‘ಕಾಂತಾರ’ ಚಿತ್ರ ನನ್ನದೇ: ರಿಷಬ್ ಚಿತ್ರದ ಕುರಿತು ಯಶ್ ಪ್ರತಿಕ್ರಿಯೆ

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ `ಕಾಂತಾರ’ ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಅಬ್ಬರಿಸುತ್ತಿದೆ. ಬಾಕ್ಸಾಫೀಸ್‌ನಲ್ಲಿ ಚಿತ್ರ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಹೀಗಿರುವಾಗ ಪ್ಯಾನ್ ಇಂಡಿಯಾ ಸ್ಟಾರ್ ಯಶ್, ʻಕಾಂತಾರʼ ಚಿತ್ರ ನನ್ನದೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಿನಿಮಾದ ಕುರಿತು ಮಾತನಾಡಿದ್ದಾರೆ.

ಕಾಂತಾರ’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿ, ಸೈ ಎನಿಸಿಕೊಂಡಿದ್ದಾರೆ. ದೇಶಾದ್ಯಂತ ಮೂಲೆ ಮೂಲೆಯಲ್ಲೂ ‘ಕಾಂತಾರ’ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹೀಗಿರುವಾಗ ಪ್ಯಾನ್ ಇಂಡಿಯಾ ಸ್ಟಾರ್ ನಟ ‘ಯಶ್’, ಈಗ `ಕಾಂತಾರ’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ‘ಯಶ್’ ನೀಡಿದ ಸಂದರ್ಶನದಲ್ಲಿ `ಕಾಂತಾರ’ ಚಿತ್ರ ನನ್ನದೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಾಂತಾರ’ ಚಿತ್ರ ನನ್ನದೇ. ಕಾಂತಾರ ಕರ್ನಾಟಕದ ಸಿನಿಮಾ. ನಮ್ಮ ಚಿತ್ರಕ್ಕೆ ಎಲ್ಲಾ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ ಎಂದು ನಟ ‘ಯಶ್’ ಸಿನಿಮಾದ ಬಗ್ಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. `ಗರುಡ ಗಮನ ವೃಷಭ ವಾಹನ’, `ಚಾರ್ಲಿ 777′ ಚಿತ್ರಗಳು ಗಡಿ ಮೀರಿ ಒಳ್ಳೆಯ ರೀಚ್ ಪಡೆದಿದೆ. ಇವಾಗ ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ ಎಂದು ನಟ ಯಶ್ ಮಾತನಾಡಿದ್ದಾರೆ. ಇನ್ನೂ ನಾನು ಪ್ಯಾನ್ ಇಂಡಿಯಾ ನಟನಾಗಿದ್ದರೂ, ನನಗೆ ಕನ್ನಡವೇ ಮೊದಲು ಎಂದು ನಟ ಯಶ್ ಈ ವೇಳೆ ಹೇಳಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply