ವಾಟ್ಸಪ್ ನ ಈ ನಿಯಮಗಳನ್ನು ಉಲ್ಲಂಘಿಸಿದರೆ ಖಾತೆ ಬ್ಯಾನ್ ಆಗುತ್ತದೆ ! ಜೈಲು ಸೇರಬೇಕಾಗುತ್ತದೆ

ನಾವು ಪ್ರತಿ ನಿತ್ಯ ವಾಟ್ಸಾಪ್ ಮಾಡುವಾಗ ಯಾವುದೇ ಸಂದರ್ಭದಲ್ಲಿ ವಾಟ್ಸಾಪ್ ನಿಯಮವನ್ನು ಉಲ್ಲಂಘನೆ ಮಾಡಿದರೆ, ನಮ್ಮ ವಾಟ್ಸಾಪ್ ಖಾತೆ ಬ್ಲಾಕ್ ಆಗುವುದು ಮಾತ್ರವಲ್ಲ, ನಾವು ಜೈಲು ಪಾಲಾಗಬಹುದು ಎಂಬುವುದು ನಿಮಗೆ ತಿಳಿದಿದೆಯೇ?.

ನಿಯಮ ಮತ್ತು ಷರತ್ತನ್ನು ಉಲ್ಲಂಘಿಸಿದ ಆರೋಪದಲ್ಲಿ ಪ್ರತಿ ತಿಂಗಳು ವಾಟ್ಸಾಪ್ ಹಲವಾರು ಖಾತೆಗಳನ್ನು ಬ್ಯಾನ್ ಮಾಡುತ್ತಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅಡಿಯಲ್ಲಿ ನೀವು ಯಾವುದಾದರೂ ನಿಯಮವನ್ನು ಉಲ್ಲಂಘಿಸಿದರೆ, ಜೈಲು ಶಿಕ್ಷೆಗೂ ಅರ್ಹರಾಗುತ್ತೀರಿ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : ನಾನು ‘ಯಶ್’ ತಂಗಿ ಎಂದು ದೀಪಿಕಾ ದಾಸ್ ಎಲ್ಲಿಯೂ ಹೇಳಲ್ಲಾ ಯಾಕೆ ಗೊತ್ತಾ.?

ವಾಟ್ಸಾಪ್‌ನಲ್ಲಿ ಯಾವುದಾದರೂ ಸಿನಿಮಾ ಲಿಂಕ್ ಅಥವಾ ಕಂಟೆಂಟ್ ಅನ್ನು ಶೇರ್ ಮಾಡುವ ಸಂದರ್ಭದಲ್ಲೂ ಅತೀ ಜಾಗರೂಕರಾಗಿ ಇರಬೇಕಾಗುತ್ತದೆ. ಒಂದು ವೇಳೆ ಖಾಸಗಿತನ ಹಕ್ಕಿನ ಉಲ್ಲಂಘನೆಯಾದರೆ ಅಥವಾ ಕಾಪಿರೈಟ್ ನಿಯಮ ಉಲ್ಲಂಘನೆಯಾದರೆ ನಿಮ್ಮ ವಾಟ್ಸಾಪ್ ಬ್ಲಾಕ್ ಆಗುತ್ತದೆ. ಈ ಬಗ್ಗೆ ನಿಮ್ಮ ವಿರುದ್ಧ ದೂರು ದಾಖಲಾದರೆ, ಜೈಲು ಶಿಕ್ಷೆ ಕೂಡಾ ಆಗಬಹುದು.

WhatsApp Group Join Now
Telegram Group Join Now

ನೀವು ಥರ್ಡ್ ಪಾರ್ಟಿ ಆಪ್ ಅನ್ನು ಬಳಕೆ ಮಾಡಿದರೆ ನಿಮ್ಮ ವಾಟ್ಸಾಪ್ ಅನ್ನು ಬ್ಲಾಕ್ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ಥರ್ಡ್ ಪಾರ್ಟಿ ಆಪ್‌ಗಳು ಇದೆ. ಜಿಬಿ ವಾಟ್ಸಾಪ್, ವಾಟ್ಸಾಪ್ ಮೋಡ್, ವಾಟ್ಸಾಪ್ ಪಲ್ಸ್ ಥರ್ಡ್ ಪಾರ್ಟಿ ಆಪ್‌ಗಳಾಗಿದೆ. ಇಂತಹ ಆಪ್‌ಗಳನ್ನು ಬಳಸಿದರೆ ನಿಮ್ಮ ವಾಟ್ಸಾಪ್ ಬ್ಲಾಕ್ ಆಗಲಿದೆ.

ಸಾಮಾಜಿಕ ಜಾಲತಾಣದಲ್ಲಿ ಅಥವಾ ವಾಟ್ಸಾಪ್‌ನಲ್ಲಿ ಮಾಡಲಾಗುವ ಮೆಸೇಜ್ ಮೂಲಕವೇ ಗಲಭೆಗಳು ಏಳುವ ಬಗ್ಗೆ ನೀವು ಕಾಣಬಹುದಾಗಿದೆ. ಇಂತಹ ಸಂದರ್ಭದಲ್ಲಿ ಸೆಕ್ಯೂರಿಟಿ ಏಜೆನ್ಸಿಗಳ ದೂರಿನ ಆಧಾರದಲ್ಲಿ ವಾಟ್ಸಾಪ್‌ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : ಹಣ ಕದ್ದು ಸಿಕ್ಕಿಬಿದ್ದ ನಟ ಡಿ ಬಾಸ್ ದರ್ಶನ್! ವಿಷಯ ತಿಳಿದು ಕಣ್ಣೀರಿಟ್ಟ ತಾಯಿ! ಆಗಿದ್ದೇನು ನೋಡಿ

ವಾಟ್ಸಾಪ್‌ನಲ್ಲಿ ಯಾರು ಸ್ಪಾಮ್ ಮೆಸೇಜ್‌ಗಳನ್ನು ಕಳುಹಿಸುತ್ತಾರೋ ಅವರ ಖಾತೆಯನ್ನು ಬ್ಲಾಕ್ ಮಾಡುವುದು ಮಾತ್ರವಲ್ಲ, ಅವರು ದಂಡವನ್ನು ಕೂಡಾ ತೆರಬೇಕಾಗುತ್ತದೆ. ಸ್ಪಾಮ್ ಮೆಸೇಜ್ ಕಳುಸುತ್ತಿರುವ ಬಗ್ಗೆ ದೂರು ದಾಖಲಾದರೆ, ನಿಮ್ಮ ವಿರುದ್ಧ ಕಠಿಣ ಕ್ರಮವನ್ನು ಕೂಡಾ ಕೈಗೊಳ್ಳಲಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply