Dhruva Sarja : ಪ್ರೇರಣಾ ಸೀಮಂತಕ್ಕೆ ಬಂದ ನಟ ವಿಜಯ ರಾಘವೇಂದ್ರ ಅವರು ಧ್ರುವ ಸರ್ಜಾ ಬಳಿ ಹೇಳಿದ್ದೇನು.?

Dhruva Sarja : ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರವನ್ನ ಅದ್ಧೂರಿಯಾಗಿ ಮಾಡಿದ್ದು, ಯಾರೆಲ್ಲಾ ಈ ಸೀಮಂತ ಶಾಸ್ತ್ರಕ್ಕೆ ಬಂದಿದ್ದರು ಗೊತ್ತಾ.?

Whatsapp Group Join
Telegram channel Join

ಕಳೆದ ವಾರ ಧ್ರುವ ಸರ್ಜಾ ಅಣ್ಣ ಚಿರು ಸರ್ಜಾ ಸಮಾಧಿ ಬಳಿ ಮಲಗಿ ಸುದ್ಧಿಯಾಗಿದ್ದರು. ಇದೀಗ ಪತ್ನಿ ಪ್ರೇರಣಾ ಸೀಮಂತ ಶಾಸ್ತ್ರವನ್ನು ಅಣ್ಣನ ಸಮಾಧಿ ಬಳಿ ನೆರೆವೇರಿಸಿ ಸರಳತೆ ಮೆರೆದಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಪ್ರೇರಣಾ ಸೀಮಂತ ಕಾರ್ಯ ನೆರೆವೇರಿದ್ದು, ಆ ವಿಡಿಯೋವನ್ನು ತಡವಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಧ್ರುವ ಸರ್ಜಾ ಹಾಗು ಪ್ರೇರಣಾ ಮೊಬೈಲ್ ನಲ್ಲಿ ಚಿರಂಜೀವಿ ಸರ್ಜಾ ಫೋಟೋವನ್ನು ಮಗಳಿಗೆ ತೋರಿಸಿ ದೊಡ್ಡಪ್ಪ ಎಂದು ಹೇಳಿಕೊಡುವುದನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ.

ಇದನ್ನೂ ಕೂಡ ಓದಿ : Dhruva Sarja : ಪ್ರೇರಣಾ ಸೀಮಂತಕ್ಕೆ ಮೇಘನಾ ರಾಜ್ ಯಾಕೆ ಬಂದಿಲ್ಲ.? ಕಣ್ಣೀರಿಟ್ಟ ಧ್ರುವ ಸರ್ಜಾ.! ಶಾಕಿಂಗ್ ಸುದ್ಧಿ.!

Whatsapp Group Join
Telegram channel Join

ಪ್ರೇರಣಾ ಅವರ ಸೀಮಂತ ಶಾಸ್ತ್ರಕ್ಕೆ ಕುಟುಂಬದ ಆಪ್ತರು, ಸ್ನೇಹಿತರು, ಕೆಲ ನಟ-ನಟಿಯರಷ್ಟೇ ಬಂದು ಧ್ರುವ ಸ್ರಜಾ ಅವರ ತೋಟದ ಮನೆಯಲ್ಲಿ ಚಿರು ಸಮಾಧಿ ಪಕ್ಕದಲ್ಲಿ ಸೀಮಂತ ಶಾಸ್ತ್ರ ಮಾಡಿದ್ದಾರೆ. ಕಳೆದ ತಿಂಗಳಷ್ಟೇ ಪತ್ನಿ ಸ್ಪಂದನ ಕಳೆದುಕೊಂಡಿದ್ದ ವಿಜಯ ರಾಘವೇಂದ್ರ ಅವರು ಸೀಮಂತ ಮುಗಿದ ಬಳಿಕ ಧ್ರುವ ಸರ್ಜಾ ಅವರ ಮನೆಗೆ ಕಾರಿನಲ್ಲಿ ಬಂದು ಪ್ರೇರಣಾ ಹಾಗು ಧ್ರುವ ಸರ್ಜಾ ಅವರಿಗೆ ಶುಭ ಹಾರೈಸಿದ್ದಾರೆ. ಈಗಾಗಲೇ ಹೆಣ್ಣು ಮಗು ಇದೆ. ಇದು ಕೃಷ್ಣನ ರೀತಿ ಗಂಡು ಮಗುವಾಗಬಹುದು ಎನ್ನುವ ಮಾತು ಹೇಳಿದ್ದಾರೆ ವಿಜಯ ರಾಘವೇಂದ್ರ.

ಇದನ್ನೂ ಕೂಡ ಓದಿ : Dhruva Sarja : ಚಿರು ಸಮಾಧಿ ಮೇಲೆ ತನ್ನ ಮಗಳನ್ನ ಮಲಗಿಸಿ ಲಾಲಿ ಹಾಡಿದ ಧ್ರುವ ಸರ್ಜಾ.! ದೃಶ್ಯ ನೋಡಿ ಕಣ್ಣೀರಿಟ್ಟ ತಾಯಿ ಅಮ್ಮಾಜಿ.!

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply