Gruhalakshmi Scheme : ಗೃಹಲಕ್ಷ್ಮಿ ಮಹಿಳೆಯರ ಗಮನಕ್ಕೆ / ಇಂತಹ ಮಹಿಳೆಯರಿಗೆ ಹಣ ಸಿಗಲ್ಲ / ಇನ್ನೂ ಹಣ ಸಿಗದಿರುವವರು ತಪ್ಪದೇ ನೋಡಿ

Gruhalakshmi Scheme : ನಮಸ್ಕಾರ ಸ್ನೇಹಿತರೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಿದ್ದು, ಆಗಸ್ಟ್ 30ರಂದು ಅದ್ಧೂರಿಯಾಗಿ ಈ ಸಭೆಯಲ್ಲಿ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಸೇರಿದಂತೆ ಇನ್ನಿತರ ಭಾಗದಿಂದ ಜನಸಾಗರವೇ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಸಾಕ್ಷಿಯಾಗಿತ್ತು. ಗಣ್ಯರ ಸಮ್ಮುಖದಲ್ಲಿ ಈ ಗೃಹಲಕ್ಷ್ಮಿ ಯೋಜನೆಗೆ ಉತ್ತಮವಾದಂತಹ ಸ್ಪಂದನೆ ಸಿಕ್ಕಿತ್ತು. ಆದರೆ ಕೆಲವರಿಗೆ ಮಾತ್ರ ಹಣ ಬಂದಿದೆ, ಇನ್ನುಳಿದವರಿಗೆ ಇನ್ನೂ ಕೂಡ ಹಣ ಬರಲು ವಿಳಂಬವಾಗುತ್ತಿದೆ. ಇದು ಯಾಕೆ ಹೀಗೆ.? ಎನ್ನುವ ಅನುಮಾನ ಸಹ ಮಹಿಳೆಯರಲ್ಲಿ ಕಾಡುತ್ತಿರುವ ಬೆನ್ನಲ್ಲೇ ಮಹತ್ವದ ಸುದ್ಧಿಯೊಂದು ತಿಳಿದು ಬಂದಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : HSRP Number Plate : ಸ್ವಂತ ವಾಹನ ಹೊಂದಿರುವವರು ತಪ್ಪದೇ ನೋಡಿ / ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್ ಜಾರಿಗೆ

ಹೌದು, ಕರ್ನಾಟಕ ರಾಜ್ಯದಲ್ಲಿ ಪಡಿತರ ಹೊಂದಿದ ಕುಟುಂಬ ಹಿರಿಯ ಅಥವಾ ಯಜಮಾನಿ ಮಹಿಳೆಗೆ ತಿಂಗಳಿಗೆ ₹2,000/- ರೂಪಾಯಿ ನೀಡುವ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಬಹುತೇಕರಿಗೆ ಇನ್ನೂ ದೊರೆಯದೆ ಸಮಸ್ಯೆ ಸೃಷ್ಟಿ ಮಾಡಿದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಇನ್ನೂ ಕೂಡ ಅನೇಕ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಬರುವುದು ಬಾಕಿಯಿದೆ. ಹಣ ಬರದಿರಲು ಕಾರಣವಿತ್ತು. ಇದೀಗ ಸರಕಾರದ ಮಹತ್ವದ ಆದೇಶವೊಂದು ಹೊರಬಿದ್ದಿದೆ. ಕರ್ನಾಟಕ ರಾಜ್ಯದ ಆಹಾರ ಇಲಾಖೆಯಿಂದ ಒಂದು ಮಹತ್ವದ ಆದೇಶ ಹೊರಬಂದಿದೆ.

Whatsapp Group Join
Telegram channel Join

ಗೃಹ ಲಕ್ಷ್ಮಿ ಹಣ ಬರಲು ರೇಷನ್ ಕಾರ್ಡ್ ಮನೆಯ ಮಹಿಳೆಯರ ಹೆಸರಿನಲ್ಲಿರಬೇಕು ಎನ್ನುವ ನಿಯಮವಿರುವ ಕಾರಣಕ್ಕೆ, ಗಂಡನ ಅಥವಾ ಮಾವನ ಅಥವಾ ತಂದೆಯ ಹೆಸರಿಗೆ ಯಜಮಾನರ ಬದಲು ಮಹಿಳೆ ಯಜಮಾನಿಯಾಗಿ ಸ್ಥಾನ ಪಡೆಯಲು ತಿದ್ದುಪಡಿ ವಿಧಾನಕ್ಕೆ ಅರ್ಜಿ ಹಾಕಲಾಗಿದೆ. ಆದರೆ ಈ ತಿದ್ದುಪಡಿ ವಿಧಾನ ಬಾಕಿಯಿದ್ದ ಕಾರಣ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಕೈ ಸೇರಿಲ್ಲ. ಇನ್ನೂ ಕೆಲವರ ಬ್ಯಾಂಕ್ ಖಾತೆ ಕೂಡ ಸರಿಯಿಲ್ಲದಿರುವುದೇ ಇದಕ್ಕೆ ಕಾರಣ ಎನ್ನುವ ಮಾಹಿತಿ ತಿಳಿದು ಬಂದಿತ್ತು.

ಇದನ್ನೂ ಕೂಡ ಓದಿ : Drought Relief : ಬರ ಪರಿಹಾರ ಹಣ ಬಿಡುಗಡೆ / ರೈತರು ಈ ಕೆಲಸ ಮಾಡದಿದ್ದರೆ ಹಣ ಬರಲ್ಲ / ಎಕರೆಗೆ ಎಷ್ಟು.? ಯಾವ ಬೆಳೆಗೆ ಎಷ್ಟು.?

ಎರಡೂ ಪ್ರಕ್ರಿಯೆ ಶೀಘ್ರ ಆದವರಿಗೆ ಮರು ಕಂತಿನಲ್ಲಿ ಒಟ್ಟಿಗೆ ಎರಡು ತಿಂಗಳ ಹಣ, ಅಂದರೆ ನಾಲ್ಕು ಸಾವಿರ ರೂಪಾಯಿ ಮೊತ್ತ ಫಲಾನುಭವಿಗಳ ಕೈ ಸೇರಲಿದೆ ಎನ್ನುವ ಆದೇಶ ಹೊರಡಿಸಿದೆ. ಒಟ್ಟಾರೆಯಾಗಿ ಅರ್ಜಿ ಹಾಕಿದ ಒಂದು ಕೋಟಿ ಹದಿಮೂರು ಲಕ್ಷ ಮಹಿಳೆಯರಲ್ಲಿ, ಎಂಬತ್ತೆರಡು ಲಕ್ಷ ಮಹಿಳೆಯರಿಗೆ ಮಾತ್ರ ಹಣ ವರ್ಗಾವಣೆಯಾಗಿದೆ. ಇನ್ನುಳಿದವರಿಗೆ ಇನ್ನೂ ಕೂಡ ಹಣ ವರ್ಗಾವಣೆಯಾಗಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ಅನರ್ಹರಿಗೆ ಈ ಗೃಹಲಕ್ಷ್ಮಿ ಭಾಗ್ಯ ಸಿಗುವುದಿಲ್ಲ ಎನ್ನುವುದು ಪಕ್ಕಾ ಆಗಿದೆ. ಯಾರಿಗೆ ಅರ್ಹತೆ ಇದೆಯೋ ಅಂತಹ ಮಹಿಳೆಯರಿಗೆ ಖಂಡಿತ ಹಣ ವರ್ಗಾವಣೆಯಾಗುತ್ತದೆ.

ಇದನ್ನೂ ಕೂಡ ಓದಿ : PM Scheme for Farmer : ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನ ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಘೋಷಣೆ.?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply