Ration card Updates : ಇಂದಿನಿಂದ ಹೊಸ ಪಡಿತರ ಚೀಟಿ ಅರ್ಜಿ ಆರಂಭ.! ಇದನ್ನ ನೀವು ತಿಳಿದಿರಲೇಬೇಕು.!

Ration card Updates : ನಮಸ್ಕಾರ ಸ್ನೇಹಿತರೇ, ಇದೇ ಏಪ್ರಿಲ್ 1 ರಿಂದ ಹೊಸ ಪಡಿತರ ಚೀಟಿ ಅರ್ಜಿ ಆರಂಭಗೊಳ್ಳಲಿದೆ. ಪ್ರಸ್ತುತ ಪಡಿತರ ಚೀಟಿಗೆ(Ration card) ಹೆಚ್ಚಿನ ಪ್ರಾಮುಖ್ಯತೆ ಇದೆ. ಜನಸಾಮಾನ್ಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಪಡಿತರ ಚೀಟಿ ಬಹಳ ಮುಖ್ಯವಾದ ದಾಖಲೆಯಾಗಿದೆ.

ರಾಜ್ಯದಲ್ಲಿಯೂ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಚುನಾವಣಾ ಪೂರ್ವ ಘೋಷಿಸಿದಂತೆ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಪ್ರಸ್ತುತ ಈ ಯೋಜನೆಗಳ ಲಾಭ ಪಡೆಯಲು ಪಡಿತರ ಚೀಟಿ(Ration card) ಅತ್ಯಂತ ಮಹತ್ವದ್ದಾಗಿದೆ. ಯೋಜನೆ ಲಾಭವನ್ನ ಪಡೆಯಲು ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ. ಇಂದಿನಿಂದ ಹೊಸ ಪಡಿತರ ಚೀಟಿಗಾಗಿ ಜನರು ಅರ್ಜಿ ಸಲ್ಲಿಸಬಹುದು.

ಇದನ್ನೂ ಕೂಡ ಓದಿ : MGNREGA : ಮಹಿಳೆಯರಿಗೆ ₹4,000/- ರೂಪಾಯಿ ನೀಡಲು ಮುಂದಾದ ಸರ್ಕಾರ.! ಏನಿದು ಯೋಜನೆ.?

ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ(Ration card) ಅರ್ಜಿ ಸಲ್ಲಿಕೆ ಆರಂಭ.!

ಏಪ್ರಿಲ್ 1ರಿಂದಲೇ ಹೊಸ ರೇಷನ್ ಕಾರ್ಡ್ ಗೆ(Ration card) ಅರ್ಜಿ ಸಲ್ಲಿಕೆಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಹೊಸ ಪಡಿತರ ಚೀಟಿ ಪಡೆಯಲು ಬಯಸುವವರು ಪಡಿತರ ಚೀಟಿಗಾಗಿ ಈಗಲೇ ಅರ್ಜಿ ಸಲ್ಲಿಸಬಹುದು. ಹೊಸ ಪಡಿತರ ಚೀಟಿಗಾಗಿ ಬಂದಿರುವ 2,95,986 ಅರ್ಜಿಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ಬಾಕಿ ಉಳಿದಿರುವ ಹೊಸ ಆದ್ಯತಾ ಪಡಿತರ ಚೀಟಿಗಳನ್ನು(Ration card) ಪರಿಶೀಲಿಸಿ ವಿಲೇವಾರಿ ಮಾಡುವಂತೆ ಜಂಟಿ/ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಏಪ್ರಿಲ್ 1 ರಿಂದ ಹೊಸ ಪಡಿತರ ಚೀಟಿಗಾಗಿ ಹೊಸ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಆಹಾರ ಇಲಾಖೆ ಅಧಿಕೃತವಾಗಿ ತಿಳಿಸಿದೆ. ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಅರ್ಹತಾ ಮಾನದಂಡವನ್ನೂ ರಾಜ್ಯ ಸರ್ಕಾರ ಪ್ರಕಟಿಸಿದೆ. ಹೊಸ ಪಡಿತರ ಚೀಟಿಗೆ ಯಾರು ಅರ್ಜಿ ಸಲ್ಲಿಸಬಹುದು ಎಂಬ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ.

ಇದನ್ನೂ ಕೂಡ ಓದಿ : ಬ್ಯಾಂಕ್ ಖಾತೆ ಇದ್ದರೆ ಸಾಕು ನಿಮಗೆ ಸಿಗುತ್ತೆ 2 ಲಕ್ಷ.! – Suraksha Bima Yojana

ಹೊಸ ರೇಷನ್ ಕಾರ್ಡ್ ಗೆ(Ration card) ಅರ್ಜಿ ಸಲ್ಲಿಸಲು ಷರತ್ತುಗಳೇನು.?

  • ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು..
  • ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರು ಅರ್ಜಿ ಸಲ್ಲಿಸುವಂತಿಲ್ಲ.
  • ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.
  • ಯಾವ ಪಡಿತರ ಚೀಟಿಯನ್ನು ಕುಟುಂಬಕ್ಕೆ ನೀಡಬೇಕು ಎಂಬುದನ್ನು ಕುಟುಂಬದ ಆದಾಯದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಅಧಿಕೃತ ವೆಬ್‌ಸೈಟ್‌ ಲಿಂಕ್ :- ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ

ಬೇಕಾಗುವ ದಾಖಲೆಗಳೇನು.?

  • ಮತದಾರರ ಗುರುತಿನ ಚೀಟಿ
  • ಆಧಾರ್ ಕಾರ್ಡ್
  • ಮೊಬೈಲ್ ನಂ.
  • ವಯಸ್ಸಿನ ಪ್ರಮಾಣ ಪತ್ರ
  • ಚಾಲನಾ ಪರವಾನಿಗೆ
  • ಸ್ವಯಂ ಘೋಷಿತ ಪ್ರಮಾಣಪತ್ರ
  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  • ಮನೆಯ ಸದಸ್ಯರ ಬಗ್ಗೆ ಮಾಹಿತಿ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply