Bigg Boss Kannada : ಬಿಗ್ ಬಾಸ್ ಮನೆಗೆ ನಾನು ಡ್ರಾಮಾ ಆಡೋಕೆ ಬಂದಿಲ್ಲ ಎಂದು ಖಡಕ್ ಆಗಿ ರಕ್ಷಕ್ ಬುಲೆಟ್ ಹೇಳಿದ್ದು ಯಾರಿಗೆ ಗೊತ್ತಾ.?

Bigg Boss Kannada : ಕನ್ನಡ ಬಿಗ್ ಬಾಸ್ ನಲ್ಲಿ ಇದೀಗ ಒಬ್ಬರಿಗೊಬ್ಬರು ಜಗಳ ಮಾಡಲು ಶುರು ಮಾಡಿಕೊಂಡಿದ್ದಾರೆ. ನಾನಾ ಅಥವಾ ನೀನಾ.? ಅಂತ ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುತ್ತಿದ್ದಾರೆ. ಇದೀಗ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಬುಲೆಟ್ ಇದ್ದಕ್ಕಿದ್ದಂತೆ ಕೋಪಗೊಂಡಿದ್ದು, ಬಿಗ್ ಬಾಸ್ ಮನೆಯಲ್ಲಿ ವಾರ್ ಶುರುವಾಗಿದೆ. ಹಾಗಾದ್ರೆ ಅಷ್ಟಕ್ಕೂ ಆಗಿದ್ದೇನುನ್ ಗೊತ್ತಾ.?

Whatsapp Group Join
Telegram channel Join

ಇದನ್ನೂ ಕೂಡ ಓದಿ : Bigg Boss Kannada : ಬಿಗ್ ಬಾಸ್ ನಲ್ಲಿ ರಾತ್ರೋರಾತ್ರಿ ನಡೆಯಿತು ಲವ್ವಿ ಡವ್ವಿ.! ಸಂಗೀತಾ-ಕಾರ್ತಿಕ್ ಮಾಡಿದ್ದೇನು ನೋಡಿ.?

ಇಂದು ಮನೆ-ಮಂದಿಯೆಲ್ಲಾ ಬಿಗ್ ಬಾಸ್ ಸೀಸನ್ ನಾಲ್ಕರ ವಿಜೇತ ಪ್ರಥಮ್, ಲಾರ್ಡ್ ಪ್ರಥಮ್ ಆಗಿ ಮನೆಗೆ ಪ್ರವೇಶಿಸಿದ್ದನ್ನು ಕಂಡು ಶಾಕ್ ಆಗಿದ್ದು, ಪ್ರಥಮ್ ಹೇಳಿದ್ದಕ್ಕೆಲ್ಲ ಹೌದು ಎಂದು ಮಾತ್ರ ಹೇಳಲು ಸಾಧ್ಯವಿರುವುದು. ಇದೀಗ ಕೊಂಚ ಗೊಂದಲಕ್ಕೀಡು ಮಾಡಿದೆ. ಇದು ಟಾಸ್ಕ್ ಆಗಿರಲಿದೆಯಾ.? ಅಥವಾ ಕೇವಲ ಅತಿಥಿ ಪಾತ್ರವಾಗಿರಲಿದೆಯಾ ಅನ್ನುವುದೇ ಸ್ಪರ್ದಿಗಳ ಪ್ರಶ್ನೆಯಾಗಿದೆ. ಈ ಮಧ್ಯೆ ಮನೆ-ಮಂದಿಯೆಲ್ಲಾ ಒಂದೊಂದು ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ, ಇತ್ತ ವಾಷ್ ರೂಮ್ ಬಳಿ ರಕ್ಷಕ್ ಬುಲೆಟ್ ಮತ್ತು ಸ್ನೇಹಿತ್ ನಡುವೆ ಮಾತಿನ ಜಟಾಪಟಿ ನಡೆದಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Vijaya Raghavendra : ಮಗನಿಗಾಗಿ ವಿಶೇಷ ಪ್ರಾರ್ಥನೆ ಮಾಡಿದ ನಟ ವಿಜಯ ರಾಘವೇಂದ್ರ.! ಚಿತ್ರೀಕರಣದಲ್ಲಿ ಬ್ಯುಸಿಯಾದ ನಟ

ರಕ್ಷಕ್ ನಡವಳಿಕೆಯನ್ನು ವಿಶ್ಲೇಷಿಸಿದ ಸ್ನೇಹಿತ್, ನಮ ಜನರಿಗೆ ಇದ್ದಿದ್ದು ಇದ್ದಂಗೆ ಹೇಳಿದ್ರೆ, ಇಷ್ಟವಾಗಲಿ. ಇದ್ದಿದ್ದಕ್ಕಿಂತ ಸ್ವಲ್ಪ ಕಮ್ಮಿ ಹೇಳಿದ್ರೆ, ಖುಷಿಯಾಗ್ತಾರೆ ಎಂದು ಹೇಳಿದ್ದಾರೆ. ಇದಕ್ಕೆ ನೇರವಾಗಿ ಉತ್ತರಿಸಿದ ರಕ್ಷಕ್ ಇಲ್ಲಿ ನಾವು ರಿಯಲ್ ಫೇಸ್ ತೋರಿಸುವುದಕ್ಕೆ ಬಂದಿದ್ದು, ಡ್ರಾಮಾ ಮಾಡಿಕೊಂಡು ನಾಟಕ ಆಡಿಕೊಂಡು ಬದುಕುವುದಕ್ಕೆ ಬಂದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಚರ್ಚೆ ಇಲ್ಲಿಗೆ ಮುಗಿಯಿತೇ.? ಅಥವಾ ಮುಂದುವರೆದಿದೆಯಾ.? ಎನ್ನುವುದನ್ನು ಇಂದಿನ ಸಂಚಿಕೆಯಲ್ಲಿ ನೋಡಿ ತಿಳಿದುಕೊಳ್ಳಬೇಕಿದೆ. ಈ ಸೀಸನ್ ನ ನಿಮ್ಮ ನೆಚ್ಚಿನ ಸ್ಪರ್ದಿ ಯಾರು ಅಂತ ಕಾಮೆಂಟ್ ಮಾಡಿ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply