Gruhalakshmi Payment : ಗೃಹಲಕ್ಷ್ಮಿ 6ನೇ ಮತ್ತು 7ನೇ ಕಂತಿನ ಹಣ ಜಮಾ ಆಗಿಲ್ಲ ಅಂದ್ರೆ – ಈ ಕೆಲಸ ಎಲ್ಲರಿಗೂ ಕಡ್ಡಾಯ

Gruhalakshmi Payment : ಗೃಹಲಕ್ಷ್ಮಿ ಆರನೇ ಮತ್ತು ಏಳನೇ ಕಂತಿನ ಹಣ ಇನ್ನು ಕೂಡ ನಿಮ್ಮ ಖಾತೆಗೆ ಜಮಾ ಆಗಿಲ್ಲ ಅಂದ್ರೆ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ. ಅಧಿಕೃತವಾಗಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಆದೇಶವನ್ನು ಹೊರಡಿಸಲಾಗಿತ್ತು. ಪ್ರತಿಯೊಬ್ಬ ಗೃಹಲಕ್ಷ್ಮಿಯರು ಕಡ್ಡಾಯವಾಗಿ ತಿಳಿದು ಕೊಳ್ಳಲೇಬೇಕಾದ ಮಾಹಿತಿ ಆಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇನ್ನು ಕೂಡ ಮೊದಲನೇ ಕಂತಿನ ಹಣವೇ ಬಂದಿಲ್ಲ ಹಾಗು ಬಹಳಷ್ಟು ಜನರಿಗೆ ಎರಡನೇ ಮತ್ತು ಮೂರನೇ ಕಂತಿನ ಹಣ ಬಾಕಿಯಾಗಿದೆ.

ಇದನ್ನೂ ಕೂಡ ಓದಿ : Govt Scheme Updates : ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ – ಹಣ ಜಮಾ ಆಗುವುದಿಲ್ಲ – ಬಿಗ್ ಶಾಕಿಂಗ್ ನ್ಯೂಸ್, ಹೊಸ ರೂಲ್ಸ್ ಜಾರಿಗೆ.!

ಈ ರೀತಿಯ ಸಮಸ್ಯೆ ಇರುವ ಎಲ್ಲ ಫಲಾನುಭವಿಗಳಿಗೆ ಸರ್ಕಾರ, ಬಾಕಿಯಿರುವ ಕಂತಿನ ಹಣವನ್ನ ಬಿಡುಗಡೆ ಮಾಡಲಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದಿರಲು ಕಾರಣವೇನೆಂದರೆ, ಇಲ್ಲಿಯವರೆಗೂ ಬಹಳಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲ ಕಂತಿನ ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಹಾಗೆಯೇ ಇನ್ನು ಅಲ್ಪ ಸಂಖ್ಯೆಯ ಮಹಿಳೆಯರ ಖಾತೆಗೆ ಕೆಲವು ಕಂತುಗಳ ಹಣ ಜಮಾ ಆಗಿತ್ತು. ಇನ್ನು ಹಲವು ಕಂತುಗಳು ಬರಲು ಬಾಕಿಯಿದೆ.

ಆದರೆ ಇನ್ನೂ ಹಲವಾರು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ. ಕಾರಣ ನೋಡುವುದಾದರೆ ಎಷ್ಟೋ ಮಹಿಳೆಯರ ಖಾತೆಗೆ ಕೆವೈಸಿ ಆಗದೇ ಇರುವುದು, ಆಧಾರ್ ಲಿಂಕ್ ಆಗದೇ ಇರುವುದು, ಅರ್ಜಿ ಸಲ್ಲಿಸುವಾಗ ಸರಿಯಾದ ದಾಖಲೆಗಳನ್ನು ನೀಡದೇ ಇರುವುದು ಕೂಡ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಕೆಲವು ತಾಂತ್ರಿಕ ದೋಷಗಳು ಕೂಡ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಬಾರದಂತೆ ಮಾಡಿದೆ. ಅದೆಷ್ಟೋ ಮಹಿಳೆಯರ ಬ್ಯಾಂಕ್ ಖಾತೆಗೆ ಇನ್ನು ಒಂದು ಕಂತಿನ ಹಣವೂ ಬಂದಿಲ್ಲ.

ಇದನ್ನೂ ಕೂಡ ಓದಿ : eShram Card Benifits : ಈ-ಶ್ರಮ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್/ ಪ್ರತಿ ತಿಂಗಳಿಗೆ ₹3000 ಹಣ

ಈ ರೀತಿಯ ಸಮಸ್ಯೆ ಇದ್ದರೆ ನಿಮ್ಮ ಹತ್ತಿರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಕ್ಕಿರುವ ಸ್ವೀಕೃತಿ ಪ್ರತಿ ಎಲ್ಲವನ್ನೂ ಕೊಟ್ಟು ನಿಮ್ಮ ಖಾತೆ ಯಾಕೆ ಹಣ ಬಂದಿಲ್ಲ.? ಎನ್ನುವ ಮಾಹಿತಿಯನ್ನ ಪಡೆಯಿರಿ. ಯಾವ ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ ಎನ್ನುವುದನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿಮಗೆ ಮಾಹಿತಿ ನೀಡುತ್ತಾರೆ. ಅದರ ಮೂಲಕ ಆ ಸಮಸ್ಯೆಯನ್ನ ಬಗೆಹರಿಸಿ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವ ಹಾಗೆ ಮಾಡಬಹುದು.

ಇದನ್ನೂ ಕೂಡ ಓದಿ : ಹಸ್ತಮೈಥುನವು ನನ್ನನ್ನು ಕೆಟ್ಟ ವ್ಯಕ್ತಿಯನ್ನಾಗಿ ಮಾಡುತ್ತದೆಯೇ.? – ಆರೋಗ್ಯ ಮಾಹಿತಿ

ಸಿಡಿಪಿಒ ಕಚೇರಿಯಲ್ಲಿ ನಿಮ್ಮ ಅರ್ಜಿ ಅನುಮೋದನೆ ಬಾಕಿಯಿದ್ದರೆ, ಆ ಪ್ರಕ್ರಿಯೆಯನ್ನ ಪೂರ್ಣಗೊಳಿಸಿಕೊಳ್ಳಿ. ಇದಾದ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದರೆ ಪೆಂಡಿಂಗ್ ಇರುವ ಹಣ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಯಾಕೆಂದರೆ, ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿರುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply