Shakti Yojane : ಮಹಿಳೆಯರ ಉಚಿತ ಬಸ್ ಪ್ರಯಾಣ ಬಂದ್! – ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾಕಿಂಗ್ ಸುದ್ದಿ! ಬೇಗನೆ ನೋಡಿ

Shakti Yojane : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಜಾರಿಯಾದ ಮೊದಲ ಗ್ಯಾರಂಟಿ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ. ಈ ಯೋಜನೆ ಯಶಸ್ವಿಯಾಗಿದೆ ಅಂತ ಸರಕಾರವೇನು ಹೇಳುತ್ತೆ? ಆದರೆ ಅದನ್ನು ಮುಂದಿನ ಬಹಳ ತಿಂಗಳುಗಳವರೆಗೆ ಮುಂದುವರಿಸಿಕೊಂಡು ಹೋಗುವುದೇ ಸವಾಲಾಗಿದೆ. ಏಕೆಂದರೆ ಕೆಎಸ್ಸಾರ್ಟಿಸಿ ಹಲವಾರು ವರ್ಷಗಳಿಂದ ಹತ್ತಾರು ಸಮಸ್ಯೆಗಳಿಂದ ಕಂಗೆಟ್ಟು ಹೋಗಿದೆ.

ಇದನ್ನೂ ಕೂಡ ಓದಿ : 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ – ಇನ್ನು ಮುಂದೆ ಪ್ರತಿ ತಿಂಗಳಿಗೆ ₹5000 ಹಣ – ವೃದ್ಧರ ಪಿಂಚಣಿ ಗುಡ್ ನ್ಯೂಸ್.!

ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಶುರುವಾದ ಶಕ್ತಿ ಯೋಜನೆಯಿಂದ ಮಹಿಳೆಯರ ಓಡಾಟದ ಸಂಖ್ಯೆ ಹೆಚ್ಚಾಗಿದ್ದು, ಆದರೆ ಈ ಯೋಜನೆಯಿಂದಾಗಿ ಅಗತ್ಯ ಸಿಬ್ಬಂದಿ ಹಾಗು ವಾಹನಗಳ ಅಲಭ್ಯತೆಯಿಂದ ಆದಷ್ಟು ಹಳ್ಳಿಗಳಿಗೆ ಬಸ್ ಸಂಚಾರವೇ ನಿಂತುಹೋಗಿದೆ. ಹೀಗೆ ಬಲ ಕಳೆದುಕೊಂಡ ಸಾರಿಗೆ ಸಂಸ್ಥೆಗಳಿಗೆ ಈಗ ಶಕ್ತಿ ಯೋಜನೆ ಅನುಷ್ಠಾನ ಸವಾಲಾಗಿ ಪರಿಣಮಿಸಿದ್ದು, ರಾಜ್ಯದಲ್ಲಿರೋ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಕಳೆದ ಏಳು ವರ್ಷಗಳಿಂದ ಸಿಬ್ಬಂದಿ ನೇಮಕಾತಿಯೇ ನಡೆದಿಲ್ಲ.

ಇನ್ನು ನಾಲ್ಕು ವರ್ಷಗಳಿಂದ ಬಿಎಂಟಿಸಿ ಕೆಲ ಬಸ್ ಖರೀದಿಸಿದ್ದು ಬಿಟ್ಟರೆ, ಒಂದೇ ಒಂದು ವಾಹನ ಖರೀದಿಸಿಲ್ಲ. ಆದರೆ ಶಕ್ತಿ ಯೋಜನೆ ಅನುಷ್ಠಾನದ ನಂತರ ಪ್ರತಿದಿನ ಸಂಚರಿಸುವ ಪ್ರಯಾಣಿಕರ ಸಂಖ್ಯೆ 92 ಲಕ್ಷದಿಂದ 1 ಕೋಟಿ ದಾಟಿದೆ. ಹೀಗಾಗಿ ಇರುವ 23,000 ಬಸ್‌ಗಳಲ್ಲಿ ಪ್ರತಿ ದಿನ 500 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದು, ಹಳೆಯ ಬಸ್‌ಗಳು ಪ್ರಯಾಣಿಕರನ್ನು ಹೊತ್ತು ಸಾಗುತ್ತಿವೆ. ಅಧಿಕ ಮಹಿಳೆಯರ ಪ್ರಯಾಣದಿಂದಾಗಿ ಜನಸಾಮಾನ್ಯರಿಗೆ, ವಿಶೇಷವಾಗಿ ವಿದ್ಯಾರ್ಥಿಗಳ ಸಂಚಾರಕ್ಕೆ ಸಂಚಕಾರ ತಂದಿಟ್ಟಿದೆ. ಸಾಮರ್ಥ್ಯ ಮೀರಿ ಹಳೆಯ ಬಸ್ ಗಳನ್ನು ಓಡಿಸುತ್ತಿರುವುದು ಸುರಕ್ಷಿತವೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಕೂಡ ಓದಿ : Gold Price Today : ಚಿನ್ನದ ಖರೀದಿಗೆ ಇದೇ ಒಳ್ಳೆಯ ಟೈಮಾ.? ಬಂಗಾರದ ಬೆಲೆಯಲ್ಲಿ ಹಾವು-ಏಣಿಯಾಟ.!

ಇನ್ನು ಶಾಲೆ ಆರಂಭ ಹಾಗು ಮುಕ್ತಾಯದ ಸಮಯದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ಹೆಚ್ಚುವರಿ ಬಸ್ ನೀಡಲು ವಾಹನಗಳಿಲ್ಲದ್ದರಿಂದ ದೊಡ್ಡಿಯಲ್ಲಿ ನಿಂತ ಕುರಿಗಳಂತೆ ಮಕ್ಕಳು, ವೃದ್ದರು ಬಸ್ ಗಳಲ್ಲಿ ಸಂಚರಿಸುತ್ತಿದ್ದಾರೆ. ಹೀಗೆ ಇದು ಮುಂದುವರೆದರೆ ಮುಂದೆ ಕೆಎಸ್ಆರ್ಟಿಸಿ ದೊಡ್ಡ ಸಮಸ್ಯೆ ಅನುಭವಿಸಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply