Dhruva Sarja : ಚಿರು ಸಮಾಧಿ ಮೇಲೆ ತನ್ನ ಮಗಳನ್ನ ಮಲಗಿಸಿ ಲಾಲಿ ಹಾಡಿದ ಧ್ರುವ ಸರ್ಜಾ.! ದೃಶ್ಯ ನೋಡಿ ಕಣ್ಣೀರಿಟ್ಟ ತಾಯಿ ಅಮ್ಮಾಜಿ.!

Dhruva Sarja : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಅಣ್ಣ ಚಿರು ಸರ್ಜಾ ಸಮಾಧಿ ಪಕ್ಕ ಮಲಗಿರುವ ವಿಡಿಯೋವೊಂದು ಇತ್ತೀಚಿಗೆ ವೈರಲ್ ಆಗಿತ್ತು. ಈ ಬೆನ್ನಲ್ಲೇ ಮತ್ತೊಂದು ವಿಶೇಷ ವಿಡಿಯೋವೊಂದನ್ನ ಸ್ವತಃ ಧ್ರುವ ಸರ್ಜಾ ಶೇರ್ ಮಾಡಿದ್ದಾರೆ. ಅಣ್ಣನ ಸಮಾಧಿ ಮೇಲೆ ಮಗಳನ್ನ ಆಟವಾಡಿಸುತ್ತಿರುವ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಿರು ಸರ್ಜಾ ಅಗಲಿ ಮೂರು ವರ್ಷಗಳು ಕಳೆದಿವೆ. ಅಣ್ಣನ ಅಗಲಿಕೆಯ ನೋವು ಧ್ರುವಗೆ ಇನ್ನೂ ಮಾಸಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಅಣ್ಣನ ಸಮಾಧಿ ಮೇಲೆ ತನ್ನ ಮುದ್ಧು ಮಗಳನ್ನ ಧ್ರುವ ಆಟವಾಡಿಸುತ್ತಿರುವ ವಿಡಿಯೋ ಎಲ್ಲರ ಮನಕಲಕುವಂತಿದೆ. ವಿಡಿಯೋ ನೋಡಿ ಖುಷಿ ಪಡಬೇಕಾ.? ವಿಧಿಯಾಟಕ್ಕೆ ಶಾಪ ಹಾಕಬೇಕಾ.? ಅಂತಿದ್ದಾರೆ ಅಭಿಮಾನಿಗಳು.

Whatsapp Group Join
Telegram channel Join

ಇದನ್ನೂ ಕೂಡ ಓದಿ : Dhruva Sarja : ಚಿರು ಸರ್ಜಾ ಸಮಾಧಿ ಬಳಿ ಧ್ರುವ ಸರ್ಜಾ ಮಲಗಿದ್ದಾಗ ನಡೆದೇ ಹೋಯ್ತು ದೊಡ್ಡ ಪವಾಡ.! ಬೆಚ್ಚಿ ಬಿದ್ದ ಧ್ರುವ ಸರ್ಜಾ.!

ಧ್ರುವ ಪತ್ನಿ ಪ್ರೇರಣಾ ಸೀಮಂತ ಶಾಸ್ತ್ರ ಇತ್ತೀಚಿಗೆ ಅದ್ಧೂರಿಯಾಗಿ ನಡೆಯಿತು. ಆ ಸಮಯದಲ್ಲಿ ಪ್ರೇರಣಾ ತನ್ನ ಮಗಳಿಗೆ, ಚಿರು ಫೋಟೋವನ್ನ ತೋರಿಸಿ ನಿಮ್ಮ ದೊಡ್ಡಪ್ಪ ನೋಡು ಎನ್ನುತ್ತಿದ್ದರು. ಆಗ ಮಗಳು ತಾತ ಎನ್ನುತ್ತಿದ್ದಳು. ಪ್ರೇರಣಾ ಅವರು ನಿನ್ನ ದೊಡ್ಡಪ್ಪ ಎಂದು ಹೇಳಿಕೊಡುತ್ತಿದ್ದರು. ಆ ದೃಶ್ಯ ಕೂಡ ಸಖತ್ ವೈರಲ್ ಆಗಿತ್ತು. ಅಕ್ಟೋಬರ್ ೬ ರಂದು ಧ್ರುವ ಸರ್ಜಾ ಹುಟ್ಟುಹಬ್ಬದಂದು ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ ರಾಜಮಾರ್ತಾಂಡ ರಿಲೀಸ್ ಆಗುತ್ತಿದೆ. ಚಿರು-ಮೇಘನಾ ಪುತ್ರ ರಾಯನ್ ರಾಜ್ ಕೂಡ ನಟಿಸಿದ್ದಾರೆ. ಚಿರು ಪಾತ್ರಕ್ಕೆ ಇಡೀ ಸಿನಿಮಾದಲ್ಲಿ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ಚಿರು ಅಭಿನಯದ ಕೊನೆಯ ಸಿನಿಮಾ ರಾಜಮಾರ್ತಾಂಡ ನೋಡಲು ನೀವು ಕೂಡ ಕಾಯುತ್ತಿದ್ದೀರಾ.? ತಪ್ಪದೇ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Whatsapp Group Join
Telegram channel Join

ಇದನ್ನೂ ಕೂಡ ಓದಿ :Darshan – Sudeep : ದರ್ಶನ್ ಸುದೀಪ್ ಮತ್ತೆ ಒಂದಾಗುತ್ತಾರಾ.? ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಹದಾಸೆ ಏನು ಗೊತ್ತಾ.?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply