ನಟಿ ಲೀಲಾವತಿ ಪರಿಸ್ಥಿತಿ ಕಂಡು ಓಡೋಡಿ ಬಂದ ನಟ ಡಿ ಬಾಸ್ ದರ್ಶನ್ | D Boss Darshan | Leelavthi #Darshan

ಕನ್ನಡ ಚಿತ್ರರಂಗದ ಮೇರು ನಟಿ ಅಂದರೆ, ಅದು ನಮ್ಮ ಲೀಲಾವತಿ ಅಮ್ಮನವರು. ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿರುವ ಸೇವೆ ಮಾತಿನಲ್ಲಿ ಹೇಳಲಾಗದು. ಇನ್ನು ಸಧ್ಯ ಲೀಲಾವತಿಯವರು ಹಾಗು ಮಗ ವಿನೋದ್ ರಾಜ್ ಅವರು ಚಿತ್ರರಂಗದಿಂದ ಸಂಪೂರ್ಣ ದೂರವುಳಿದು ಬಿಟ್ಟಿದ್ದಾರೆ. ತಮ್ಮ ಮಗ ವಿನೋದ್ ಜೊತೆಗೆ ತಮ್ಮ ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಾ ಜೀವನವನ್ನ ನಡೆಸುತ್ತಾ ಇದ್ದಾರೆ.

ಇದನ್ನೂ ಕೂಡ ಓದಿ : ಹಣ ಕದ್ದು ಸಿಕ್ಕಿಬಿದ್ದ ನಟ ಡಿ ಬಾಸ್ ದರ್ಶನ್! ವಿಷಯ ತಿಳಿದು ಕಣ್ಣೀರಿಟ್ಟ ತಾಯಿ! ಆಗಿದ್ದೇನು ನೋಡಿ

WhatsApp Group Join Now
Telegram Group Join Now

ತಮ್ಮ ಹಳ್ಳಿಯಲ್ಲಿಯೇ ವ್ಯವಸಾಯ ಮಾಡುತ್ತಾ ಜೀವನ ನಡೆಸುತ್ತಾ ಇರುವ ನಟಿ ಲೀಲಾವತಿ ಮತ್ತು ವಿನೋದ್ ರಾಜ್ ಅವರು ತಮ್ಮನ್ನ ತಾವು ಸಮಾಜಮುಖಿ ಕೆಲಸಗಳಲ್ಲೂ ಸಹ ತೊಡಗಿಸಿಕೊಂಡಿದ್ದಾರೆ. ಅದೆಷ್ಟೋ ಜನರಿಗೆ ಲೀಲಾವತಿಯವರು ತಮ್ಮ ಕೈಲಾದ ಸಹಾಯವನ್ನ ಕೂಡ ಮಾಡಿದ್ದಾರೆ. ಕಳೆದ ತಿಂಗಳು ಅನಾರೋಗ್ಯದಿಂದ ಬಳಲುತ್ತಿದ್ದ ಲೀಲಾವತಿಯವರನ್ನ, ಚಿತ್ರರಂಗದ ಅನೇಕ ಕಲಾವಿದರು ಭೇಟಿ ಮಾಡಿ ಅವರ ಆರೋಗ್ಯವನ್ನ ವಿಚಾರಿಸಿಕೊಂಡಿದ್ದರು.

ಇನ್ನು ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಅವರು ಕೂಡ ಲೀಲಾವತಿ ಅಮ್ಮನವರನ್ನ ಇದೀಗ ಭೇಟಿ ಮಾಡಿ ಅವರ ಆರೋಗ್ಯವನ್ನ ವಿಚಾರಿಸಿಕೊಂಡಿದ್ದರು. ತಮ್ಮ ಜೀವನವನ್ನೇ ನಟಿ ಲೀಲಾವತಿ ಹಾಗು ವಿನೋದ್ ರಾಜ್ ಅವರು ಬಡವರಿಗಾಗಿ ಮುಡಿಪಾಗಿಟ್ಟಿದ್ದಾರೆ. ನಟಿ ಲೀಲಾವತಿಯವರನ್ನ ನೋಡಿ ನಟ ದರ್ಶನ್ ಅವರು, ಅವರ ಆರೋಗ್ಯ ವಿಚಾರಿಸಿದ್ದಾರೆ. ವಿನೋದ್ ರಾಜ್ ಜೊತೆಗೆ ಮಾತುಕತೆ ನಡೆಸಿ ನಿಮಗೆ ನಾನಿದ್ದೇನೆ, ಏನು ಬೇಕಾದರೂ ನನ್ನಲ್ಲಿ ಕೇಳಿ ಎಂದಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : ‘ವೀಕೆಂಡ್ ವಿತ್ ರಮೇಶ್ʼ ಸೀಸನ್ 5 ರಲ್ಲಿ ಮೊದಲನೇ ಅತಿಥಿ ಇವರೇ! ಪಡೆದ ಸಂಭಾವನೆ ಎಷ್ಟು ಗೊತ್ತೆ ?

ನಟಿ ಲೀಲಾವತಿ ಯವರಿಗೆ ತಮ್ಮ ಆರೋಗ್ಯವನ್ನ ನೋಡಿಕೊಳ್ಳುವಂತೆ ಹೇಳಿ ನಟ ದರ್ಶನ್ ಅವರು ಅವರೊಂದಿಗೆ ಸ್ವಲ್ಪ ಹೊತ್ತು ಸಮಯ ಕಳೆದಿದ್ದಾರೆ. ದರ್ಶನ್ ಅವರ ಈ ಸ್ವಭಾವವನ್ನ ನೋಡಿ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆ – ಅಭಿಪ್ರಾಯವನ್ನ ಕಾಮೆಂಟ್ ಮೂಲಕ ತಿಳಿಸಿ.

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply