‘ಸಿನಿಮಾ ನನಗೆ ದೇವರಿದ್ದಂತೆ, ಅದನ್ನು ಆರಾಧಿಸುತ್ತೇನೆ, ಕಾಯಕವೇ ಕೈಲಾಸ’: ರಿಷಬ್ ಶೆಟ್ಟಿ

2022 ರ ಅಕ್ಟೋಬರ್ ಅಂತ್ಯಕ್ಕೆ ತೆರೆಕಂಡ ಅಪ್ಪಟ ಕನ್ನಡ ಚಿತ್ರ ‘ಕಾಂತಾರ’ದ ಅದ್ಭುತ ಯಶಸ್ಸು ತನ್ನನ್ನು ಬದಲಿಸಿದೆ. ಅದು ಯಾವ ಮಟ್ಟಿಗೆ ಎಂದರೆ ಮುಕ್ತ ಜಾಗದಲ್ಲಿ ಚರ್ಚೆಗೆ ಕುಳಿತುಕೊಳ್ಳಲು ಸಮಯ ಮತ್ತು ಸ್ಥಳದ ಕೊರತೆ ಮಾತ್ರ ಕಾಣುತ್ತಿದೆ ‘ಸಿನಿಮಾ ನನಗೆ ದೇವರಿದ್ದಂತೆ, ಅದನ್ನು ಆರಾಧಿಸುತ್ತೇನೆ, ಕಾಯಕವೇ ಕೈಲಾಸ’ಎನ್ನುತ್ತಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ.

‘ಕಾಂತಾರʼ ಚಿತ್ರ ಸೇರಿ ಎಲ್ಲಾ ದಾಖಲೆ ಉಡೀಸ್‌ ಮಾಡೋಕೆ ರಾಜಮೌಳಿ ಪ್ಲಾನ್‌ (RRR – 2)…!

WhatsApp Group Join Now
Telegram Group Join Now

ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್(RRR) ಸಿನಿಮಾ ಜಗತ್ತಿನಾದ್ಯಂತ ಮೆಚ್ಚುಗೆಯನ್ನ ಗಳಿಸಿದೆ. ಪಾಶ್ಚಿಮಾತ್ಯ ದೇಶಗಳಲ್ಲಿಯೂ ಕೂಡ ಆರ್‌ಆರ್‌ಆರ್‌(RRR)ಗೆ ಸಕಾರಾತ್ಮಕವಾದ ಕಾಮೆಂಟ್‌ಗಳು ಬಂದಿವೆ. ಹಾಲಿವುಡ್(Hollywood) ನಿರ್ದೇಶಕರು ಮತ್ತು ನಿರ್ಮಾಪಕರು ಕೂಡ ಆರ್‌ಆರ್‌ಆರ್‌ ಅನ್ನು ಹಾಡಿ ಹೊಗಳಿದ್ದಾರೆ.

ನಮ್ಮ ದೇಶದಿಂದ ಆರ್‌ಆರ್‌ಆರ್‌ ಸಿನಿಮಾ ಆಸ್ಕರ್ ಪ್ರವೇಶಕ್ಕೆ ಆಯ್ಕೆಯಾಗದಿದ್ದರೂ, ಯುಎಸ್ (US) ವಿತರಣಾ ಕಂಪನಿ ನಮ್ಮ ಆರ್‌ಆರ್‌ಆರ್‌ ಸಿನಿಮಾವನ್ನ ಆಸ್ಕರ್ ನಾಮನಿರ್ದೇಶನಕ್ಕೆ ಕಳುಹಿಸಿದೆ.

WhatsApp Group Join Now
Telegram Group Join Now

ಒಟ್ಟಾರೆಯಾಗಿ ಆರ್‌ಆರ್‌ಆರ್‌(RRR) ಚಿತ್ರ ಎಲ್ಲಾ ವಿಭಾಗಗಳಲ್ಲಿ ಆಸ್ಕರ್‌ಗೆ ಸ್ಪರ್ಧಿಸಲಿದೆ. ಅವರು ಅತ್ಯುತ್ತಮ ನಟ ಹಾಗೂ ನಿರ್ದೇಶಕರ ವಿಭಾಗದಲ್ಲಿ ಪ್ರಶಸ್ತಿಗಳನ್ನ ಬಾಚಿಕೊಳ್ಳುತ್ತಾರೆಯೇ ಎಂದು ನೋಡೋಣ. ಇದೀಗ ಆರ್‌ಆರ್‌ಆರ್‌(RRR) ಸಿನಿಮಾದ ಬಗ್ಗೆ ಮತ್ತೊಂದು ಹೊಸ ಚರ್ಚೆಯೊಂದು ಶುರುವಾಗಿದೆ. ಸಿನಿಮಾತಂಡ ಇತ್ತೀಚೆಗೆ ಈ ಸಿನಿಮಾವನ್ನ ಜಪಾನ್‌ನಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿದೆ. ರಾಜಮೌಳಿ, ಎನ್‌ಟಿಆರ್, ಹಾಗು ರಾಮ್ ಚರಣ್ ತಮ್ಮ, ತಮ್ಮ ಕುಟುಂಬ ಸಮೇತ ಅಲ್ಲಿಗೆ ತೆರಳಿ ಅಲ್ಲಿಯೇ ಉಳಿದು ಪ್ರಚಾರ ನಡೆಸಿದ್ದಾರೆ. ಚಿತ್ರ ಕೂಡ ಹಿಟ್ ಆಗಿದ್ದು, ಉತ್ತಮ ಕಲೆಕ್ಷನ್ ಮಾಡುತ್ತಿದೆಯಂತೆ. ಈಗ ಆರ್‌ಆರ್‌ಆರ್‌(RRR) ಭಾಗ 2 ಕುರಿತಾದ ಮಾತುಗಳು ಕೇಳಿ ಬರುತ್ತಿವೆ.

ಇನ್ನು ನನ್ನ ಎಲ್ಲಾ ಸಿನಿಮಾಗಳಿಗೆ ನನ್ನ ತಂದೆಯೇ ಕಥೆಗಳನ್ನು ಬರೆಯುತ್ತಾರೆ. ಆರ್‌ಆರ್‌ಆರ್‌(RRR)-2 ಗಾಗಿ ನಾವಿಬ್ಬರೂ ಚರ್ಚಿಸಿದ್ದೇವೆ. ಈ ಕಥೆಯ ಮೇಲೆ ತಂದೆಯವರು ಗಮನಹರಿಸಿದ್ದಾರೆ ಎಂದು ರಾಜಮೌಳಿ ಸೀಕ್ವೆಲ್ ಬಗ್ಗೆ ಸುಳಿವು ನೀಡಿದ್ದಾರೆ. ಆರ್‌ಆರ್‌ಆರ್‌(RRR) ಚಿತ್ರದಲ್ಲಿ ರಾಮ್-ಭೀಮ್ ಇಬ್ಬರೂ ಗೆಳೆಯರು. ಇಬ್ಬರೂ ಒಬ್ಬರಿಗೊಬ್ಬರು ಜೀವ ಕೊಡುವಂತಹ ಗೆಳೆಯರು. ಆದರೆ ಒಬ್ಬರನ್ನೊಬ್ಬರು ಸೋಲಿಸಲೇಬೇಕಾದ ಸನ್ನಿವೇಶಗಳು ಈ ಚಿತ್ರದಲ್ಲಿ ಬರುತ್ತವೆ. ಕೊಲ್ಲುವ ಹಂತಕ್ಕೆ ಬರುತ್ತಾರೆ. ಮತ್ತೊಬ್ಬರನ್ನು ಮಾಡಬೇಕೆಂದರೆ. ಸಿನಿಮಾ.. ಎರಡನ್ನೂ ತೋರಿಸೋದು ಹೇಗೆ.. ಹೇಗೆ ಕನ್ವಿನ್ಸ್ ಮಾಡೋದು.. ಮತ್ತೆ ಯಾವ ಕಾರಣಕ್ಕೆ ಒಬ್ಬರನ್ನೊಬ್ಬರು ಹೊಡೆದುಕೊಳ್ಳೋದು.. ಇನ್ನು ನಾಟು ನಾಟು ಹಾಡಿನ ರೀತಿ ಇನ್ನೊಂದು ಹಾಡನ್ನು ಹೇಗೆ ಹಾಕಲಿ ಎಂದಿದ್ದಾರೆ.

WhatsApp Group Join Now
Telegram Group Join Now

ಆದರೆ ನಿರ್ದೇಶಕ ರಾಜಮೌಳಿ ಈಗ ಖ್ಯಾತ ನಟ ಮಹೇಶ್ ಬಾಬು ಜೊತೆ ಚಿತ್ರ ಮಾಡಲು ರೆಡಿಯಾಗಿದ್ದಾರೆ. ಈ ಕಥೆ ಇನ್ನೂ ಅಂತಿಮಗೊಳಿಸಲಾಗಿಲ್ಲ. ಆರ್‌ಆರ್‌ಆರ್‌(RRR) ಅಂತಹ ಕಥೆ ಈಗ ಬರುವುದಿಲ್ಲ ಎನ್ನುತ್ತಾರೆ ನೆಟಿಜನ್‌ಗಳು. ರಾಜಮೌಳಿ ಯಾವ ರೀತಿಯ ಪ್ಲಾನ್ ಮಾಡುತ್ತಾರೋ ಕಾದು ನೋಡೋಣ. ಏನಂತೀರಾ.?

ಕಾಂತಾರ’ ಚಿತ್ರ ನನ್ನದೇ: ರಿಷಬ್ ಚಿತ್ರದ ಕುರಿತು ಯಶ್ ಪ್ರತಿಕ್ರಿಯೆ

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ `ಕಾಂತಾರ’ ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಅಬ್ಬರಿಸುತ್ತಿದೆ. ಬಾಕ್ಸಾಫೀಸ್‌ನಲ್ಲಿ ಚಿತ್ರ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಹೀಗಿರುವಾಗ ಪ್ಯಾನ್ ಇಂಡಿಯಾ ಸ್ಟಾರ್ ಯಶ್, ʻಕಾಂತಾರʼ ಚಿತ್ರ ನನ್ನದೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಿನಿಮಾದ ಕುರಿತು ಮಾತನಾಡಿದ್ದಾರೆ.

ಕಾಂತಾರ’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿ, ಸೈ ಎನಿಸಿಕೊಂಡಿದ್ದಾರೆ. ದೇಶಾದ್ಯಂತ ಮೂಲೆ ಮೂಲೆಯಲ್ಲೂ ‘ಕಾಂತಾರ’ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹೀಗಿರುವಾಗ ಪ್ಯಾನ್ ಇಂಡಿಯಾ ಸ್ಟಾರ್ ನಟ ‘ಯಶ್’, ಈಗ `ಕಾಂತಾರ’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ‘ಯಶ್’ ನೀಡಿದ ಸಂದರ್ಶನದಲ್ಲಿ `ಕಾಂತಾರ’ ಚಿತ್ರ ನನ್ನದೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಾಂತಾರ’ ಚಿತ್ರ ನನ್ನದೇ. ಕಾಂತಾರ ಕರ್ನಾಟಕದ ಸಿನಿಮಾ. ನಮ್ಮ ಚಿತ್ರಕ್ಕೆ ಎಲ್ಲಾ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ ಎಂದು ನಟ ‘ಯಶ್’ ಸಿನಿಮಾದ ಬಗ್ಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. `ಗರುಡ ಗಮನ ವೃಷಭ ವಾಹನ’, `ಚಾರ್ಲಿ 777′ ಚಿತ್ರಗಳು ಗಡಿ ಮೀರಿ ಒಳ್ಳೆಯ ರೀಚ್ ಪಡೆದಿದೆ. ಇವಾಗ ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ ಎಂದು ನಟ ಯಶ್ ಮಾತನಾಡಿದ್ದಾರೆ. ಇನ್ನೂ ನಾನು ಪ್ಯಾನ್ ಇಂಡಿಯಾ ನಟನಾಗಿದ್ದರೂ, ನನಗೆ ಕನ್ನಡವೇ ಮೊದಲು ಎಂದು ನಟ ಯಶ್ ಈ ವೇಳೆ ಹೇಳಿದ್ದಾರೆ.

ಇನ್ನೂ ಹೆಚ್ಚಿನ ಮಾಹಿತಿಗಳಿಗಾಗಿ ‘Just Kannada’ ವೆಬ್ ಸೈಟ್ ಲೈಕ್ ಮತ್ತು ಶೇರ್ ಮಾಡಿ.

Leave a Reply