Darshan । ಡಿ ಬಾಸ್ ಗತ್ತು ಹಿಂದಿ – ಇಂಗ್ಲಿಷ್ ಚಾನೆಲ್ ಗೂ ಗೊತ್ತು! । ದರ್ಶನ್ ಬರ್ತ್ ಡೇ ಕನ್ನಡ ಮೀಡಿಯಾದಲ್ಲಿ ಬ್ಯಾನ್! । D56

Darshan । ಡಿ ಬಾಸ್ ಗತ್ತು ಹಿಂದಿ – ಇಂಗ್ಲಿಷ್ ಚಾನೆಲ್ ಗೂ ಗೊತ್ತು! । ದರ್ಶನ್ ಬರ್ತ್ ಡೇ ಕನ್ನಡ ಮೀಡಿಯಾದಲ್ಲಿ ಬ್ಯಾನ್!

ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರನ್ನ ಕನ್ನಡ ಮಾಧ್ಯಮಗಳು ಬ್ಯಾನ್ ಮಾಡಿರೋ ವಿಚಾರ ನಿಮಗೆಲ್ಲ ಗೊತ್ತಿರುವಂತಹದ್ದು. ಯಾವುದೋ ಒಂದು ಆಡಿಯೋದ ವಿಚಾರವಾಗಿ ದರ್ಶನ್ ಅವರ ನ್ಯೂಸ್ ಅನ್ನ ನಾವು ಯಾವುದೇ ಕಾರಣಕ್ಕೂ ಪ್ರಸಾರ ಮಾಡುವುದಿಲ್ಲ ಅಂತ ಕನ್ನಡ ಮಾಧ್ಯಮಗಳು ಹೇಳಿದ್ದವು. ಆದರೆ ದರ್ಶನ್ ಅವರ ಅಭಿಮಾನಿಗಳ ಬಳಗ ಅವರ ಕ್ರಾಂತಿ ಸಿನಿಮಾವನ್ನ ಪ್ರೀತಿಯಿಂದ ಬರಮಾಡಿಕೊಂಡು ನೂರು ಕೋಟಿ ಕ್ಲಬ್ ಸೇರುವಂತೆ ಮಾಡಿದ್ದಾರೆ. ಇದರ ಜೊತೆ ದರ್ಶನ್ ಅವರ ಹುಟ್ಟುಹಬ್ಬಕ್ಕೂ ಸಹ ದರ್ಶನ್ ಅವರ ಅಭಿಮಾನಿಗಳು ಅವರ ಮನೆ ಹತ್ತಿರ ಹೋಗುವುದರ ಮೂಲಕ ದರ್ಶನ್ ಅವರ ಮಾತು ತಪ್ಪದೇ ಅವರು ಹೇಳಿದ ರೀತಿಯಲ್ಲೇ ದರ್ಶನ್ ಅವರಿಗೆ ಶುಭಕೋರಿ ಬಂದಿದ್ದಾರೆ.

ಇದನ್ನೂ ಕೂಡ ಓದಿ : Darshan Thoogudeepa, (ದರ್ಶನ್) ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Darshan Hit and Flop Movies

Darshan also knows Hindi-English channel

ಮುಂದೆಲ್ಲ ದರ್ಶನ್ ಅವರ ಹುಟ್ಟುಹಬ್ಬ ಬಂದ್ರೆ ಕನ್ನಡ ಮಾಧ್ಯಮದವರು ದರ್ಶನ್ ಅವರ ಮನೆ ಮುಂದೆ ಹೋಗಿ ಕಾಯುತ್ತ ಇದ್ದರು. ಆದರೆ ಈ ಬಾರಿ ಯಾವುದೇ ಕನ್ನಡ ಮಾಧ್ಯಮಗಳು ಬಂದಿಲ್ಲ. ಆದರೆ ಡಿ ಬಾಸ್ ಅವರ ಗತ್ತು ಆಂಗ್ಲ ಮಾಧ್ಯಮಕ್ಕೆ ಗೊತ್ತು. ಇವರು ದರ್ಶನ್ ಅವರ ಮನೆಯ ಹತ್ತಿರ ದರ್ಶನ್ ಅವರ ಹುಟ್ಟುಹಬ್ಬದ ದಿನ ಲೈವ್ ವಿಡಿಯೋ ಮಾಡುವುದರ ಮೂಲಕ ತಮ್ಮ ಚಾನೆಲ್ ನಲ್ಲಿ ಪ್ರಸಾರ ಮಾಡಿದ್ದಾರೆ. ದರ್ಶನ್ ಅವರ ಮನೆಯ ಮುಂದೆ ಪ್ರತಿಷ್ಠಿತ ನ್ಯೂಸ್ ಚಾನೆಲ್ ಗಳಾದ ಇಂಡಿಯಾ ಟುಡೇ, ಆಜ್ ತಕ್, ಈ ಎರಡು ಸಂಸ್ಥೆಗಳ ರಿಪೋರ್ಟ್ ಗಳ ಓಬಿ ವ್ಯಾನ್ ನಿಂತಿತ್ತು. ಈ ಓಬಿ ವ್ಯಾನ್ ಕೇವಲ ಲೈವ್ ಟೆಲಿಕಾಸ್ಟ್ ಗೆ ಬಳಸಲಾಗುತ್ತದೆ.

ಆದರೆ ದರ್ಶನ್ ಅವರ ಹುಟ್ಟುಹಬ್ಬವನ್ನ ಲೈವ್ ಟೆಲಿಕಾಸ್ಟ್ ಮಾಡುವುದರ ಮೂಲಕ ದರ್ಶನ್ ಅವರಿಗೆ ಕಾಯುತ್ತ ನಿಂತಿತ್ತು. ಇದರಲ್ಲೇ ತಿಳಿಯುತ್ತೆ ದರ್ಶನ್ ಅವರ ಮಹತ್ವ, ಅವರ ವ್ಯಕ್ತಿತ್ವ ಎಂತಹದ್ದು ಎಂದು. ಈ ಆಂಗ್ಲ ಮಾಧ್ಯಮ ಕೇವಲ ದರ್ಶನ್ ಅವರ ಹುಟ್ಟುಹಬ್ಬದ ಬಗ್ಗೆ ಮಾತ್ರ ಪ್ರಸಾರ ಮಾಡುತ್ತಿಲ್ಲ ಬದಲಾಗಿ ಅವರ ಸಿನಿಮಾದ ಬಗ್ಗೆಯೂ ಸಹ ಪ್ರಸಾರ ಮಾಡುತ್ತಿದ್ದಾರೆ. ನಮ್ಮ ಕನ್ನಡ ನಟನ ಹುಟ್ಟುಹಬ್ಬವನ್ನ ಪರ ಭಾಷೆಯ ಚಾನೆಲ್ ಗಳು ಪ್ರಸಾರ ಮಾಡಿರುವುದು ನೋಡಿದರೆ ಖುಷಿ ಹಾಗು ಹೆಮ್ಮೆಯ ವಿಚಾರ. ಆಂಗ್ಲ ಮಾಧ್ಯಮಗಳು ದರ್ಶನ್ ಅವರ ಹುಟ್ಟುಹಬ್ಬವನ್ನ ಲೈವ್ ಟೆಲಿಕಾಸ್ಟ್ ಮಾಡಿದ್ದು ನಿಮಗೆ ಹೇಗೆ ಅನಿಸಿತು ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದನ್ನೂ ಕೂಡ ಓದಿ : ರಾತ್ರಿಪೂರ್ತಿ ಯಾರಿಗೂ ತಿಳಿಯದಂತೆ ರಸ್ತೆಯಲ್ಲೇ ಕೂತಿದ್ದ ಪುನೀತ್! ಅಷ್ಟಕ್ಕೂ ಅವತ್ತು ಏನಾಗಿತ್ತು ಗೊತ್ತಾ.? | Puneeth Rajkumar

Darshan also knows Hindi-English channel

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply