Kabza : ಕಬ್ಜ ಸಿನಿಮಾದ ಮೊದಲನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ.? ಸಿನಿಮಾ ಹೇಗಿದೆ? ಪ್ರೇಕ್ಷಕರು ಹೇಳಿದ್ದೇನು.?

Kabza : ಭಾರತೀಯ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ(Upendra) ಅವರ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ, ಅಪ್ಪು ಅವರ ಹುಟ್ಟುಹಬ್ಬದ ದಿನ ಅಂದರೆ ನಿನ್ನೆ ಅದ್ದೂರಿಯಾಗಿ ಬಿಡುಗಡೆ ಆಯಿತು. ಈ ಸಿನಿಮಾ 1೦೦ ಕೋಟಿಗೂ ಅಧಿಕ ಬಜೆಟ್ ನಲ್ಲಿ ತಯಾರಾಗಿದ್ದು ಇಡೀ ದೇಶವೇ ಕಬ್ಜ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಾ ಇತ್ತು. ಇದೀಗ ಈ ಸಿನಿಮಾ ಬಿಡುಗಡೆ ಆಗಿದ್ದು, ಕಬ್ಜ ಸಿನಿಮಾ ಹೇಗಿದೆ? ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು? ಮತ್ತು ಕಬ್ಜ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತಾ.? ಈ ಮಾಹಿತಿಯನ್ನ ಸಂಪೂರ್ಣವಾಗಿ ಓದಿ.

ಇದನ್ನೂ ಕೂಡ ಓದಿ : ತಮ್ಮ ದಿನಕರ್ ಜೊತೆ ದರ್ಶನ್ ಸಿನಿಮಾ! ಕೊನೆಗೂ ಸಿಹಿಸುದ್ಧಿ ಕೊಟ್ಟ ಡಿ ಬಾಸ್ ಯಾವಾಗ ನೋಡಿ | Darshan Thoogudeepa

ಕಬ್ಜ ಸಿನಿಮಾ ಇಡೀ ದೇಶದಾದ್ಯಂತ ಸುಮಾರು 7 ಭಾಷೆಗಳಲ್ಲಿ ಬಿಡುಗಡೆ ಆಗಿದ್ದು. 4೦೦೦ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ ಅಪ್ಪಳಿಸಿದೆ. ನಿನ್ನೆ ಬಿಡುಗಡೆ ಆಗಿರುವ ಕಬ್ಜ ಸಿನಿಮಾವನ್ನ ಸಿನಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ಆರ್ ಚಂದ್ರು ಅವರ ನಿರ್ದೇಶನ ಮತ್ತು ಉಪ್ಪಿ ಅವರ ಆಕ್ಟಿಂಗ್ ಗೆ ಫಿದಾ ಆಗಿದ್ದಾರೆ. ಈ ಸಿನಿಮಾ KJF ರೀತಿಯ ಮೇಕಿಂಗ್ ಒಳಗೊಂಡಿದ್ದು ಸ್ವಾತಂತ್ರ ಪೂರ್ವದ ಕಥೆಯನ್ನ ಒಳಗೊಂಡಿದೆ. ಈ ಚಿತ್ರದಲ್ಲಿ ವಿಜುವಲ್ಸ್ ಮತ್ತು ಬ್ಯಾಗ್ ಗ್ರೌಂಡ್ ಮ್ಯೂಸಿಕ್ ಪ್ಲಸ್ ಪಾಯಿಂಟ್ ಆಗಿದೆ.

ಇನ್ನೂ ಬಹಳ ವಿಶೇಷ ಎನ್ನುವ ರೀತಿ ಕಿಚ್ಚ ಸುದೀಪ್ ಮತ್ತು ಶಿವಣ್ಣ ಅವರು ಕೂಡ ಸಿನಿಮಾದಲ್ಲಿ ಒಳ್ಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತಾರೆ. ಈಗಾಗಲೇ ಸಿನಿಮಾ ನೋಡಿರುವ ಪ್ರೇಕ್ಷಕರು ಮತ್ತು ವಿಮರ್ಶಕರು ಕಬ್ಜ ಸಿನಿಮಾಗೆ ಒಳ್ಳೆಯ ರೇಟಿಂಗ್ ನೀಡಿದ್ದಾರೆ. ಹಾಗೂ ಈ ಸಿನಿಮಾ ಬಿಡುಗಡೆಯಾದ ಮೊದಲನೇ ದಿನ ಹೌಸ್ ಫುಲ್ ಆಗಿ ಪ್ರದರ್ಶನ ಕಂಡಿದ್ದು ಮೊದಲ ದಿನವೇ ಇಡೀ ದೇಶದಾದ್ಯಂತ ಸುಮಾರು 3೦ ರಿಂದ 4೦ ಕೋಟಿ ಕಲೆಕ್ಷನ್ ಮಾಡಿದೆ ಅಂತ ಬಾಕ್ಸ್ ಆಫೀಸ್ ಪಂಡಿತರು ಲೆಕ್ಕಚಾರ ಮಾಡಿದ್ದಾರೆ. ನಿಮ್ಮ ಪ್ರಕಾರ ಈ ಸಿನಿಮಾ ಒಟ್ಟಾರೆಯಾಗಿ ಎಷ್ಟು ಕಲೆಕ್ಷನ್ ಮಾಡುತ್ತದೆ ಎಂದು ಕಮೆಂಟ್ ಮಾಡಿ.

ಇದನ್ನೂ ಕೂಡ ಓದಿ : ಕಬ್ಜ ಸಿನಿಮಾ ಟ್ರೈಲರ್ ನೋಡಿ ದರ್ಶನ್ ಅವರ ಪ್ರತಿಕ್ರಿಯೆ ಏನು.? । Darshan Thoogudeepa

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply