸನವನ್ನು ಆಧಾರ್ ಆಧಾರಿತ ಡಿಬಿಟಿ ಪಿಂಚಣಿಯನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗೆ ಪಾವತಿ ಮಾಡಿರುವುದರಿಂದ ಆಧಾರ್ ಕಾರ್ಡ್ ಲಿಂಕ್ ಮತ್ತು ಎನ್ ಪಿಸಿಐ(NPCI) ಮ್ಯಾಪಿಂಗ್ ಮಾಡಿಸದ ಫಲಾನುಭವಿಗಳ ಮಾಶಾಸನ ರದ್ದಾಗುವುದು. ಆದ್ದರಿಂದ ಎಲ್ಲಾ ಫಲಾನುಭವಿಗಳು ಮಾಶಾಸನ ಪಡೆಯುತ್ತಿರುವ ಆಯಾ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಕಡ್ಡಾಯವಾಗಿ ಆಧಾರ್ ಲಿಂಕ್ ಮತ್ತು ಎನ್ ಪಿಸಿಐ(NPCI) ಮ್ಯಾಪಿಂಗ್ ಮಾಡಿಸಬೇಕು ಎಂದು ತಹಶೀಲ್ದಾರ್ ಅವರು ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply