Crop Insurance : ಬರ ಪರಿಹಾರ ಜಮಾವಣೆ ಆಗಿಲ್ಲವೇ.? ಇಲ್ಲಿಗೆ ಭೇಟಿ ನೀಡಿ, ಮಾಹಿತಿ ಸಲ್ಲಿಸಿ – ಬೆಳೆ ನಷ್ಟ ಪರಿಹಾರ ಪಡೆದುಕೊಳ್ಳಿ

Crop Insurance : ಬರಗಾಲದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಆರ್ಥಿಕವಾಗಿ ನೆರವಾಗಲು ರಾಜ್ಯ ಸರ್ಕಾರ ಬರ ಪರಿಹಾರವಾಗಿ ಮೊದಲ ಹಂತದಲ್ಲಿ 2000 ರೂಪಾಯಿಯನ್ನು ಈಗಾಗಲೇ ಜಿಲ್ಲಾವಾರು ಪ್ರತಿ ತಾಲ್ಲೂಕಿನ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಕೂಡ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ಎಫ್ಐಡಿ ನಂಬರ್ ಪಡೆದಿರುವ ಅರ್ಹ ಫಲಾನುಭವಿಗಳಿಗೆ ಮೊದಲ ಕಂತಿನ ಬೆಳೆ ನಷ್ಟ ಪರಿಹಾರದ ಹಣವನ್ನು ಜಮಾವಣೆ ಮಾಡಲಾಗಿದೆ.

ಇದನ್ನೂ ಕೂಡ ಓದಿ : Crop Insurance : ರೈತರ ಖಾತೆಗೆ ₹20,000 ಹಣ ಜಮಾ! ರೈತರ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಜಮಾ.! ಹೀಗೆ ಚೆಕ್ ಮಾಡಿಕೊಳ್ಳಿ

ಆದರೆ ಕೆಲವೊಂದಿಷ್ಟು ಅರ್ಹ ಫಲಾನುಭವಿ ರೈತರಿಗೆ ತಾಂತ್ರಿಕ ಕಾರಣಗಳಿಂದ ಮೊದಲ ಕಂತಿನ ಹಣ ವರ್ಗಾವಣೆ ಮಾಡಲು ಸಾಧ್ಯವಾಗಿರುವುದಿಲ್ಲ. ಇಂತಹ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಾಂತ್ರಿಕ ಸಮಸ್ಯೆ ಸರಿಪಡಿಸಿಕೊಳ್ಳುವಂತೆ ಹಿಂದೆ ಕಂದಾಯ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಇದಾದ ನಂತರವು ಇನ್ನು ಕೆಲವು ರೈತರಿಗೆ ಈ ಬೆಳೆ ನಷ್ಟ ಪರಿಹಾರದ ಹಣ ಜಮಾ ಆಗಿರುವುದಿಲ್ಲ ಅಂತಹ ರೈತರು ಮುಂದೆ ಇಲ್ಲಿ ತಿಳಿಸಿರುವ ಮಾರ್ಗಸೂಚಿಯಂತೆ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

ಮೊದಲು ನಿಮ್ಮ ಜಮೀನಿನ ದಾಖಲೆ ಮತ್ತು ನಿಮ್ಮ ಬ್ಯಾಂಕ್ ವಿವರವನ್ನು ರೈತ ಸಂಪರ್ಕ ಕೇಂದ್ರದಲ್ಲಿ ಸಲ್ಲಿಸಿ ಎಫ್ಐಡಿ ನಂಬರ್ ರಚನೆ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಎಫ್ಐಡಿ ನಂಬರ್ ಆಗಿದ್ದಲ್ಲಿ ಮುಂದಿನ ಹಂತವಾಗಿ ಆ ನಂಬರ್‌ಗೆ ನಿಮ್ಮ ಹೆಸರಲ್ಲಿರುವ ಎಲ್ಲ ಸರ್ವೆ ನಂಬರ್ ಸೇರ್ಪಡೆಯಾಗಿವೆ ಎಂದು ಒಮ್ಮೆ ನಿಮ್ಮ ಹೋಬಳಿಯ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಿ. ಏಕೆಂದರೆ ಎಕರೆಗೆ ಇಂತಿಷ್ಟು ಅಂತ ಬರ ಪರಿಹಾರ ಹಣ ಜಮಾವಣೆ ಆಗುತ್ತದೆ. ಹೆಚ್ಚು ಎಕರೆ ಜಮೀನು ಹೊಂದಿರುವವರಿಗೆ ಹೆಚ್ಚು ಬರ ಪರಿಹಾರ ಹಣ ಜಮಾವಣೆಯಾಗಲಿದೆ.

ಇದನ್ನೂ ಕೂಡ ಓದಿ : Govt Updates : ನೀವು ಕುರಿ, ಕೋಳಿ, ಹಸು ಹೊಂದಿದ್ದರೆ ನಿಮಗೆ ಸಿಗಲಿದೆ ₹40,000/- | ರೈತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.!

ಇನ್ನೂ ಮುಖ್ಯವಾಗಿ ಯಾವುದೇ ಯೋಜನೆಯಡಿ ನೇರ ನಗದು ವರ್ಗಾವಣೆ ಮೂಲಕ ಹಣ ಪಡೆಯಲು ಬ್ಯಾಂಕ್ ಖಾತೆಗೆ ಎನ್‌ಪಿಸಿಐ ಮ್ಯಾಪಿಂಗ್ ಆಗಿರಬೇಕು ಅಂದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ನಿಮ್ಮ ಖಾತೆ ಹೊಂದಿರುವ ಬ್ಯಾಂಕಿಗೆ ಭೇಟಿ ನೀಡಿ ಆಧಾರ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಇದರ ನಂತರವೂ ನಿಮಗೆ ಬರ ಪರಿಹಾರ ಹಣ ಜಮಾ ಆಗದಿದ್ದರೆ ಒಮ್ಮೆ ನಿಮ್ಮ ಗ್ರಾಮದ ಗ್ರಾಮಾಡಳಿತ ಅಧಿಕಾರಿ ಅವರನ್ನು ಭೇಟಿ ಮಾಡಿ ಬರ ಪರಿಹಾರ ಹಣ ಜಮಾ ಆಗದಿರುವ ಬಗ್ಗೆ ತಿಳಿಸಿ ಮತ್ತು ಮುಂದಿನ ಮಾರ್ಗಸೂಚಿ ಏನು ಎಂಬುದನ್ನು ಪ್ರಶ್ನಿಸಿ. ರಾಜ್ಯ ಸರ್ಕಾರ ಹಿಂದೆ ಘೋಷಣೆ ಮಾಡಿರುವ ಬರಪೀಡಿತ ತಾಲೂಕುಗಳ ರೈತರಿಗೆ ಮಾತ್ರ ಬೆಳೆ ನಷ್ಟ ಪರಿಹಾರ ₹2000 ಜಮಾ ಮಾಡಲಾಗುತ್ತದೆ ಹೊರತು ಇತರ ಭಾಗದ ರೈತರಿಗೆ ಈ ಬರ ಪರಿಹಾರ ಹಣ ದೊರೆಯುವುದಿಲ್ಲ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply