Crop loss : ಎಲ್ಲಾ ರೈತರಿಗೆ ಗುಡ್ ನ್ಯೂಸ್.! ಪ್ರತೀ ಹೆಕ್ಟೇರ್ ಗೆ ₹10,000/- ನೆಟೆ ಬೆಳೆ ರೋಗಕ್ಕೆ ಪರಿಹಾರ

Crop loss : ನಮಸ್ಕಾರ ಸ್ನೇಹಿತರೇ, ರಾಜ್ಯದಾದ್ಯಂತವಿರುವ ಎಲ್ಲಾ ರೈತರಿಗೆ ನೂತನ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಅವರು ಭರ್ಜರಿ ಗಿಫ್ಟ್ ನೀಡಿದ್ದಾರೆ. ಪ್ರತೀ ಹೆಕ್ಟೇರ್ ಭೂಮಿಗೆ 10,000/- ರೂಪಾಯಿ ಹಣ ಪರಿಹಾರ ನೀಡಿದ್ದಾರೆ. ಕಳೆದ ವರ್ಷ ಅಂದರೆ, 2022ನೇ ಸಾಲಿನಲ್ಲಿ ರೈತರು ಬೆಳೆದಿರುವ ಬೆಳೆಗಳು ನೆಟೆ ರೋಗದಿಂದ ಹಾಳಾಗಿರುವ ಎಲ್ಲಾ ರೈತರಿಗೆ ಹಣ ಬಿಡುಗಡೆ ಮಾಡಿ ಎಲ್ಲರಿಗೂ ಗುಡ್ ನ್ಯೂಸ್ ನೀಡಿದ್ದಾರೆ. ಆದರೆ, ರೈತರು ಈ ಪರಿಹಾರ ಹಣ ಪಡೆದುಕೊಳ್ಳಲು ಈ ಮೂರು ದಾಖಲೆಗಳು ಸಲ್ಲಿಸುವುದು ಕಡ್ಡಾಯ. ಈ ದಾಖಲೆಗಳು ಎಲ್ಲಿ ಸಲ್ಲಿಸಬೇಕು.? ಅಗತ್ಯವಾದ ದಾಖಲೆಗಳು ಏನು.? ಯಾರನ್ನ ಸಂಪರ್ಕಿಸಬೇಕು.? ಎನ್ನುವಂತಹ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

Whatsapp Group Join
Telegram channel Join

ರೈತರಿಗೆ ಪ್ರತೀ ಹೆಕ್ಟೇರ್ ಗೆ 10,000/- ರೂಪಾಯಿ ನೆಟೆ ರೋಗ ಪರಿಹಾರ ಬಿಡುಗಡೆ – ಮುಂಗಾರು ಹಂಗಾಮಿನಲ್ಲಿ ನೆಟೆ ರೋಗದಿಂದ ತೊಗರಿಬೇಳೆಗೆ ಹಾನಿಯಾಗಿದ್ದು, ಮೊದಲ ಹಂತದ ಪರಿಹಾರವಾಗಿ 24 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ. 2022-23ನೇ ಸಾಲೂಯಿನ ಮುಂಗಾರು ಹಂಗಾಮಿನಲ್ಲಿ ನೆಟೆ ರೋಗದಿಂದ ಕಲ್ಬುರ್ಗಿ ಜಿಲ್ಲೆಯ 1,98,488 ಹೆಕ್ಟೇರ್ ಪ್ರದೇಶದಲ್ಲಿನ ತೊಗರಿಬೇಳೆ ಹಾನಿಯಾಗಿದೆ.

ಇದನ್ನೂ ಕೂಡ ಓದಿ : Pan Card Rules : ಪಾನ್ ಕಾರ್ಡ್ ಇದ್ದವರಿಗೆ ಹೊಸ ನಿಯಮ 2023 ಎಲ್ಲರಿಗೂ ಅನ್ವಯ

Whatsapp Group Join
Telegram channel Join

ಅದೇ ರೀತಿ ಬೀದರ್ ಜಿಲ್ಲೆಯ 24,495 ಹೆಕ್ಟೇರ್, ವಿಜಯಪುರ ಜಿಲ್ಲೆಯಲ್ಲಿ 20,401 ಹೆಕ್ಟೇರ್, ಯಾದಗಿರಿಯಲ್ಲಿ 20,259 ಹೆಕ್ಟೇರ್ ಪ್ರದೇಶದಲ್ಲಿ ತೊಗರಿಬೇಳೆ ಹಾಳಾಗಿದೆ ಎಂದು ತಿಳಿಸಿದ್ದಾರೆ. ಬೆಳೆ ಹಾನಿಗೊಳಗಾದ ರೈತರಿಗೆ ಪ್ರತೀ ಹೆಕ್ಟೇರ್ ಗೆ 10,000/- ರೂಪಾಯಿಗಳಂತೆ, ಗರಿಷ್ಟ 2 ಹೆಕ್ಟೇರ್ ಗಳಿಗೆ ಸೀಮಿತಗೊಳಿಸಿ ಸರ್ಕಾರದಿಂದ 223 ಕೋಟಿ ಅನುದಾನ ಘೋಷಿಸಲಾಗಿದ್ದು, ಈ ಪೈಕಿ ಮೊದಲ ಹಂತಲ್ಲಿಯೇ 24 ಕೋಟಿ ಪರಿಹಾರ ಬಿಡುಗಡೆ ಮಾಡಲಾಗಿದೆ. ನೆಟೆ ರೋಗದಿಂದ ತೊಗರಿಬೇಳೆ ಹಾನಿ, ನಷ್ಟಕ್ಕೆ ಒಳಗಾದ ಪರಿಹಾರ ನೀಡಲಾಗಿದ್ದು, ಉಳಿದ ಮೊತ್ತವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಮಾಹಿತಿಯನ್ನ ನೀಡಿದ್ದಾರೆ.

ಈ ದಾಖಲೆಗಳು ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸಲ್ಲಿಸಿ :- ರೈತರ ಆಧಾರ್ ಕಾರ್ಡ್, ಬ್ಯಾಂಕಿನ ಪಾಸ್ ಬುಕ್, ಜಮೀನಿನ ಪಹಣಿ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..