Dhruva Sarja : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತುಂಬಾ ಖುಷಿಯಲ್ಲಿದ್ದಾರೆ. ಅಣ್ಣ ಮಲಗಿರೋ ತೋಟದ ಮನೆಯಲ್ಲಿಯೇ ಪತ್ನಿ ಪ್ರೇರಣಾ ಸೀಮಂತ ಕಾರ್ಯಕ್ರಮ ಮಾಡಿ ಸಂತೋಷ ಪಟ್ಟಿದ್ದಾರೆ. ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಬಾಂಧವ್ಯ ತುಂಬಾನೇ ಗಟ್ಟಿಯಾಗಿತ್ತು. ಅಣ್ಣನ ಸಮಾಧಿಯನ್ನ ತಮ್ಮ ತೋಟದಲ್ಲಿ ಮಾಡಿರುವುದು, ಧ್ರುವ ಸರ್ಜಾ ಮನೆಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮವನ್ನು ಅಣ್ಣನ ಸಮಾಧಿ ಇರುವ ತಮ್ಮ ತೋಟದಲ್ಲಿ ಮಾಡುತ್ತಾರೆ. ಕನಕಪುರ ಸಮೀಪವಿರುವ ಸೋಮನಹಳ್ಳಿಯ ತೋಟದ ಮನೆಯಲ್ಲಿಯೇ ಪತ್ನಿ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆದಿದೆ. ಮನೆಮಂದಿಯಲ್ಲಾ ಈ ಒಂದು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಕೂಡ ಓದಿ : Oldage Scheme : 60 ವರ್ಷ ಮೇಲ್ಪಟ್ಟವರಿಗೆ ಸಿಹಿಸುದ್ಧಿ / ಏನಿದು ಸ್ಕೀಮ್.? ಬೇಗ ಚೆಕ್ ಮಾಡಿ
ಧ್ರುವ ಮತ್ತು ಪ್ರೇರಣಾ ತಮ್ಮ ಮಗಳಿಗೆ ಚಿರಂಜೀವಿ ಸರ್ಜಾ ಅವರ ಫೋಟೋ ತೋರಿಸಿ ದೊಡ್ಡಪ್ಪ ಅಂತ ಕರೆಯಲು ಹೇಳುತ್ತಾರೆ. ತನ್ನ ತೊದಲು ಮಾತಿನಲ್ಲಿಯೇ ದೊಡ್ಡಪ್ಪ ಎಂದು ಕರೆಯುತ್ತಾಳೆ. ವಿಶೇಷ ಏನೆಂದರೆ ಸರ್ಜಾ ಕುಟುಂಬದ ಕಾರ್ಯಕ್ರಮಗಳು ಸ್ಟಾರ್ ಹೋಟೆಲ್ ಗಳಲ್ಲಿ ನೆರವೇರುತ್ತಿದ್ದವು. ಆದರೆ ೨ ನೇ ಮಗುವಿನ ಸೀಮಂತ ಕಾರ್ಯಕ್ರಮ ದಿವಂಗತ ಅಣ್ಣನ ಸಮಾಧಿ ಬಳಿ ನೆರವೇರಿದೆ. ಧ್ರುವ ಅವರ ಪ್ರತಿ ಕ್ಷಣದಲ್ಲೂ ಚಿರು ಇರಬೇಕು ಎನ್ನುವ ಆಸೆ ಇರುತ್ತದೆ. ಹಾಗಾಗಿ ಧ್ರುವ ಸರ್ಜಾ ಎಂದು ಅಣ್ಣನ ಬಿಟ್ಟು ಏನು ಮಾಡುವುದಿಲ್ಲ, ತಮ್ಮ ಸಂತೋಷದ ಕ್ಷಣವನ್ನ ತನ್ನ ಅಣ್ಣ ಇರುವ ಜಾಗದಲ್ಲಿಯೇ ಮಾಡಿದ್ದಾರೆ. ವಿಶೇಷವಾಗಿಯೇ ಶ್ರೀಕೃಷ್ಣ ಜನ್ಮಾಷ್ಟಮಿಯಂದೇ ಸೀಮಂತ ಕಾರ್ಯಕ್ರಮ ನಡೆದಿದೆ. ಇಡೀ ಸೀಮಂತ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ನ ಫೋಟೋ ರಾರಾಜಿಸುತ್ತ ಇತ್ತು. ಈ ಮೂಲಕ ಜೂನಿಯರ್ ಚಿರು ಬರುತ್ತಾನೆ ಎನ್ನುವ ಸೂಚನೆ ಕೊಟ್ಟಂತೆ ಕಾಣುತ್ತದೆ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.
ಇದನ್ನೂ ಕೂಡ ಓದಿ : Crop loss : ಎಲ್ಲಾ ರೈತರಿಗೆ ಗುಡ್ ನ್ಯೂಸ್.! ಪ್ರತೀ ಹೆಕ್ಟೇರ್ ಗೆ ₹10,000/- ನೆಟೆ ಬೆಳೆ ರೋಗಕ್ಕೆ ಪರಿಹಾರ
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Drought Relief : ಬರ ಪರಿಹಾರ ಹಣ ಬಿಡುಗಡೆ – ಈ ಲಿಸ್ಟ್ ನಲ್ಲಿ ಹೆಸರು ಇದ್ದರೆ ಮಾತ್ರ – ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿ
- Leelavathi : ವಿನೋದ್ ಹಾಗೂ ನನ್ನ ನಡುವಿನ ಸೀಕ್ರೆಟ್ ಯಾರಿಗೂ ಗೊತ್ತಿಲ್ಲ ಎಂದು ಶಿವಣ್ಣ ಹೇಳಿದ್ದೇಕೆ.? ಕಣ್ಣೀರಿಟ್ಟ ಲೀಲಾವತಿ.!
- Drought Relief : 1ನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ – ಬರ ಪರಿಹಾರ 3 ಕಂತುಗಳಲ್ಲಿ ರೈತರ ಖಾತೆಗಳಿಗೆ ಬಿಡುಗಡೆ – ಸಿಎಂ ಸಿದ್ದರಾಮಯ್ಯ
- Property Rules : ಸ್ವಂತ ಆಸ್ತಿಯ ಮಾಲೀಕರಿಗೆ ಬಿಗ್ ಶಾಕ್ – ಡಿಸೆಂಬರ್ ನಿಂದ ಹೊಸ ರೂಲ್ಸ್ – ಮನೆ ಜಮೀನು ಪ್ಲಾಟ್ ಇದ್ದರೆ ನೋಡಿ
- Pension Scheme : 60 ವರ್ಷ ಮೇಲ್ಪಟ್ಟವರಿಗೆ ಬಂಪರ್ ಗಿಫ್ಟ್ – ಪ್ರತಿ ತಿಂಗಳಿಗೆ 5 ಸಾವಿರ ಹಣ ಬ್ಯಾಂಕ್ ಖಾತೆಗೆ ಜಮೆ.!
- Adike Rate Today : ಇಂದಿನ ಅಡಿಕೆ ಬೆಲೆ.? ಪ್ರಮುಖ ಮಾರುಕಟ್ಟೆಯಲ್ಲಿ ಎಷ್ಟಾಗಿದೆ ಗೊತ್ತಾ ಇಂದಿನ ಅಡಿಕೆಯ ಬೆಲೆ.?
- Gold – Silver Rate : 24 ಗಂಟೆಯಲ್ಲಿ ಚಿನ್ನದ ಹಾಗು ಬೆಳ್ಳಿಯ ಬೆಲೆ ಎಷ್ಟಾಗಿದೆ ಗೊತ್ತಾ.? ಇಳಿಕೆನಾ ಅಥವಾ ಏರಿಕೆನಾ.?
- Solar Scheme :ರೈತರಿಗೆ 4 ಲಕ್ಷ ಸಹಾಯಧನ.! ಸೋಲಾರ್ ವಿದ್ಯುತ್ ಅವಳಡಿಕೆಗಾಗಿ ರೈತರಿಗೆ ಹೊಸ ಸ್ಕೀಮ್.!
- Farmer’s Loan Waiver : ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್.! ರೈತರ ಸಾಲಮನ್ನಾ / ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಹೊಸ ಸಾಲ!
- Vehicle Subsidy : ವಾಹನ ಖರೀದಿಸುವವರಿಗೆ 3 ಲಕ್ಷ ಹಣ ಸಬ್ಸಿಡಿ ಸಿಗಲಿದೆ