Govt Scheme : ಸರ್ಕಾರದ ಭರ್ಜರಿ ಆಫರ್.!!‌ ಹಸು, ಕುರಿ, ಕೋಳಿ ಹಂದಿ ಸಾಕಾಣಿಕೆಗೆ ಸಿಗಲಿದೆ 50%ರಷ್ಟು ಸಹಾಯಧನ.!

Govt Scheme : ನಮಸ್ಕಾರ ಸ್ನೇಹಿತರೇ, ಕೋವಿಡ್ ಸಮಯದಲ್ಲಿ ಅನೇಕ ಯುವಕರು ತಮ್ಮ ಕೆಲಸ ಕಳೆದುಕೊಂಡರು. ಹೀಗೆ ಕೆಲಸ ಕಳೆದುಕೊಂಡವರಲ್ಲಿ ಅನೇಕರು ತಮ್ಮ ಊರಿಗೆ ವಾಪಸ್ ಆಗಿ ಸ್ವಂತ ಉದ್ಯೋಗ ಆರಂಭಿಸಿದ್ದಾರೆ. ಹಾಗು ಇನ್ನು ಕೆಲವರು ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಅಂತಹ ಯುವಕರಿಗಾಗಿ ಸ್ವಂತ ಉದ್ಯೋಗ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ ಈಗಾಗಲೇ ಹೊಸ ಯೋಜನೆಯನ್ನ ಜಾರಿಗೆ ತಂದಿದೆ. ಏನು ಈ ಯೋಜನೆ.? ಯಾರೆಲ್ಲಾ ಈ ಯೋಜನೆಯ ಲಾಭವನ್ನ ಪಡೆಯಬಹುದು.? ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಹೌದು, ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯಲ್ಲಿ ನೀವು ಫಲಾನುಭವಿಯಾದರೆ ನಿಮಗೆ 5೦% ರಷ್ಟು ಸಹಾಯಧನ ಸಿಗಲಿದೆ. ಇದರಿಂದಾಗಿ ನಿಮ್ಮ ಆರ್ಥಿಕ ವೆಚ್ಚ ತಗ್ಗಲಿದೆ. ನೀವೇನಾದರೂ ಕೋಳಿ, ಕುರಿ, ಮೇಕೆ, ಹಂದಿಗಳಿಗಾಗಿ ರಸಮೇವು ಘಟಕ ಸ್ಥಾಪನೆ ಮಾಡಬೇಕು ಎನ್ನುವ ಹಂಬಲ ಹೊಂದಿದ್ದರೆ, ನೀವು ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ(NLM) ಅಡಿಯಲ್ಲಿ 5೦% ರಷ್ಟು ಸಹಾಯಧನ ಪಡೆಯಬಹುದು.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Veterinary Department : ಕುರಿ, ಮೇಕೆ, ಹಸು, ಎಮ್ಮೆ ಆಕಸ್ಮಿಕ ಸಾವಿಗೆ ₹10,000/- ಗಳಷ್ಟು ಸಹಾಯಧನ – ಅನುಗ್ರಹ ಯೋಜನೆ ಜಾರಿಗೆ.!

ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ(NLM) ಅಡಿಯಲ್ಲಿ ಗ್ರಾಮೀಣ ಭಾಗದ ನಿರುದ್ಯೋಗಿ ಅಥವಾ ಸ್ವ-ಉದ್ಯೋಗ ಮಾಡಲು ಬಯಸುವ ಜನರ ಅಭಿವೃದ್ಧಿಗಾಗಿ ಅವರು ಮಾಡಬಹುದಾದ ಕೋಳಿ ಸಾಕಾಣಿಕೆ, ಕುರಿ, ಮೇಕೆ, ಹಂದಿ ಸಾಕಾಣಿಕೆ ಹಾಗೂ ರಸಮೇವು ಘಟಕ ಸ್ಥಾಪನೆಗೆ 5೦%ರಷ್ಟು ಸಹಾಯಧನವನ್ನ ನೀಡಲಾಗುತ್ತದೆ. ಹಾಗಾಗಿಯೇ ರೈತರು ಮಾತ್ರ ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ(NLM) ಅಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

ಗ್ರಾಮೀಣ ಕೋಳಿ ಉದ್ದಿಮೆ(Poutry Farm) :-

ಗ್ರಾಮೀಣ ಕೋಳಿ ಉದ್ದಿಮೆ(Poutry Farm)ಕ್ಕಾಗಿ 50 ಲಕ್ಷ ರೂ. ವರೆಗೆ ನಿಮಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಇದರಲ್ಲಿ 25 ಲಕ್ಷ ರೂ. ಸಹಾಯ ಧನ ಆಗಿರುತ್ತದೆ.

ಕುರಿ-ಕೋಳಿ ಸಂವರ್ಧನಾ ಘಟಕ ಸ್ಥಾಪನೆ :-

ಈ ಯೋಜನೆಗಳ ಅಡಿಯಲ್ಲಿ 1 ಕೋಟಿ ರೂ. ಗಳವರೆಗೆ ಸಾಲ ಸೌಲಭ್ಯವನ್ನು ನೀವು ಪಡೆಯಬಹುದು. ನೀವು ಎಷ್ಟು ಪ್ರಾಣಿಗಳನ್ನು ಸಾಕುತ್ತೀರಿ ಎನ್ನುವ ಆಧಾರದ ಅನ್ವಯ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ನಿಮಗೆ ನೀಡಲಾದ ಸಾಲದಲ್ಲಿ ಶೇ.5೦ ಸಹಾಯಧನವಾಗಿರುತ್ತದೆ.

WhatsApp Group Join Now
Telegram Group Join Now

ಹಂದಿ ಸಂವರ್ಧನಾ ಘಟಕ :-

ಹಂದಿಗಳ ಸಾಕಾಣಿಕೆಗೆ 6೦ ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗುತ್ತದೆ. ಮೇವು ಉತ್ಪಾದನಾ ಘಟಕದ ಸ್ಥಾಪನೆ 1 ಕೋಟಿ ರೂ. ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಇದರಲ್ಲಿ ನೀವು 5೦ ಲಕ್ಷ ರೂ. ಸಾಲದ ರೂಪದಲ್ಲಿ ಇರುತ್ತದೆ.

ಇದನ್ನೂ ಕೂಡ ಓದಿ : Ration Card : ಪಡಿತರ ಚೀಟಿ ಮಾಡಿಸಲು ಅರ್ಜಿ ಸ್ವೀಕಾರ.! ಹೊಸ ರೇಷನ್ ಕಾರ್ಡ್ ಕಾಯುತ್ತಿರುವವರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್.!

ಬೇಕಾಗುವ ದಾಖಲೆಗಳೇನು.?

  • ವಿಸ್ತೃತಾ ಯೋಜನಾ ವರದಿ,
  • ಭೂಮಿ ಪಹಣಿ ಪತ್ರಿಕೆ,
  • ಭೂಮಿ ಇಲ್ಲದವರು ಬಾಡಿಗೆ ಭೂಮಿ ಪಡೆದಿರುವುದರ ಕರಾರು ಪತ್ರ,
  • ಆಧಾರ್ ಕಾರ್ಡ್(Aadhar Card),
  • ಪಾನ್ ಕಾರ್ಡ್(Pan Card),
  • ವಿಳಾಸ ದೃಢಿಕರಣ ಪತ್ರ,
  • 6 ತಿಂಗಳ ಬ್ಯಾಂಕ್ ವಹಿವಾಟು ದಾಖಲೆ,
  • ತರಬೇತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply