Pension Scheme : ಮಹಿಳೆಯರಿಗೆ ತಿಂಗಳಿಗೆ 800 ರೂಪಾಯಿ ಸಿಗುವ ಈ ಯೋಜನೆ ಮತ್ತೆ ಆರಂಭವಾಗಿದೆ

Pension Scheme : ನಮಸ್ಕಾರ ಸ್ನೇಹಿತರೇ, ವಿಧವಾ ಪಿಂಚಣಿ ಯೋಜನೆಯಡಿ ಮಹಿಳೆಯರಿಗೆ ತಿಂಗಳಿಗೆ 800 ರೂ. ಯೋಜನೆ ಮತ್ತೆ ಆರಂಭ! ಗಡುವಿನ ಮೊದಲು ಅರ್ಹರು ಅರ್ಜಿ ಸಲ್ಲಿಸಬಹುದು.

ಮಹಿಳೆಯರು ಇಂದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ, ಅವರು ಕೂಡ ಎಲ್ಲರಂತೆ ದುಡಿಯುವಂತಾಗಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರ ಮಹಿಳೆಯರಿಗಾಗಿ ಹತ್ತು ಹಲವು ರೀತಿಯ ಅಭಿವೃದ್ಧಿ ನೀತಿಗಳನ್ನು ಮೀಸಲಿಟ್ಟಿದೆ. ಅದು ಬಿಟ್ಟರೆ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರಿಗೆ ತುಂಬಾ ಮೀಸಲಾತಿ ಇದೆ. ಅದೇ ರೀತಿ ಎಲ್ಲ ವಿಭಾಗಗಳಲ್ಲೂ ಮಹಿಳೆಯರಿಗೆ ಮೀಸಲಾತಿ ಇದೆ. ಹೆಣ್ಣು ಮಕ್ಕಳು, ಮಹಿಳೆಯರು, ವಿಧವೆಯರು, ಹಿರಿಯ ಮಹಿಳೆಯರು ಹೀಗೆ ನಾನಾ ಸೌಲಭ್ಯಗಳನ್ನು ಸರಕಾರ ನೀಡುತ್ತಿದೆ. ಅದೇ ರೀತಿ ವಿಧವೆಯರಿಗೆ ಸಾಮಾಜಿಕ ಭದ್ರತೆ ಒದಗಿಸಲು ಸರಕಾರ ವಿಧವಾ ವೇತನ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ವಿಧವೆಯರಿಗೂ ಮಾಸಿಕ ವೇತನ ನೀಡಲಾಗುತ್ತದೆ.

ವಿಧವಾ ವೇತನ ಯೋಜನೆಯು ವಿಧವೆಯರಿಗೆ ಆರ್ಥಿಕ ಮತ್ತು ಮಾನಸಿಕ ಬೆಂಬಲ ನೀಡುವ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ, 18 ರಿಂದ 64 ವರ್ಷದೊಳಗಿನ ವಿಧವೆಯರ ಬ್ಯಾಂಕ್ ಖಾತೆಗೆ ಮಾಸಿಕ 800 ರೂ. ವಿಧವಾ ವೇತನವನ್ನು ಜಮಾ ಮಾಡಲಾಗುತ್ತದೆ.

ಇದನ್ನೂ ಕೂಡ ಓದಿ : Kisan Credit Card : ನೀವು ಈ ಕಾರ್ಡ್ ಹೊಂದಿದ್ದರೆ, ಶೇ.4ರ ಬಡ್ಡಿಯಲ್ಲಿ ಲಕ್ಷಾಂತರ ಸಾಲ.! ಈಗಲೇ ಅರ್ಜಿ ಸಲ್ಲಿಸಿ.

ವಿಧವಾ ವೇತನ ಪಡೆಯಲು ಏನೆಲ್ಲಾ ಅರ್ಹತೆಗಳಿರಬೇಕು.?

  • ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶಗಳಲ್ಲಿ ರೂ.12,000 ಆಗಿದ್ದರೆ ವಿಧವೆಯರು ಅಂದರೆ ಪತಿ ಇಲ್ಲದವರಿಗೆ ಈ ಪ್ರಯೋಜನವನ್ನು ಪಡೆಯಲು ವಿಧವಾ ವೇತನಕ್ಕೆ ಅರ್ಹರಾಗಿರುತ್ತಾರೆ.
  • ನಗರ ಪ್ರದೇಶಗಳಲ್ಲಿ ರೂ.17,000 ಕ್ಕಿಂತ ಕಡಿಮೆ ಆದಾಯ ಹೊಂದಿದ್ದರೆ ಅರ್ಹ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
  • ಇತರ ಪಿಂಚಣಿಗಳನ್ನು ಪಡೆಯುತ್ತಿರುವ ಮಹಿಳೆಯರು ವಿಧವಾ ವೇತನಕ್ಕೆ ಅರ್ಹರಲ್ಲ.
  • ಅದೇ ರೀತಿ ಅವರು ವಿಧವೆಯಾಗಿ ಮರುಮದುವೆ ಮಾಡಿಕೊಂಡರೆ ಕೂಡ ಈ ಯೋಜನೆಯು ಅನ್ವಯಿಸುವುದಿಲ್ಲ.

ಬೇಕಾಗುವ ದಾಖಲೆಗಳೇನು.?

  • ಪತಿಯ ಮರಣ ಪ್ರಮಾಣ ಪತ್ರ
  • ವಿಳಾಸ ಪರಿಶೀಲನೆ ಪತ್ರ
  • ಆದಾಯ ಪ್ರಮಾಣ ಪತ್ರ
  • ವಯಸ್ಸು ದೃಢೀಕರಣ ಪತ್ರ
  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್

ಇದನ್ನೂ ಕೂಡ ಓದಿ : Govt Scheme Update : ಗೃಹಲಕ್ಷ್ಮೀ ಹಾಗು ಅನ್ನಭಾಗ್ಯ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಬಿಗ್ ಅಪ್‌ಡೇಟ್!

ಅರ್ಜಿ ಸಲ್ಲಿಸುವ ವಿಧಾನ :-

ಅರ್ಹ ಮಹಿಳೆಯ ಅಧಿಕಾರ ವ್ಯಾಪ್ತಿಗೆ ಬರುವ ನಾಡ ಕಚೇರಿ ಹಾಗೂ ತಾಲೂಕು ತಹಶೀಲ್ದಾರ್ ಕಚೇರಿಗಳಲ್ಲಿ ಆ ಅರ್ಜಿಗೆ ಬೇಕಾದ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply