Govt Scheme Update : ಗೃಹಲಕ್ಷ್ಮೀ ಹಾಗು ಅನ್ನಭಾಗ್ಯ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಬಿಗ್ ಅಪ್‌ಡೇಟ್!

Govt Scheme Update : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದ ಎಲ್ಲ ಮಹಿಳೆಯರ ಅನುಕೂಲಕ್ಕಾಗಿ ಹಲವು ಯಶಸ್ವೀ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಲಾಗಿದ್ದು, ಅದರಲ್ಲಿ ಮಹಿಳೆಯರದ್ದೇ ಸಿಂಹಪಾಲು. ಮಹಿಳೆಯರಿಗಾಗಿ ಶಕ್ತಿ ಯೋಜನೆ(Shakti Scheme), ಗೃಹಲಕ್ಷ್ಮಿ ಯೋಜನೆ(Gruhalakshmi) ಜಾರಿಗೊಳಿಸಲಾಗಿದ್ದು, ಅನ್ನಭಾಗ್ಯ(Annabhagya) ಯೋಜನೆಯಡಿ ಬಂದ ಹಣವನ್ನೂ ಕೂಡ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಜಮಾ ಮಾಡಲಾಗುವುದು.

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿ ಮಹಿಳೆಯರ ಬ್ಯಾಂಕ್ ಖಾತೆಗೆ 2000 ರೂ.ಗಳನ್ನು ಜಮಾ ಮಾಡಲಾಗುತ್ತಿದೆ. ರಾಜ್ಯದ ಮಹಿಳೆಯರು ಆಯ್ಕೆ ಮಾಡಿದ ಫಲಾನುಭವಿಗಳಿಗೆ ನೀಡಲಾಗುತ್ತಿದ್ದು, ಈ ಮೊತ್ತ ಹಲವರಿಗೆ ನೆರವಾಗುತ್ತಿದೆ. ಕಂತಿನ ಪ್ರಕಾರ ಹಣ ಬಿಡುಗಡೆಯಾಗುತ್ತಿದ್ದು, ಇನ್ನೂ ಹಲವರಿಗೆ ಹಣ ಬಂದಿಲ್ಲ. ಈ ನಡುವೆ ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಅಕ್ಕಿ ಬದಲು ಅಕ್ಕಿಗೆ ಹಣ ಜಮೆಯಾಗುತ್ತಿದೆ.

ಇದನ್ನೂ ಕೂಡ ಓದಿ : MGNREGA : ಮಹಿಳೆಯರಿಗೆ ₹4,000/- ರೂಪಾಯಿ ನೀಡಲು ಮುಂದಾದ ಸರ್ಕಾರ.! ಏನಿದು ಯೋಜನೆ.?

ಗೃಹಲಕ್ಷ್ಮಿ-ಅನ್ನಭಾಗ್ಯ ಹಲವು ಸಮಸ್ಯೆಗಳಿವೆ.!

ಗೃಹಲಕ್ಷ್ಮಿ ಯೋಜನೆಯಲ್ಲಿ ಹಲವು ತಾಂತ್ರಿಕ ಸಮಸ್ಯೆಗಳಿವೆ. ಅಷ್ಟೇ ಅಲ್ಲದೇ ಅರ್ಜಿದಾರರ ಮಾಹಿತಿಯೂ ಸರಿಯಾಗಿಲ್ಲ, ಈ ಹಿನ್ನಲೆಯಲ್ಲಿ ಸಮಸ್ಯೆ ಉಂಟಾಗಿದ್ದು, ಸಮಸ್ಯೆ ಬಗೆಹರಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಲು ಪಡಿತರ ಚೀಟಿ ಇನ್ನೂ ಸರಿಯಾಗಿ ಬಂದಿಲ್ಲ ಮತ್ತು ತಿದ್ದುಪಡಿ ಬಾಕಿ ಇರುವುದರಿಂದ ಹಲವು ಅರ್ಹ ಫಲಾನುಭವಿಗಳು ಈ ಯೋಜನೆಯ ಲಾಭವನ್ನ ಪಡೆಯಲು ಸಾಧ್ಯವಾಗುತ್ತಿಲ್ಲ.,

ಗೃಹಲಕ್ಷ್ಮಿ-ಅನ್ನಭಾಗ್ಯ ಅರ್ಜಿದಾರರಿಗೆ ಸಿಹಿಸುದ್ಧಿ.!

ಅನ್ಮಭಾಗ್ಯ ಯೋಜನೆಯ ಕೆಲ ಫಲಾನುಭವಿಗಳಿಗೆ ಫೆಬ್ರವರಿ ತಿಂಗಳಲ್ಲಿ ನೀಡಲಾಗಿದ್ದ ಉಚಿತ ಅಕ್ಕಿಯ ಹಣ ಇನ್ನೂ ಕೂಡ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ. ಶೇ.65-70ರಷ್ಟು ಹಣ ಇನ್ನೂ ಬಾಕಿ ಇದೆ. ಹಾಗಾಗಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಕಾಯುತ್ತಿರುವವರಿಗೆ ಶೀಘ್ರದಲ್ಲಿಯೇ ಕಂತಿನ ಹಣ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

ಇದನ್ನೂ ಕೂಡ ಓದಿ : Ration card Updates : ಇಂದಿನಿಂದ ಹೊಸ ಪಡಿತರ ಚೀಟಿ ಅರ್ಜಿ ಆರಂಭ.! ಇದನ್ನ ನೀವು ತಿಳಿದಿರಲೇಬೇಕು.!

ಹಣ ಯಾವಾಗ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.?

ಗೃಹಲಕ್ಷ್ಮಿ-ಅನ್ನಭಾಗ್ಯ ಯೋಜನೆಯ ಹಣ ಯಾವಾಗ ಬರುತ್ತದೆ ಎಂದು ಕಾಯುತ್ತಿರುವವರಿಗೆ ಇಲ್ಲಿದೆ ಒಂದು ಸಿಹಿಸುದ್ದಿ. ಈ ಎರಡು ಯೋಜನೆಗಳ ಮೊತ್ತ ಇದೇ ಏಪ್ರಿಲ್ 5ರೊಳಗೆ ಜಮೆಯಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ಹಣ ಬಂದಿಲ್ಲ ಎಂದು ಕಾಯುತ್ತಿದ್ದವರಿಗೆ ಈ ಸುದ್ದಿ ಸಂತಸ ತಂದಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply