ದಿನನಿತ್ಯ ಜೀವನದಲ್ಲಿ ಈ ತಪ್ಪುಗಳನ್ನು ಮಾಡಿದರೆ ಶನಿಕಾಟ ಗ್ಯಾರಂಟಿ.!

ಹೊರಗಡೆ ಹೋಗಿ ಬಂದಾಗ ಕಾಲನ್ನು ತೊಳೆಯುವುದು ಪದ್ಧತಿ. ಹೀಗೆ ನಮ್ಮ‌ದಿನನಿತ್ಯ ಜೀವನದಲ್ಲಿ ಹಲವಾರು ಕೆಲಸವನ್ನು ಗಮನಿಸದೆ ಹೇಗೆಗೋ ಮಾಡಿತ್ತೇವೆ ಇದರಿಂದ ಶನಿಕಾಟ ನಮಗೆ ಉಂಟಾಗುತ್ತದೆ ದಾರಿದ್ರ ಒದಗಿತ್ತದೆ . ಅದಕ್ಕೆ ಈ ಕೆಳಗಿನ ತಪ್ಪನ್ನು ಮಾಡದೆ ಜಾಗರುಕರಾಗಿರಿ.

ಚಪ್ಪಲಿಯನ್ನು ಹಾಕಿಕೊಂಡೇ ಕಾಲು ತೊಳೆದರೆ ಈ ರೀತಿ ಮಾಡುವುದು ಒಳ್ಳೆಯ ಕ್ರಮವಲ್ಲ. ಎರಡನೇಯ ಕ್ರಮವೆಂದರೆ ನಾವು ಕಾಲು ತೊಳೆಯುವಾಗ ಒಂದು ಕಾಲಿನಿಂದ ಇನ್ನೊಂದು ಕಾಲನ್ನು ಉಜ್ಜಿಕೊಳ್ಳುತ್ತೇವೆ. ಈ ರೀತಿ ಮಾಡಲೇಬಾರದು. ಇದರಿಂದ ದಾರಿದ್ರ್ಯ ಸಂಭವಿಸುತ್ತದೆ. ಅಲ್ಲದೇ ಕಾಲು ತೊಳೆಯುವಾಗ ಅಥವಾ ತೊಳೆಸುವಾಗ ಹಿಮ್ಮಡಿಯು ಸಂಪೂರ್ಣ ಒದ್ದೆ ಆಗಲೇಬೇಕು. ಇಲ್ಲದೇ ಇದ್ದಲ್ಲಿ ಶನಿಯ ಕಾಟವೆಂಬುದು ನಿಶ್ಚಿತ.

ಶನಿಯ ಪ್ರವೇಶವೆಂಬುದು ಮಂಡಿಯ ಕೆಳಭಾಗದಲ್ಲಾಗುತ್ತದೆ. ಅಲ್ಲಿಂದ ಅವನ ಪ್ರಭಾವ ಆರಂಭವಾಗುತ್ತದೆ ಎಂದು. ಆದಕಾರಣ ಪಾದತೊಳೆಯುವಾಗ ಹಿಮ್ಮಡಿ ಒದ್ದೆಯಾಗಬೇಕು ಮತ್ತು ಒಂದು ಕಾಲಿಂದ ಇನ್ನೊಂದು ಕಾಲನ್ನು ಉಜ್ಜಬಾರದು.

ಕೆಲವು ಶನಿ ಪ್ರವೇಶವಾಗುವ ಸಮಯಗಳು ಮತ್ತು ಸಂದರ್ಭಗಳನ್ನು ಶಾಸ್ತ್ರೀಯವಾಗಿ ಹೇಳುವುದಾದರೆ – ಮುಸ್ಸಂಜೆಯಲ್ಲಿ ಮಲಗುವುದು, ಮುಸ್ಸಂಜೆಯಲ್ಲಿ ಆಹಾರ ಸೇವಿಸುವುದು, ಕಾಲು ತೊಳೆಯುವುವಾಗ ಹಿಮ್ಮಡಿ ಒದ್ದೆಯಾಗದಿರುವುದು, ಕಾಲಿಂದ ಕಾಲನ್ನು ತಿಕ್ಕುವುದು, ಕತ್ತರಿಯಲ್ಲಿ (ಎರಡು ಬೆರಳುಗಳಿಂದ) ಹಣ ನೀಡುವುದು, ರಾತ್ರಿ ಕಸಗುಡಿಸುವುದು, ಉಣ್ಣುವ ಬಟ್ಟಲನ್ನು ಕಾಲಿಂದ ಮೆಟ್ಟುವುದು, ಮಂಗಳವಾರ ಕ್ಷೌರ ಮಾಡಿಸುವುದು ಇತ್ಯಾದಿ ಕೆಲವು ಸಂದರ್ಭಗಳು ನಮ್ಮ ಅವನತಿಗೆ ಕಾರಣವಾಗುತ್ತದೆ. ಶನಿ ಕಾಟವೆಂದರೆ ಅಥವಾ ಶನಿಪ್ರವೇಶವೆಂದರೆ ನಾವು ಮಾಡಿದ ತಪ್ಪಿಗೆ ಶಿಕ್ಷೆಯಷ್ಟೆ. ಆದ ಕಾರಣ ಇಂತಹ ಕೆಲವು ಸಂದರ್ಭಗಳನ್ನು ನಾಜೂಕಾಗಿ ಮಾಡಬೇಕು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply