Ration Card : ಪಡಿತರ ಚೀಟಿ ಮಾಡಿಸಲು ಅರ್ಜಿ ಸ್ವೀಕಾರ.! ಹೊಸ ರೇಷನ್ ಕಾರ್ಡ್ ಕಾಯುತ್ತಿರುವವರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್.!

Ration Card : ನಮಸ್ಕಾರ ಸ್ನೇಹಿತರೇ, ದಿನದಿಂದ ದಿನಕ್ಕೆ ಪಡಿತರ ಚೀಟಿಗೆ(RationCard) ಸಂಬಂಧಪಟ್ಟ ಹಾಗೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಒಂದು ಕಡೆ ಫಲಾನುಭವಿಗಳು ತಮ್ಮ ಬಳಿ ಇರುವಂತಹ ಬಿಪಿಎಲ್(BPL) ರೇಷನ್ ಕಾರ್ಡ್ ನ್ನು ಸರಿಯಾದ ಬಳಕೆಯನ್ನು ಮಾಡಿಕೊಳ್ಳದೆ ಇರುವಂತ ಹಿನ್ನೆಲೆಯಲ್ಲಿ ಸಾಕಷ್ಟು ಜನರ ಪಡಿತರ ಚೀಟಿಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ರಾಜ್ಯ ಸರ್ಕಾರವು ಅಂತಹ ಬಿಪಿಎಲ್(BPL) ಪಡಿತರ ಚೀಟಿಗಳನ್ನು ಕ್ಯಾನ್ಸಲ್ ಮಾಡಿಸುತ್ತಿದೆ. ಇನ್ನೊಂದು ಕಡೆ ಬಡ ಅರ್ಹ ಫಲಾನುಭವಿಗಳು ಬಿಪಿಎಲ್(BPL) ರೇಷನ್ ಕಾರ್ಡ್ ಗಾಗಿ ಇಷ್ಟು ದಿನಗಳು ಅರ್ಜಿಯನ್ನು ಸಲ್ಲಿಸಿ ಕಾಯುತ್ತಿದ್ದ ಜನರಿಗೆ ಸರ್ಕಾರ ಸಿಹಿಸುದ್ದಿಯನ್ನ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಹೊಸ ಪಡಿತರ ಚೀಟಿಗಳನ್ನ ವಿತರಣೆಯ ಮಾಡಲಾಗುವುದು.

ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ :-

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಹಲವು ಯಶಸ್ವೀ ಯೋಜನೆಗಳನ್ನ ಬಿಡುಗಡೆ ಮಾಡುತ್ತಿದೆ. ಈ ಎಲ್ಲ ಯೋಜನೆಗಳು ಸಾಮಾನ್ಯರಿಗೆ ಹಾಗೂ ಬಡತನದ ರೇಖೆಗಿಂತ ಕೆಳಗಿರುವಂತ ಹೆಚ್ಚು ಅನುಕೂಲ ಮಾಡಿಕೊಡುವಂತಹ ಯೋಜನೆಯು ಇದಾಗಿದೆ. ಇದರಿಂದಾಗಿ ಯಾರು ಬಿಪಿಎಲ್ ಪಡಿತರ ಚೀಟಿಗಳನ್ನ(Ration Card) ಹೊಂದಿಲ್ಲವೋ, ಅಂತಹವರಿಗೆ ರಾಜ್ಯ ಸರಕಾರದ ಹಲವು ಯಶಸ್ವೀ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಇರಬಹುದು.

ಹೀಗಾಗಿ ಬಿಪಿಎಲ್ ಪಡಿತರ ಚೀಟಿಗಾಗಿ(Ration Card) ಈಗಾಗಲೇ ಅರ್ಜಿಯನ್ನ ಸಲ್ಲಿಸಿ ಕಾಯುತ್ತಿದ್ದವರಿಗೆ ರಾಜ್ಯ ಸರ್ಕಾರವು ಸಿಹಿಸುದ್ಧಿಯನ್ನ ನೀಡಿದೆ. ಕಳೆದ ಎರಡೂವರೆ ವರ್ಷಗಳಿಂದ ರೇಷನ್ ಕಾರ್ಡ್ ವಿತರಣೆ ಆಗದೇ, ಹಾಗೆ ಉಳಿದಿದ್ದ ಸುಮಾರು ಮೂರು ಲಕ್ಷದಷ್ಟು ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡವುದಕ್ಕೆ ರಾಜ್ಯ ಸರ್ಕಾರವು ನಿರ್ಧರಿಸಿದೆ. ಇದರಲ್ಲಿ ಬಿಪಿಎಲ್(BPL) ಹಾಗೂ ಎಪಿಎಲ್(APL) ರೇಷನ್ ಕಾರ್ಡ್ ಗಳನ್ನು ಅದನ್ನು ಫಲಾನುಭವಿಗಳಿಗೆ ಅವರ ಆದಾಯಕ್ಕೆ ತಕ್ಕಂತೆಯೇ ಪಡಿತರ ಚೀಟಿಯ ವಿತರಣೆಯನ್ನು ಮಾಡಲಾಗುವುದು.

ಹೊಸ ರೇಷನ್ ಕಾರ್ಡ್(Ration Card)ಗೆ ಅರ್ಜಿ :-

ಇನ್ನು ಹೊಸದಾಗಿಯೇ ಪಡಿತರ ಚೀಟಿಗಳನ್ನು ಪಡೆದುಕೊಳ್ಳಲು ಬಯಸುವವರು ಅರ್ಜಿಯನ್ನ ಸಲ್ಲಿಸಬಹುದು. ಇದರ ಜೊತೆಗೆ ತಿದ್ದುಪಡಿ ಸಹ ಮಾಡಿಕೊಳ್ಳಲು ಕೂಡ ಅವಕಾಶವನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವವರು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಹೋಗಿ ಪಡಿತರ ಚೀಟಿಗೆ ಅರ್ಜಿಯನ್ನ ಸಲ್ಲಿಸಬಹುದು. ಹಾಗೂ ರೇಷನ್ ಕಾರ್ಡ್(Ration Card) ನಲ್ಲಿ ಅಗತ್ಯವಿರುವಂತಹ ನವೀಕರಣವನ್ನು ಕೂಡ ಮಾಡಿಸಿಕೊಳ್ಳಬಹುದು.

ಅರ್ಜಿಯನ್ನು ಸಲ್ಲಿಸಲು ಬೇಕಾದ ದಾಖಲೆಗಳು :-

  • ಆಧಾರ್ ಕಾರ್ಡ್,
  • ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ,
  • ಆಧಾ‌ರ್ ಲಿಂಕ್ ಆಗಿರುವಂತ ಮೊಬೈಲ್ ನಂಬರ್,
  • ವಿಳಾಸದ ಪುರಾವೆ,
  • ಅರ್ಜಿಯನ್ನು ಸಲ್ಲಿಸುವಾಗ ಕುಟುಂಬದ ಎಲ್ಲಾ ಸದಸ್ಯರುಗಳು ಕಡ್ಡಾಯವಾಗಿ ಸೇವಾ ಕೇಂದ್ರಕ್ಕೆ ಹೋಗಬೇಕು ಎನ್ನುವುದನ್ನು ನೆನಪಿಡಬೇಕಾದ ವಿಷಯ.

ಇನ್ನು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಮಾರ್ಚ್ 9ನೇ ತಾರೀಖಿನಿಂದ ಅವಕಾಶವನ್ನು ಮಾಡಿಕೊಡಲಾಗಿದೆ. ಅರ್ಜಿ ಸಲ್ಲಿಸಲು ಬಯಸುವವರು ನಿಮ್ಮ ಹತ್ತಿರದಲ್ಲಿರುವ ಸೇವಾ ಕೇಂದ್ರದಲ್ಲಿ ಮಾಹಿತಿಯನ್ನು ಪಡೆದುಕೊಂಡು ಸ್ಥಳಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಪಡಿತರ ಚೀಟಿ ತಿದ್ದುಪಡಿಯನ್ನು ಸಹ ಮಾಡಿಕೊಳ್ಳಬಹುದಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply