Bigg Boss Kannada : ತುಕಾಲಿ ಸಂತುವಿಗೆ ಕ್ಯಾಕರಿಸಿ ಉಗಿದ ಐಶಾನಿ.! ಕೋಪದಿಂದ ತುಕಾಲಿ ಸಂತು ಐಶಾನಿಗೆ ಮಾಡಿದ್ದೇನು ಗೊತ್ತಾ.?

Bigg Boss Kannada : ಬಿಗ್ ಬಾಸ್ ಕನ್ನಡ ಸೀಸನ್ ನ ಎರಡನೇ ವಾರದ ಮೊದಲ ಬೆಳಕು ಶುರುವಾಗಿದೆ. ಚಂದದ ಹಾಡಿಗೆ ಅಷ್ಟೇ ಉತ್ಸಾಹದಿಂದ ಕುಣಿಯುತ್ತಾ ಸ್ಪರ್ಧಿಗಳು ಬೆಳಕನ್ನು ಬರಮಾಡಿಕೊಂಡಿದ್ದಾರೆ. ಆದರೆ ಬೆಳ್ಳಂಬೆಳಿಗ್ಗೆ ಬಿಗ್ ಬಾಸ್ ಎಲ್ಲರಿಗೂ ಎಲಿಮಿನೇಷನ್ ಶಾಕ್ ಕೊಟ್ಟಿದೆ. ಬಿಗ್ ಬಾಸ್ ಕನ್ನಡ ಸೀಸನ್ ೧೦ ರ ಮೊದಲ ವಾರ ಮುಕ್ತಾಯವಾಗಿದೆ. ಸ್ನೇಕ್ ಶಾಮ್ ಎಲಿಮಿನೇಟ್ ಆದ ಮೊದಲ ಸ್ಪರ್ಧಿಯಾಗಿದ್ದಾರೆ. ಇತ್ತ ಸ್ಫರ್ಧಿಗಳು ಕಳೆದ ವಾರಕ್ಕಿಂತಲೂ ಜಾಸ್ತಿ ಪಳಗಿದ್ದಾರೆ. ಎಲ್ಲರ ಜೊತೆಗೆ ಬಾಂಡಿಂಗ್ ಚೆನ್ನಾಗಿಯಾದರೆ, ಇನ್ನು ಕೆಲವರು ಕಿತ್ತಾಡಿಕೊಂಡು ಮುನಿಸಿಗೆ ಜಾರಿದ್ದಾರೆ.

ಇದನ್ನೂ ಕೂಡ ಓದಿ : Bigg Boss Kannada : ಬಿಗ್ ಬಸ್ ಮನೆಯಲ್ಲಿ ರೊಚ್ಚಿಗೆದ್ದ ರಕ್ಷಕ್ ಬುಲೆಟ್.! ಕಿರುಚಾಡಿದ ಕಾರ್ತಿಕ್.! ಸೈಲೆಂಟ್ ಆದ್ರ ವಿನಯ್, ಪ್ರತಾಪ್.!

WhatsApp Group Join Now
Telegram Group Join Now

ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಈ ಸಣ್ಣ ಸಣ್ಣ ಕಿಡಿ ಕಾಳ್ಗಿಚ್ಚಾಗಿ ಪರಿವರ್ತನೆಯಾಗುತ್ತಿದೆ. ಸೋಮವಾರ ಬೆಳಿಗ್ಗೆ ಸ್ಪರ್ಧಿಗಳು ಏಳುತ್ತಿದ್ದಂತೆ ಬಿಗ್ ಬಾಸ್ ಶಾಕ್ ನೀಡಿದೆ. ಮಲಗಿದ್ದ ಸ್ಪರ್ಧಿಗಳು ಕಣ್ಣು ಬಿಡುವ ಮುನ್ನವೇ ಎಲಿಮಿನೇಷನ್ ಮಾಡಬೇಕೆಂಬ ಆದೇಶ ಹೊರಬಿದ್ದಿದೆ. ಮುಂದಿನ ವಾರಕ್ಕೆ ಯಾರು ಮನೆಯಿಂದ ಆಚೆ ಹೋಗಬೇಕು ಎಂದು ಎಲ್ಲರಿಗೂ ಹೆಸರನ್ನು ಸೂಚಿಸುವಂತೆ ಬಿಗ್ ಬಾಸ್ ಆದೇಶ ನೀಡಿದೆ. ಅದರ ಪ್ರಕಾರ ಎಲ್ಲರೂ ತಮಗನಿಸಿದವರ ಹೆಸರನ್ನು ಹೇಳಿದ್ದಾರೆ. ಇದೆಲ್ಲದರ ನಡುವೆ ಇಲ್ಲೊಂದು ಟ್ವಿಸ್ಟ್ ಕೂಡ ಇತ್ತು. ಈ ವಾರದ ಎಲಿಮಿನೇಷನ್ ನಿಂದ ಪಾರಾಗಲು ಎಲಿಮಿನೇಷನ್ ನಿಂದ ಹೊರಗುಳಿದ ಸ್ಪರ್ಧಿಗಳು ಎಲಿಮಿನೇಷನ್ ಆದವರ ಪರವಾಗಿ ಟಾಸ್ಕ್ ಕಂಪ್ಲೀಟ್ ಮಾಡಬೇಕಿತ್ತು. ಆ ಪೈಕಿ ಈ ವಾರದ ಎಲಿಮಿನೇಷನ್ ಪಟ್ಟಿಯಲ್ಲಿ ತುಕಾಲಿ ಸಂತು ಸಹ ಒಬ್ಬರಾಗಿದ್ದರು.

ಇದನ್ನೂ ಕೂಡ ಓದಿ : Kartik – Sangeeta :ಬಿಗ್ ಬಾಸ್ ಮನೆಯಲ್ಲಿ ಬಟ್ಟೆ ಬಿಚ್ಚಿದ ಕಾರ್ತಿಕ್.! ಸಂಗೀತ ಜೊತೆ ಕಾರ್ತಿಕ್ ಗೌಡ ಪ್ರೀತಿಯಲ್ಲಿ ಸಿಕ್ಕಿಹಾಕಿಕೊಂಡರಾ.?

WhatsApp Group Join Now
Telegram Group Join Now

ತಮ್ಮ ಪರವಾಗಿ ಟಾಸ್ಕ್ ಮಾಡುವಂತೆ ರಕ್ಷಕ್ ಬುಲೆಟ್ ಬಳಿ ಕೇಳಿಕೊಂಡಿದ್ದಾರೆ ತುಕಾಲಿ ಸಂತು. ಇದೇ ವಿಚಾರಕ್ಕೆ ತುಕಾಲಿ ಸಂತು ಮತ್ತು ಐಶಾನಿ ನಡುವೆ ದೊಡ್ಡ ಯುದ್ಧವೇ ನಡೆದಿದೆ. ಇಬ್ಬರು ಮನಬಂದಂತೆ ಬೈದಾಡಿಕೊಂಡಿದ್ದಾರೆ. ಏ ಸುಮ್ನಿರು.. ಹೋಗಿಲ್ಲಿಂದ ಎಂದು ಐಶಾನಿ ಹೇಳುತ್ತಿದ್ದಂತೆ, ಹೋಗು ಅನ್ನೋಕೆ ನೀನ್ಯಾರು.? ಎಂದು ತುಕಾಲಿ ಮಾತಿಗೆ ಮಾತು ಬೆಳೆಸಿದ್ದಾರೆ. ಈ ತರ ಗಂಡಸು ಇರ್ತಾರಾ.? ಥೂ.. ಅಸಹ್ಯ ಥೂ.. ಎಂದು ಐಶಾನಿ ಕೂಗಾಡಿದ್ದಾರೆ. ತುಕಾಲಿ ಸಂತು ಹಾಗು ಐಶಾನಿ ಬಗ್ಗೆ ನಿಮ್ಮ ಅನಿಸಿಕೆ – ಅಭಿಪ್ರಾಯಗಳನ್ನ ಕಾಮೆಂಟ್ ಮೂಲಕ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply