Ration Card Updates : ಅನ್ನಭಾಗ್ಯ ಫಲಾನುಭವಿಗಳಿಗೆ ಮತ್ತೆ 3 ಸಿಹಿ ಸುದ್ದಿ ಕೊಟ್ಟ ಸರ್ಕಾರ : ನ.1ರಿಂದ ಹೊಸ ಬದಲಾವಣೆ ಜಾರಿ

Ration Card Updates : ಕಾಂಗ್ರೆಸ್ ಸರ್ಕಾರದ 2ನೇ ಗ್ಯಾರಂಟಿ ಯೋಜನೆ ಅನ್ನಭಾಗ್ಯ ಯೋಜನೆ. ಇದು ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಜುಲೈ ತಿಂಗಳಲ್ಲಿ ಈ ಯೋಜನೆ ಜಾರಿಯಾಗಬೇಕಾಗಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರವು 10 ಕೆಜಿ ಅಕ್ಕಿಯ ಗ್ಯಾರಂಟಿ ನೀಡಿತ್ತು. ಆದರೆ ಅಕ್ಕಿ ಸಿಗದೇ ಇರುವ ಕಾರಣ 5 ಕೆಜಿ ಅಕ್ಕಿ ಹಾಗು 5 ಕೆಜಿ ಅಕ್ಕಿ ಯ ಬದಲಿಗೆ ಹಣವನ್ನು ಡಿಬಿಟ್ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿತ್ತು.

Whatsapp Group Join
Telegram channel Join

ಇದನ್ನೂ ಕೂಡ ಓದಿ : ರೈತರಿಗೆ ಗುಡ್ ನ್ಯೂಸ್.! ಬೆಳೆವಿಮೆ ಪರಿಹಾರ ಜಮಾ.! ಈ ಜಿಲ್ಲೆಗಳ ರೈತರಿಗೆ ಫಸಲ್ ಬಿಮಾ ಯೋಜನೆಯ ಹಣ ಜಮಾ

ಅಕ್ಟೋಬರ್ ತಿಂಗಳಲ್ಲಿ ಹಣದ 10 ಕೆಜಿ ಅಕ್ಕಿಯನ್ನೇ ಕೊಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಇದೀಗ ಅಕ್ಕಿಯ ಬದಲಿಗೆ ಹಣವನ್ನೇ ಕೊಡ್ತಿವಿ ಅಂತ ಸರ್ಕಾರ ಹೇಳಿದೆ. ರಾಜ್ಯ ಸರ್ಕಾರ ನಡೆಸಿದ ಸರ್ವೇಯಲ್ಲಿ ನಿಮಗೆ ಉಚಿತ ಅಕ್ಕಿ ಬೇಕಾ.? ಅಥವಾ ಅಕ್ಕಿ ಹಣ ಬೇಕಾ ಅಂತ ಕೇಳಲಾಗಿತ್ತು. ಇಲ್ಲಿ 90% ಜನರು ನಮಗೆ ಉಚಿತ 5 ಅಕ್ಕಿ ಬದಲು ಹಣ ಕೊಡಿ ತುಂಬಾನೇ ಅನುಕೂಲ ಆಗುತ್ತೆ. ಬಾಕಿ 5 ಕೆಜಿ ಅಕ್ಕಿ ಯನ್ನ ಕೊಡಿ ಅನ್ನುವುದು ಜನರ ಅಭಿಪ್ರಾಯ.

Whatsapp Group Join
Telegram channel Join

ಅಕ್ಟೋಬರ್ ತಿಂಗಳಲ್ಲಿ ರಾಜ್ಯ ಸರ್ಕಾರ ರೇಷನ್ ಕಾರ್ಡ್ ತಿದ್ದು ಪಡಿಗೆ ಅವಕಾಶ ಮಾಡಲಾಗಿತ್ತು. ಒಂದೊಂದು ಜಿಲ್ಲೆಗೆ ಮೂರು ಮೂರು ದಿನ ಅವಕಾಶ ಮಾಡಿಕೊಟ್ಟಿತ್ತು. ಸರ್ವರ್ ಸಮಸ್ಯೆ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ನೆವೆಂಬರ್ ತಿಂಗಳಿನಿಂದ ಒಂದೊಂದು ಜಿಲ್ಲೆಗೆ ಒಂದೊಂದು ವಾರ ಸಮಯವನ್ನು ನಿಗದಿಪಡಿಸಲಾಗಿದೆ. ರೇಷನ್ ಕಾರ್ಡ್ ಗೆ ಹೆಸರು ಸೇರಿಸುವುದಾಗಲಿ, ರೇಷನ್ ಕಾರ್ಡ್ ನಲ್ಲಿರುವ ಹೆಸರು ಡಿಲೀಟ್ ಮಾಡುವುದಾಗಿರಬಹುದು ಅಥವಾ ಯಾವುದಾದರು ಅಡ್ರೆಸ್ ತಪ್ಪಿದ್ದರೆ ಸರಿಪಡಿಸುವುದಿದ್ದರೆ, ಇದನ್ನು ಒಂದು ವಾರದಲ್ಲಿ ಮಾಡಿಕೊಳ್ಳಬಹುದು.

ಇದನ್ನೂ ಕೂಡ ಓದಿ : Scholarship Scheme : ₹10,000/- ರೂಪಾಯಿ ಸ್ಕಾಲರ್ ಶಿಪ್ / 6 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸಿ

ಇನ್ನು ಮುಖ್ಯವಾಗಿ 90 ವರ್ಷ ಮೇಲ್ಪಟ್ಟವರು ಅಂದರೆ ಹಿರಿಯ ನಾಗರಿಕರು ರೇಷನ್ ಗಾಗಿ ಕ್ಯೂನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ. ಅವರ ಮನೆ ಬಾಗಿಲಿಗೆ ಹೋಗಿ ಸರ್ಕಾರದಿಂದ ರೇಷನ್ ಅಕ್ಕಿ ಕೊಟ್ಟು ಬರ್ತಿವಿ ಅನ್ನುವ ನಿರ್ಧಾರ ಮಾಡಿದ್ದಾರೆ. ಒಂದು ರೇಷನ್ ಕಾರ್ಡ್ ನಲ್ಲಿ ಒಬ್ಬರೇ ಇರಬೇಕು. 90ವರ್ಷ ದ ಮಹಿಳೆ ಅಥವಾ ಪುರುಷರಾಗಿದ್ದರೆ ಮಾತ್ರ ಈ ಸೌಲಭ್ಯ ನೀಡಲಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply