Spandana Vijay : ಡಿಕೆಡಿ ವೇದಿಕೆ ಮೇಲೆ ಸ್ಪಂದನ ಡೈರಿ ತೆಗೆದು ಕಣ್ಣೀರಿಟ್ಟ ವಿಜಯ ರಾಘವೇಂದ್ರ ಹೇಳಿದ್ದೇನು ಗೊತ್ತಾ.?

Spandana Vijay : ಜೀವನದ ಭಾಗವಾಗಿದ್ದ ಪತ್ನಿ ಸ್ಪಂದನ ಅವರನ್ನು ಕಳೆದುಕೊಂಡಿರುವ ಸ್ಯಾಂಡಲ್ ವುಡ್ ನಟ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅವರು ಇದೀಗ ಡಿಕೆಡಿ ವೇದಿಕೆ ಮೇಲೆ ಸ್ಪಂದನ ಅವರು ಬರೆದಿದ್ದ ಡೈರಿಯಲ್ಲಿದ್ದ ಕೆಲವು ಅಪರೂಪದ ಸಂಗತಿಗಳನ್ನ ಹಂಚಿಕೊಂಡಿದ್ದಾರೆ. ಹಲವು ಕುಟುಂಬಗಳು ತಮ್ಮ ಮನೆ ಮಗನಂತೆ ವಿಜಯ ರಾಘವೇಂದ್ರ ಅವರನ್ನು ಭಾವಿಸುತ್ತಾರೆ. ಕೌಟುಂಬಿಕ ವ್ಯಕ್ತಿಯಾಗಿರುವ ವಿಜಯ ರಾಘವೇಂದ್ರ ಇತ್ತೀಚಿಗಷ್ಟೇ ತಮ್ಮ ಜೀವನದ ಅತ್ಯಂತ ಮಹತ್ವದ ವ್ಯಕ್ತಿ ಪತ್ನಿ ಸ್ಪಂದನ ಅವರನ್ನು ಕಳೆದುಕೊಂಡಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : PM Scheme for Farmer : ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನ ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಘೋಷಣೆ.?

ಹಲವು ವರ್ಷ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಸ್ಪಂದನ ಅವರನ್ನು ವಿವಾಹವಾಗಿ 16 ವರ್ಷ ಅವರೊಂದಿಗೆ ಸಂಸಾರ ಮಾಡಿ ಇದೀಗ ವಿಧಿಯಾಟದಿಂದ ಒಬ್ಬಂಟಿಯಾಗಿದ್ದಾರೆ. ಇದೀಗ ವಿಜಯ ರಾಘವೇಂದ್ರ ಅವರು ಡಿಕೆಡಿ ವೇದಿಕೆ ಮೇಲೆ ಮಾತನಾಡಿದ್ದು, ಸ್ಪಂದನ ತನ್ನ ಡೈರಿಯಲ್ಲಿ ಹಲವಾರು ಕನಸುಗಳನ್ನ ಬರೆದಿಟ್ಟಿದ್ದಾರೆ. ತಾನು ದೊಡ್ಡ ನಿರ್ಮಾಪಕಿಯಾಗಬೇಕು. ಸಾವಿರಾರು ಜನರಿಗೆ ಕೆಲಸ ಕೊಡಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಮಗ ಶೌರ್ಯನನ್ನ ದೊಡ್ಡ ನಟನಾಗಿ ಮಾಡಬೇಕು. ಹೀಗೆ ನೂರಾರು ಕನಸುಗಳನ್ನ ತನ್ನ ಡೈರಿಯಲ್ಲಿ ಬರೆದಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Gruhalakshmi Updates : ಗೃಹಲಕ್ಷ್ಮಿ ಹಣ ಜಮಾ ಆಗಿಲ್ವಾ.? ಚಿಂತಿಸಬೇಡಿ ಹೀಗೆ ಮಾಡಿದರೆ ಒಟ್ಟಿಗೆ ₹4,000/- ಬರುತ್ತೆ

ಪ್ರತೀದಿನ ಎದ್ದಾಗಲೂ ಒಂದು ಎಚ್ಚರಿಕೆ ಇರುತ್ತಿತ್ತು. ನನ್ನ ಕುಟುಂಬಕ್ಕಾಗಿ ನಾನು ಕೆಲಸ ಮಾಡಬೇಕು. ಅವರಿಗೆ ಒಳ್ಳೆಯ ಜೀವನ ಕೊಡಬೇಕು. ನನಗೆ ಏನು ಆಗದಂತೆ ನೋಡಿಕೊಳ್ಳಬೇಕು. ಅವರು ಹೆಮ್ಮೆ ಪಡುವಂತೆ ಕೆಲಸ ಮಾಡಬೇಕು ಎಂದು, ಆದರೆ ಈಗ ಅದೆಲ್ಲವೂ ಅರ್ಥಾತ್ ಕಳೆದುಕೊಂಡಂತೆ ಅನಿಸುತ್ತದೆ. ಆದರೆ ಮಗ ಶೌರ್ಯನಿಗಾಗಿ ನಾನು ಇದನ್ನೆಲ್ಲಾ ಮುಂದುವರೆಸಬೇಕಿದೆ. ನಾನು ನೋವುಂಡರೆ ಅವನಿಗೆ ಗೊತ್ತಾಗಿ ಬಿಡುತ್ತದೆ. ಒಬ್ಬನೇ ಇದ್ದಾಗಷ್ಟೇ ಕಣ್ಣೀರು ಹಾಕುತ್ತಿದ್ದೇನೆ ಎಂದು ನೋವು ಅದುಮಿಟ್ಟುಕೊಂಡೇ ಕಣೀರು ಹಾಕಿದ್ದಾರೆ ವಿಜಯ ರಾಘವೇಂದ್ರ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply