Kisan Credit Card : ನೀವು ಈ ಕಾರ್ಡ್ ಹೊಂದಿದ್ದರೆ, ಶೇ.4ರ ಬಡ್ಡಿಯಲ್ಲಿ ಲಕ್ಷಾಂತರ ಸಾಲ.! ಈಗಲೇ ಅರ್ಜಿ ಸಲ್ಲಿಸಿ.

Kisan Credit Card : ನಮಸ್ಕಾರ ಸ್ನೇಹಿತರೇ, ಹೆಚ್ಚಿನ ಜನರಿಗೆ ಸಾಲದ ಅಗತ್ಯವಿದೆ. ಅದರಲ್ಲೂ ರೈತರು ಸಾಲ ಮಾಡಿಯೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಸರಕಾರ ರೈತರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿ ಕಾಣಲು ಸರ್ಕಾರವೂ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ಈಗಾಗಲೇ ರೈತರಿಗೆ ಬರ ಪರಿಹಾರ(Drought relief), ಕಿಸಾನ್ ಹಣ(PM Kisan Samman Nidhi) ಇತ್ಯಾದಿ ಸೌಲಭ್ಯಗಳನ್ನು ನೀಡುತ್ತಿದ್ದು, ಕೃಷಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಅದೇ ರೀತಿ ಕಿಸಾನ್ ಕ್ರೆಡಿಟ್ ಕಾರ್ಡ್(Kisan Credit Card) ಹೊಂದಿದ್ದರೂ ಹೆಚ್ಚಿನ ಮೊತ್ತದ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) :-

ರೈತರ ಕೃಷಿ ಚಟುವಟಿಕೆಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್(Kisan Credit Card) ಜಾರಿಗೆ ತರಲಾಗಿದ್ದು, ಈ ಕಾರ್ಡ್ ಮೂಲಕ ಕೃಷಿಯೇತರ ಚಟುವಟಿಕೆಗಳಿಗೆ ಬ್ಯಾಂಕ್ ನಿಂದ ಸಾಲ ಸೌಲಭ್ಯ ಸಿಗಲಿದ್ದು, ಕೇಂದ್ರ ಸರ್ಕಾರ ಈ ಕಾರ್ಡ್ ರೂಪಿಸಿದ್ದು, ರೈತರು ಈ ಯೋಜನೆಯ ಪ್ರಯೋಜನ ಪಡೆಯುವಂತಾಗಿದೆ. ತಮ್ಮ ಹೊಲಗಳಿಗೆ ಬಿತ್ತನೆ ಬೀಜ, ಬೆಳೆ ಪೋಷಣೆ, ಗೊಬ್ಬರ ತಯಾರಿಕೆ ಇತ್ಯಾದಿ ಕೃಷಿ ಚಟುವಟಿಕೆಗಳಿಗೆ ಸಾಲ ನೀಡಲಾಗುತ್ತದೆ.

ಇದನ್ನೂ ಕೂಡ ಓದಿ : MGNREGA : ಮಹಿಳೆಯರಿಗೆ ₹4,000/- ರೂಪಾಯಿ ನೀಡಲು ಮುಂದಾದ ಸರ್ಕಾರ.! ಏನಿದು ಯೋಜನೆ.?

ಎಷ್ಟು ಸಾಲ ಸೌಲಭ್ಯ.?

  • ಕೃಷಿ ಬೆಳೆಗಳಿಗೆ 3 ವರ್ಷದವರೆಗಿನ ಅಲ್ಪಾವಧಿ ಸಾಲವನ್ನು ಈ ಕಾರ್ಡ್ ಮೂಲಕ ನೀಡಲಾಗುತ್ತದೆ.
  • ರೈತರ ಭೂ ದಾಖಲೆಗಳ ಆಧಾರದ ಮೇಲೆ ಸಾಲ ಸೌಲಭ್ಯ ದೊರೆಯಲಿದೆ.
  • ಮೂರು ಲಕ್ಷದವರೆಗಿನ ಸಾಲ ಸೌಲಭ್ಯವು ಶೇಕಡಾ ನಾಲ್ಕು ಬಡ್ಡಿಯಲ್ಲಿ ಲಭ್ಯವಿರುತ್ತದೆ.
  • ಸಣ್ಣ ಮತ್ತು ಅತಿ ಸಣ್ಣ ರೈತರು ಸಹ ಸಾಲ ಸೌಲಭ್ಯವನ್ನು ಪಡೆಯಬಹುದು.
  • ಈ ಯೋಜನೆಯ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಅರ್ಜಿ ಸಲ್ಲಿಸಿದ ಕೇವಲ 15 ದಿನಗಳಲ್ಲಿ ನಿಮಗೆ ನೀಡಲಾಗುತ್ತದೆ.

ಈ ಬ್ಯಾಂಕಿನಲ್ಲಿ ಸಾಲ ಲಭ್ಯವಿದೆ :-

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ(State Bank Of India) ನೀವು ಕಡಿಮೆ ಬಡ್ಡಿದರದಲ್ಲಿ ಅಂದರೆ 2% ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು. ಮತ್ತು ಎಚ್ ಡಿಎಫ್ ಸಿ(HDFC) ಬ್ಯಾಂಕ್‌ನಲ್ಲಿ ನೀವು 9% ಬಡ್ಡಿದರದಲ್ಲಿ ಸಾಲವನ್ನು ಪಡೆಯುತ್ತೀರಿ. ಹಾಗೆಯೇ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೂಡ ನಿಮಗೆ ಸಾಲ ಸೌಲಭ್ಯ ದೊರೆಯಲಿದೆ.

ಇದನ್ನೂ ಕೂಡ ಓದಿ : Ration card Updates : ಇಂದಿನಿಂದ ಹೊಸ ಪಡಿತರ ಚೀಟಿ ಅರ್ಜಿ ಆರಂಭ.! ಇದನ್ನ ನೀವು ತಿಳಿದಿರಲೇಬೇಕು.!

ಬೇಕಾಗುವ ದಾಖಲೆಗಳೇನು.?

  • ಆಧಾರ್ ಕಾರ್ಡ್
  • ಗುರುತಿನ ಚೀಟಿ
  • ಆರ್.ಟಿ.ಸಿ
  • ಪಡಿತರ ಚೀಟಿ
  • ಭೂಮಿ ಪಹಣಿ
  • ಪಾನ್ ಕಾರ್ಡ್
  • ಮೊಬೈಲ್ ನಂಬರ್
  • ಫೋಟೋ
  • ಬ್ಯಾಂಕ್ ಖಾತೆ ಪುಸ್ತಕ

ಈ ಯೋಜನೆಯ ಲಾಭ ಪಡೆಯಲು ಏನೆಲ್ಲಾ ಅರ್ಹತೆ ಹೊಂದಿರಬೇಕು.?

  • ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು ಮತ್ತು ಇಲ್ಲಿ ನಿವಾಸಿಯಾಗಿರಬೇಕು.
  • ವ್ಯಕ್ತಿಯು ಜಮೀನು ಹೊಂದಿದ್ದರೆ ಅಥವಾ ಬೇರೊಬ್ಬರ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರೆ, ಈ ಕಾರ್ಡ್ ಅನ್ನು ಸಹ ಅನುಮತಿಸಲಾಗಿದೆ.
  • ಈ ಸೌಲಭ್ಯವನ್ನು ಪಡೆಯಲು ಅರ್ಜಿದಾರರ ವಯಸ್ಸು 18 ರಿಂದ 75 ವರ್ಷಗಳ ನಡುವೆ ಇರಬೇಕು.
  • ಸಾಲ ಪಡೆಯಲು, ನೀವು ಖಾತೆಯನ್ನು ಹೊಂದಿರುವ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply