Bank Janardhan : ಅಪ್ಪು ನಂತರ ಮತ್ತೊಬ್ಬ ದೊಡ್ಡ ನಟನಿಗೆ ಹೃದಯಾಘಾತ.! ಕಣ್ಣೀರಿಟ್ಟ ಕನ್ನಡ ಚಿತ್ರರಂಗ ಹಾಗು ಸಿನಿಪ್ರಿಯರು

Bank Janardhan : ಕನ್ನಡ ಸಿನಿಮಾರಂಗದ ಹೆಸರಾಂತ ನಟರೊಬ್ಬರಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದ್ದು ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ಕೇಳಿ ಇಡೀ ಸ್ಯಾಂಡಲ್ ವುಡ್ ಕಣ್ಣೀರು ಹಾಕುತ್ತಿದೆ. ಬ್ಯಾಂಕ್ ಜನಾರ್ಧನ್(Bank Janardhan) ಅವರಿಗೆ 74 ವರ್ಷ ವಯಸ್ಸು. ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾ, ಕಿರುತೆರೆ ಹಾಗು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

Whatsapp Group Join
Telegram channel Join

ಇದನ್ನೂ ಕೂಡ ಓದಿ : Gruhalakshmi Scheme : ಗೃಹಲಕ್ಷ್ಮಿ ಮಹಿಳೆಯರ ಗಮನಕ್ಕೆ / ಇಂತಹ ಮಹಿಳೆಯರಿಗೆ ಹಣ ಸಿಗಲ್ಲ / ಇನ್ನೂ ಹಣ ಸಿಗದಿರುವವರು ತಪ್ಪದೇ ನೋಡಿ

ಬ್ಯಾಂಕ್ ಜನಾರ್ಧನ್(Bank Janardhan) ಅವರು ಹಾಸ್ಯ ನಟನಾಗಿ ಸಾಕಷ್ಟು ಪಾತ್ರಗಳನ್ನೂ ಅವರು ನಿರ್ವಹಿಸಿದ್ದಾರೆ. ಗೌರಿ ಗಣೇಶ, ಕೌರವ, ರಂಗ ಎಸ್ ಎಸ್ ಎಲ್ ಸಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ವಿಭಿನ್ನ ರೀತಿಯ ಪಾತ್ರಗಳನ್ನೂ ಮಾಡಿದ್ದಾರೆ. ಜೊತೆಗೆ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಕೂಡ ಇವರದ್ದು. ಇವರು ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ದೊಡ್ಡ ಹಾಸ್ಯ ನಟರ ಜೊತೆಯಲ್ಲಿ, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ದೊಡ್ಡಣ್ಣ ಸೇರಿದಂತೆ ಹೀಗೆ ಹಲವಾರು ನಟರ ಜೊತೆ ಅಭಿನಯಿಸಿ ತಮ್ಮನ್ನು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Spandana Vijay : ಡಿಕೆಡಿ ವೇದಿಕೆ ಮೇಲೆ ಸ್ಪಂದನ ಡೈರಿ ತೆಗೆದು ಕಣ್ಣೀರಿಟ್ಟ ವಿಜಯ ರಾಘವೇಂದ್ರ ಹೇಳಿದ್ದೇನು ಗೊತ್ತಾ.?

ಇವರಿಗೆ 1991 ರಿಂದ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸುವ ಅವಕಾಶ ಸಿಗುತ್ತದೆ. ಅನೇಕ ಚಿತ್ರಗಳು ಧಾರಾವಾಹಿಗಳಲ್ಲಿ ನಟಿಸಿ ಸಾಯಿ ಅನಿಸಿಕೊಂಡಿದ್ದಾರೆ ಬ್ಯಾಂಕ್ ಜನಾರ್ಧನ್ ಅವರು. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ಒಂದು ನಿರಂತರ ಹಾದಿಯಲ್ಲಿ ಗುರುತಿಸಿಕೊಂಡಿದ್ದಾರೆ. ತಂದೆಯ ಆರೋಗ್ಯದ ಕುರಿತು ಬ್ಯಾಂಕ್ ಜನಾರ್ಧನ್(Bank Janardhan) ಪುತ್ರ ಗುರುಪ್ರಸಾದ್ ಮಾಹಿತಿ ನೀಡಿದ್ದಾರೆ. ಯಾರು ಹೆದರುವ ಅಗತ್ಯವಿಲ್ಲ, ಬ್ಯಾಂಕ್ ಜನಾರ್ಧನ್ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯಂತೆ. ಸದ್ಯ ಅವರು ಆರೋಗ್ಯವಾಗಿದ್ದಾರೆ. ಆಂಜಿಯೋಗ್ರಾಮ್ ಮಾಡಲಾಗುತ್ತಿದೆ ಎಂದು ಬ್ಯಾಂಕ್ ಜನಾರ್ಧನ್ ಅವರ ಪುತ್ರ ಗುರುಪ್ರಸಾದ್ ಅವರು ಜಸ್ಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply