Kantara 2 : ಕಾಂತಾರ – 2 ಗೆ ಇಷ್ಟೊಂದು ಸಂಭಾವನೆ ಕೇಳಿದ್ರಾ ರಿಷಬ್ ಶೆಟ್ಟಿ.!

Kantara 2 : ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಬ್ಲಾಕ್ ಬಸ್ಟರ್ ಸಿನಿಮಾ ಕಾಂತರ(Kantara) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸುಮಾರು 19 ಕೋಟಿ ಬಜೆಟ್ ನಲ್ಲಿ ಬಹಳ ಅದ್ಭುತವಾಗಿ ನಿರ್ಮಾಣಗೊಂಡು, 450 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ಮತ್ತೊಮ್ಮೆ ಕನ್ನಡ ಚಿತ್ರರಂಗವನ್ನ ಜಾಗತಿಕ ಮಟ್ಟದಲ್ಲಿ ಗರ್ವದಿಂದ ತಲೆ ಎತ್ತಿ ನಡೆಯುವಂತೆ ಮಾಡಿತ್ತು.

ಇದನ್ನೂ ಕೂಡ ಓದಿ : ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.?

ಕಾಂತಾರ ಸಿನಿಮಾದ ಸಕ್ಸಸ್ ಖುಷಿಯಲ್ಲಿಯೇ, ರಿಷಬ್ ಶೆಟ್ಟಿಯವರು ಕಾಂತಾರ ಚಿತ್ರದ ಎರಡನೇ ಭಾಗವನ್ನು(Kantara -2) ಕೂಡ ಅನೌನ್ಸ್ ಮಾಡಿದ್ದರು.
ಅತೀ ಶೀಘ್ರದಲ್ಲಿಯೇ ಕಾಂತಾರ-2 ಚಿತ್ರದ ಚಿತ್ರೀಕರಣ ಕೂಡ ಪ್ರಾರಂಭವಾಗಲಿದ್ದು, ನಟ, ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರದ ಕಥೆಯನ್ನು ಬರೆಯುತ್ತಿದ್ದಾರೆ. ಇದರ ಬಗ್ಗೆ ರಿಷಬ್ ಅವರು ಯುಗಾದಿ ಹಬ್ಬದಂದು ಈ ಸಂತೋಷದ ಸುದ್ಧಿಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದರು.

ಹಾಗೆಯೇ, ಕಾಂತಾರ ಚಿತ್ರದ ಸಕ್ಸಸ್ ನಂತರ ಕಾಂತಾರ – 2 ಗೆ ಜನಪ್ರಿಯತೆ ಹಾಗು ಬೇಡಿಕೆ ದೇಶಾದ್ಯಂತ ಜಾಸ್ತಿಯಾಗಿದೆ. ಕಾಂತರದ ಜನಪ್ರಿಯತೆಯಿಂದಾಗಿ ರಿಷಬ್ ಶೆಟ್ಟಿಯವರ ಸಂಭಾವನೆ ಕೂಡ ಸಹಜವಾಗಿಯೇ ಹೆಚ್ಚಾಗಲಿದೆ. ಹಾಗಾದ್ರೆ, ರಿಷಬ್ ಅವರು ಕಾಂತಾರ – 2 ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟಿರಬಹುದು ಅನ್ನುವ ಕೂತೂಹಲ ಸಹಜವಾಗಿಯೇ ಎಲ್ಲರಲ್ಲಿದೆ.

ಇದನ್ನೂ ಕೂಡ ಓದಿ : ಹಣ ಕದ್ದು ಸಿಕ್ಕಿಬಿದ್ದ ನಟ ಡಿ ಬಾಸ್ ದರ್ಶನ್! ವಿಷಯ ತಿಳಿದು ಕಣ್ಣೀರಿಟ್ಟ ತಾಯಿ! ಆಗಿದ್ದೇನು ನೋಡಿ

ಕೆಲ ಬಲ್ಲ ಮೂಲಗಳ ಪ್ರಕಾರ ನಟ ರಿಷಭ್ ಶೆಟ್ಟಿಯವರು 25 ರಿಂದ 26 ಕೋಟಿಯಷ್ಟು ಸಂಭಾವನೆ ರೂಪದಲ್ಲಿ ಹಾಗೂ ಕಾಂತಾರ -2 ಸಿನಿಮಾದ ಗಳಿಕೆಯ ಲಾಭದಲ್ಲಿ ಕೂಡ ಪಾಲನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಸಿನಿಪ್ರಿಯರು ಈಗಾಗಲೇ ಈ ಚಿತ್ರವನ್ನು ನೋಡಲು ಬಹಳ ಉತ್ಸುಕರಾಗಿರುವ ಹಿನ್ನೆಲೆಯಲ್ಲಿ ಖಂಡಿತವಾಗಿಯೂ ಈ ಚಿತ್ರ ಬಿಡುಗಡೆಯಾದ್ರೆ ಸುಮಾರು 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದು ಸಿನಿಪಂಡಿತರ ಅಭಿಪ್ರಾಯ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply