ನಿತ್ಯಾನಂದ ಹಾಗು ಆತನ ಶಿಷ್ಯೆಯಂದಿರಿಗೆ ಬಿಗ್ ಶಾಕ್ !

ಲೈಂಗಿಕ ಶೋಷಣೆ ಮತ್ತು ಅತ್ಯಾಚಾರದ ಆರೋಪ ಹೊತ್ತು ಭಾರತದಿಂದ ಪರಾರಿಯಾಗಿ ‘ಕೈಲಾಸ’ ಎಂಬ ಕಾಲ್ಪನಿಕ ದೇಶವನ್ನು ಕಟ್ಟಿಕೊಂಡಿರುವ ನಿತ್ಯಾನಂದನಿಗೆ ವಿಶ್ವಸಂಸ್ಥೆ ಬಿಗ್ ಶಾಕ್ ನೀಡಿದೆ. 

ಇದನ್ನೂ ಕೂಡ ಓದಿ : ಹಣ ಕದ್ದು ಸಿಕ್ಕಿಬಿದ್ದ ನಟ ಡಿ ಬಾಸ್ ದರ್ಶನ್! ವಿಷಯ ತಿಳಿದು ಕಣ್ಣೀರಿಟ್ಟ ತಾಯಿ! ಆಗಿದ್ದೇನು ನೋಡಿ

ಫೆಬ್ರವರಿ 24 ರಂದು ವಿಶ್ವಸಂಸ್ಥೆಯಲ್ಲಿ ಆಯೋಜಿಸಿದ್ದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಭೆಯಲ್ಲಿ ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿಯಾಗಿ ಶಿಷ್ಯೆ ವಿಜಯಪ್ರಿಯಾ ಅನ್ನೋರು ಭಾಗಿಯಾಗಿದ್ದರು. ಈ ಸಭೆಯಲ್ಲಿ ವಿಜಯಪ್ರಿಯಾ ಭಾರತದ ವಿರುದ್ಧ ವಿಷವನ್ನು ಉಗುಳಿದ್ದರು. ಮಾತ್ರವಲ್ಲ ನಿತ್ಯಾನಂದರನ್ನು ಹಿಂದೂ ಧರ್ಮದ ಪರಮೋಚ್ಚ ಗುರು ಎಂದು ಕರೆದಿದ್ದರು.

ನಿತ್ಯಾನಂದ ತನ್ನ ಶಿಷ್ಯೆಯನ್ನು ವಿಶ್ವಸಂಸ್ಥೆಗೆ ಕಳುಹಿಸಿ ಭಾರತದ ವಿರುದ್ಧ ಮಾತನಾಡ್ತಿದ್ದಂತೆಯೇ ವ್ಯಾಪಕ ಚರ್ಚೆಗಳು ಶುರುವಾಗಿದ್ದವು. ಇದೀಗ ಈ ವಿಚಾರದಲ್ಲಿ ವಿಶ್ವಸಂಸ್ಥೆಯು ಮೌನ ಮುರಿದಿದೆ. ಫೆಬ್ರವರಿ 24 ರಂದು ನಡೆದ ಸಭೆಯು ಬಹಿರಂಗ ಸಭೆಯಾಗಿದ್ದು, ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಸಭೆಯ ಮುಂದೆ ಕೇಳಲಾದ ಪ್ರಶ್ನೆಗಳು ಹಾಗೂ ಆರೋಪಗಳನ್ನು ವಿಶ್ವಸಂಸ್ಥೆಯ ತಜ್ಞರು ಪರಿಶೀಲನೆ ಮಾಡುತ್ತಾರೆ. ಆದರೆ ಕೈಲಾಸದ ಅಭಿಪ್ರಾಯಗಳನ್ನು ವಿಶ್ವಸಂಸ್ಥೆಯು ಪರಿಗಣಿಸುವುದಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.

ಇದನ್ನೂ ಕೂಡ ಓದಿ : ದರ್ಶನ್ ಅವರ ತಂದೆ ಶ್ರೀನಿವಾಸ್ ತೂಗುದೀಪ ಅವರಿಗೆ ಕಿಡ್ನಿ ದಾನ ಮಾಡಿದ ಮಹಾತಾಯಿ ಯಾರು ಗೊತ್ತಾ.?

ನಿತ್ಯಾನಂದನ ಪ್ರತಿನಿಧಿ ವಿಜಯಪ್ರಿಯಾ ಇಲ್ಲಿ ಏನೇ ಹೇಳಿದರೂ ಅದನ್ನು ಪರಿಗಣಿಸುವುದಿಲ್ಲ. ಮತ್ತು ಸಂಬಂಧಪಟ್ಟ ಸಮಿತಿಯ ಮುಂದೆ ಅದನ್ನು ಕಳುಹಿಸುವುದಿಲ್ಲ ಎಂದು ವಿಶ್ವಸಂಸ್ಥೆ ಸ್ಪಷ್ಟನೆ ನೀಡಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply