ಮರಣಕ್ಕೂ ಮುನ್ನ ನಡೆಯುವುದು ಏನು ? ಇಲ್ಲಿದೆ ಅಚ್ಚರಿಯದ ಸಂಗತಿ

ವೈದ್ಯರು ಸಾವಿನ ಸಮೀಪವಿರುವ ಅನುಭವಗಳನ್ನ ಅಧ್ಯಯನ ಮಾಡುತ್ತಿದ್ದು, ಸಾವಿಗೆ ಮುನ್ನ ನಿಜವಾಗಿಯೂ ಏನಾಗುತ್ತದೆ.? ಯಾವ ರೀತಿಯ ಅನುಭವಗಳಾಗುತ್ತೆ ? ಸ್ವಾರಸ್ಯಕರ ಸಂಗತಿಗಳನ್ನ ಬಹಿರಂಗಪಡಿಸಿದ್ದಾರೆ.

Whatsapp Group Join
Telegram channel Join

ಸಾವಿನ ಸಮೀಪ ಬಂದಾಗ ನಿಧಾನಗತಿಯ ಭಾವನೆ ಮೂಡುತ್ತದೆ. ಸಾವಿನ ಸಮಯದಲ್ಲಿ ಬಹಳ ಬಲವಾದ ಭಾವನೆಗಳಿದ್ದು, ಅವರಲ್ಲಿ ಹೆಚ್ಚಿನವರು ಪ್ರೀತಿ ಮತ್ತು ಶಾಂತಿಯಂತಹ ಸಕಾರಾತ್ಮಕ ಭಾವನೆಗಳನ್ನ ಹೊಂದಿದ್ದಾರೆ 

ಡಾ. ಬ್ರೂಸ್ ಗ್ರೇಸನ್ ಸುಮಾರು 50 ವರ್ಷಗಳಿಂದ ಸಾವಿನ ಸಮೀಪ ಅನುಭವ (NDE) ವಿಷಯಗಳ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಸಾವಿನ ಜನರ ಆಲೋಚನೆಗಳು ಮೊದಲಿಗಿಂತ ಹೆಚ್ಚು ವೇಗವಾಗಿ ಮತ್ತು ಸ್ಪಷ್ಟವಾಗಿರುತ್ತೆ. ಇದನ್ನ ‘ಅಧಿಸಾಮಾನ್ಯ ಸಂವೇದನೆಗಳು’ ಎಂದು ಹೆಸರಿಸಲಾಗಿದೆ.

Whatsapp Group Join
Telegram channel Join

ಆ ಸಮಯದಲ್ಲಿ ದೇಹದಿಂದ ಬೇರ್ಪಡುವ ಭಾವನೆ ಇರುತ್ತದೆ. ಕೆಲವೊಮ್ಮೆ ಅವರು ತಮ್ಮ ಪ್ರೀತಿಪಾತ್ರರನ್ನ, ಮರಣ ಹೊಂದಿದವರನ್ನ ಅಥವಾ ಪವಿತ್ರ ಆತ್ಮಗಳನ್ನ ಸಹ ಅನುಭವಿಸುತ್ತಾರೆ. ಕೆಲವರು ಹಿಂತಿರುಗಿ ತಮ್ಮ ಜೀವಿತಾವಧಿಯನ್ನ ಪರಿಶೀಲಿಸಲು ಪ್ರಯತ್ನಿಸುತ್ತಾರೆ.

ಸಾವಿನ ನಂತರ ಏನಾಗುತ್ತದೆ ಎಂದು ನಿಖರವಾಗಿ ತಿಳಿಯಲು ಸಾಧ್ಯವಿಲ್ಲ. ಸಾವಿನ ಹತ್ತಿರ ಬಂದವರಿಗೆ ಇಂದ್ರಿಯಗಳಿಗೆ ನಿಲುಕದ ವಿಶೇಷ ಅನುಭವವಾಗುತ್ತದೆ. ಈ ಅನುಭವಗಳು ಎಲ್ಲರಿಗೂ ಒಂದೇ ರೀತಿಯಾಗಿರುವುದಿಲ್ಲ.‌ ಎಂದು ಡಾ. ಗ್ರೇಸನ್ ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply