Darshan Thoogudeepa : ದರ್ಶನ್ ಸರ್ ಗೆ ಸಿನಿಮಾ ನಿರ್ದೇಶನ ಮಾಡುತ್ತೇನೆ, ಮಗಳ ಮುಂದೆ ಮಾತು ಕೊಟ್ಟರಾ ರಿಷಬ್.! | Rishabh Shetty

ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದಿಂದಾಗಿ ಇಡೀ ದೇಶವೇ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಆಗಿದೆ. ಸದ್ಯ ನಟ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ೨ ನೇ ಭಾಗದ ಕತೆ ಅಂದರೆ ಪ್ರಿಕುಲ್ ಬರೆಯುವಲ್ಲಿ ಬ್ಯುಸಿ ಆಗಿದ್ದರೆ. ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಸಕ್ಸಸ್ ಬಳಿಕ ಫ್ಯಾಮಿಲಿ ಜೊತೆ ವಿದೇಶಿ ಪ್ರಯಾಣದ ಬಳಿಕ ಸದ್ಯ ತಮ್ಮ ಮುದ್ದು ಮಗಳ ಹುಟ್ಟುಹಬ್ಬದ ಸಂಭ್ರಮವನ್ನ ಆಚರಿಸಿಕೊಂಡಿದ್ದು ಮಗಳು ರಾಧ್ಯಳ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗವಹಿಸಿದ್ದು ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ.

ಮೊನ್ನೆ ಅಷ್ಟೇ ರಿಷಬ್ ಶೆಟ್ಟಿ ತಮ್ಮ ಮಗಳ ಕ್ಯೂಟ್ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ನಮ್ಮ ಪುಟ್ಟ ರಾಜಕುಮಾರಿ ಬೆಳೆಯುದನ್ನ ನೋಡುವುದು ನಮ್ಮ ಜೀವನದ ಅತ್ಯುತ್ತಮ ದೃಶ್ಯವಾಗಿದೆ. ಜನ್ಮ ದಿನದ ಶುಭಾಶಯಗಳು. ನಮ್ಮ ಹೆಣ್ಣು ಮಗು ರಾಧ್ಯ. ನಿಮ್ಮೆಲರ ಪ್ರೀತಿ ಆಶೀರ್ವಾದ ರಾಧ್ಯ ಮೇಲೆ ಸದಾ ಇರಲಿ ಎಂದು ಬರೆದು ಹಂಚಿಕೊಂಡಿದ್ದಾರೆ.

ಇದನ್ನೂ ಕೂಡ ಓದಿ : ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.?

ಪುಟ್ಟ ರಾಧ್ಯ ಕ್ರೀಮ್ ಬಿಳಿ ಹಾಗೂ ಕಪ್ಪು ಬಣ್ಣದ ಬಟ್ಟೆಯಲ್ಲಿ ರಾಜಕುಮಾರಿ ಅಂತೇ ಕಾಣಿಸ್ತಾ ಇದ್ದು ತುಂಬ ಮುದ್ದಾಗಿ ನೀರಿನ ಟಬ್ ನಲ್ಲಿ ಆಟವಾಡುತ್ತ ಇದ್ದಳು. ಅವಳೊಂದಿಗೆ ರಿಷಬ್ ಶೆಟ್ಟಿ ಮಗ ಕೂಡ ಬಿಳಿ ಬಣ್ಣದ ಉಡುಗೆಯಲ್ಲಿ ಬಹಳ ಮುದ್ದಾಗಿ ಕಾಣಿಸುತ್ತ ಇದ್ದನು. ರಾಧ್ಯಳ ಹುಟ್ಟುಹಬ್ಬಕೆ ದರ್ಶನ್ ಕಪ್ಪು ಬಣ್ಣದ ಡ್ರೆಸ್ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ನಟ ದರ್ಶನ್ ರಿಷಬ್ ಶೆಟ್ಟಿ ದಂಪತಿ ಜೊತೆಯಲ್ಲಿ ಖುಷಿ ಖುಷಿಯಾಗಿ ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಮಗನನ್ನ ಎತ್ತಿಕೊಂಡು ಮುದ್ದು ಮಾಡಿದ್ದಾರೆ. ರಾಧ್ಯಳ ಕೆನ್ನೆ ಹಿಂಡಿ ಮುದ್ದು ಮಾಡುತ್ತ ಇರುವ ದರ್ಶನ್ ಅವರ ವಿಡಿಯೋಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ನಟ ದರ್ಶನ್ ಅಭಿಮಾನಿಗಳು ರಿಷಬ್ ಶೆಟ್ಟಿ ನಮ್ಮ ಡಿ ಬಾಸ್ ಗೆ ಒಂದು ಸಿನಿಮಾ ನಿರ್ದೇಶನ ಮಾಡಿದರೆ ಎಷ್ಟು ಚೆನ್ನಾಗಿ ಇರುತ್ತೆ ಅಂತ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಕೂಡ ಓದಿ : ದರ್ಶನ್ ಅವರ ತಂದೆ ಶ್ರೀನಿವಾಸ್ ತೂಗುದೀಪ ಅವರಿಗೆ ಕಿಡ್ನಿ ದಾನ ಮಾಡಿದ ಮಹಾತಾಯಿ ಯಾರು ಗೊತ್ತಾ.?

ರಿಷಬ್ ಶೆಟ್ಟಿ ಜೀವನದಲ್ಲಿ ಮಗಳು ರಾಧ್ಯಳ ಆಗಮನವಾದ ಬಳಿಕ ಅದೃಷ್ಟ ಬದಲಾಗಿ ಹೋಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಹಾಗೇ ಅಭಿಮಾನಿಗಳು ಕಾಂತಾರ ೨ ಸಿನಿಮಾ ಬೇಗನೆ ಬರಲಿ ಅಂತ ಕಾತುರತೆಯನ್ನ ವ್ಯಕ್ತಪಡಿಸಿದ್ದಾರೆ. ಸದ್ಯ ಕಾಂತಾರ ೨ ನೇ ಭಾಗದ ಕತೆ ಬರೆಯುವಲ್ಲಿ ನಿರತರಾಗಿರುವ ರಿಷಬ್ ಶೆಟ್ಟಿ ಇದಕ್ಕಾಗಿ ಬ್ಯಾಚುಲರ್ ಸಿನಿಮಾದಿಂದ ಹೊರ ಬಂದಿದ್ದಾರೆ.

ಈ ಬಾರಿ ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದ್ದ ಕತೆಗೂ ಹಿಂದೆ ನಡೆದಿದ್ದೇನು ಎಂಬುದನ್ನ ತೆರೆಯ ಮೇಲೆ ತರಲಿದ್ದು ಇದು ಸೀಕ್ವೆಲ್ ಆಗಿರದೆ ಪ್ರೀಕ್ವೆಲ್ ಆಗಲಿದೆ. ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದ್ದ ಭೂತಕೋಲದ ಹಿನ್ನೆಲೆಯನ್ನು ಈ ಬಾರಿ ಇನ್ನು ಆಳವಾಗಿ ತೋರಿಸಲಾಗುತ್ತದೆ. ಈ ಮೂಲಕ ಕಾಡು ಬೆಟ್ಟ ಶಿವನ ತಂದೆಯ ಕಾಲಘಟ್ಟ ವನ್ನ ಸಿನಿರಸಿಕರು ವೀಕ್ಷಿಸಬಹುದು ಎಂದು ಸಿನಿತಂಡ ತಿಳಿಸಿದ್ದಾರೆ.

ಇನ್ನು ಇದರ ಬೆನ್ನಲ್ಲೇ ಡಿ ಬಾಸ್ ಅವರಿಗೆ ಹೊಸಪೇಟೆಯಲ್ಲಿ ಘಟನೆ ನಡೆದಾಗ ಈ ಸಂಬಂಧ ರಿಷಬ್ ಶೆಟ್ಟಿ ಅವರು ಯಾಕೆ ಸೋಶಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿರಲಿಲ್ಲ ಅಂತ ಕೇಳಲಾಗುತಿತ್ತು. ಇದಕ್ಕೆ ಹೊಂಬಾಳೆ ಫಿಲಂಸ್ ಕಡೆಯಿಂದ ರಿಸ್ಟ್ರಿಕ್ಟ್ ಮಾಡಲಾಗಿದೆ ಎಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಲಾಗುತಿತ್ತು. ಈಗ ಅದೆಲ್ಲದಕ್ಕೆ ಉತ್ತರವನ್ನ ಕೊಡುವಂತೆ ಡಿ ಬಾಸ್ ದರ್ಶನ್ ಅವರು ರಿಷಬ್ ಶೆಟ್ಟಿ ಅವರ ಮಗಳ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಭೇಟಿ ನೀಡಿ ಈ ವಿವಾದಕ್ಕೆ ತೆರೆ ಎಳೆದು ಇಬ್ಬರ ಸ್ನೇಹಾ ಕೂಡ ತುಂಬಾ ಚೆನ್ನಾಗಿದೆ ಅಂತ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಕೂಡ ಓದಿ : ಹಣ ಕದ್ದು ಸಿಕ್ಕಿಬಿದ್ದ ನಟ ಡಿ ಬಾಸ್ ದರ್ಶನ್! ವಿಷಯ ತಿಳಿದು ಕಣ್ಣೀರಿಟ್ಟ ತಾಯಿ! ಆಗಿದ್ದೇನು ನೋಡಿ

ಇವರಿಬ್ಬರ ಸ್ನೇಹ ಹೀಗೆ ಇರಲಿ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ದರ್ಶನ್ ಸಿನಿಮಾ ಬರಲಿ ಅಂತ ನೀವು ಕೂಡ ಭಾವಿಸುತ್ತೀರಾ ಹಾಗಾದರೆ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Leave a Reply