ಈ ದೇವರಿಗೆ ಮಂಚ್ ಚಾಕಲೇಟ್ ಎಂದರೆ ಪ್ರಿಯ ! ಏನು‌ ಈ ದೇವಾಲಯದ ಮಹಿಮೆ.?

ಕೇರಳದ ಅಳಪ್ಪುಳದ ಚೆಮ್ಮೋತ್ ನ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಾಲಯವೇ ಕಳೆದ ಆರು ವರ್ಷಗಳಿಂದ “ಮಂಚ್ ಮುರುಗನ್” ದೇವಾಲಯ ಎಂದೇ ಜನಪ್ರಿಯಗೊಂಡಿದೆ. ಕೆಲವು ವರ್ಷಗಳ ಹಿಂದೆ ಪುಟ್ಟ ಬಾಲಕನೊಬ್ಬ ಮಂಚ್ ಚಾಕೊಲೇಟ್ ಅನ್ನು ಬಾಲಮುರುಗನ್ ದೇವರಿಗೆ ಅರ್ಪಿಸಿದ ನಂತರ ಅದನ್ನು ಇಷ್ಟಪಟ್ಟಿದ್ದಾನೆ ಎಂಬುದನ್ನು ನಂಬಲಾಗಿದೆ.

ಕಳೆದ ಎಂಟು ವರ್ಷಗಳಿಂದ ಕೇರಳದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರು ಬಾಕ್ಸ್ ಗಳಲ್ಲಿ ಮಂಚ್ ಚಾಕೋಲೇಟ್ ತಂದು ಬಾಲಮುರುಗನ್ ನಿಗೆ ಅರ್ಪಿಸುತ್ತಿದ್ದಾರಂತೆ.  ದೇವಾಲಯಕ್ಕೆ ಯಾವುದೇ ಜಾತಿ, ಧರ್ಮದ ಭೇದವಿಲ್ಲದೇ ಬಾಲಮುರುಗನ್ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಮಂಚ್ ಚಾಕೋಲೇಟ್ ಅನ್ನು ಪ್ರಸಾದವಾಗಿ ಹಂಚಲಾಗುತ್ತದೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : ಮದುವೆ ಹಾಗು ಗಂಡ ಹೆಂಡತಿ ಸೇರೋಕೆ ಸೂಕ್ತ ವಯಸ್ಸು ಯಾವುದು?

Munch chocolate is dear to this god! What is the glory of this temple?

ದೇವಸ್ಥಾನಕ್ಕೆ ಮೊದಲು ಹಣ್ಣು, ಕಾಯಿ-ಹಂಪಲು, ದ್ರಾಕ್ಷಿ, ಗೋಡಂಬಿ ಸೇರಿದಂತೆ ಇನ್ನಿತರ ನೈವೇದ್ಯ ಅರ್ಪಿಸುತ್ತಿದ್ದರಂತೆ. ಆರು ವರ್ಷಗಳ ಹಿಂದೆ ಮುಸ್ಲಿಮ್ ಬಾಲಕನೊಬ್ಬ ಆಟವಾಡುತ್ತಿದ್ದಾಗ, ಒಂದು ಬಾರಿ ದೇವಾಲಯದ ಗಂಟೆಯನ್ನು ಬಾರಿಸಿದ್ದ. ಆದರೆ ಆತನ ಪೋಷಕರು ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದರಂತೆ. ಕಾಕತಾಳೀಯ ಎಂಬಂತೆ ಆದೇ ದಿನ ರಾತ್ರಿ ಬಾಲಕನಿಗೆ ಅನಾರೋಗ್ಯ ಕಾಣಿಸಿಕೊಂಡು, ರಾತ್ರಿಯಿಡಿ ನಿದ್ದೆಯಲ್ಲಿ ಮುರುಗನ್ ಹೆಸರನ್ನು ಕನವರಿಸುತ್ತಿದ್ದ.

WhatsApp Group Join Now
Telegram Group Join Now

ಮರುದಿನ ಆತನನ್ನು ಪೋಷಕರು ಬಾಲಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕರೆದುಕೊಂಡು ಬಂದು, ಅರ್ಚಕರ ಬಳಿ ವಿಷಯ ತಿಳಿಸಿದಾಗ, ದೇವರಿಗೆ ಏನಾದರು ಹರಕೆ ಕೊಡುವಂತೆ ಹೇಳಿದ್ದರು. ಆಗ ಪೋಷಕರು ಎಳ್ಳೆಣ್ಣೆ ಮತ್ತು ಹೂವು ಅರ್ಪಿಸುವುದಾಗಿ ತಿಳಿಸಿದ್ದು, ಅದಕ್ಕೆ ಬಾಲಕ ತನ್ನಲ್ಲಿದ್ದ ಮಂಚ್ ಚಾಕೋಲೇಟ್ ಅರ್ಪಿಸುವುದಾಗಿ ಹಠ ಹಿಡಿದುಬಿಟ್ಟಿದ್ದನಂತೆ.

ಇದನ್ನೂ ಕೂಡ ಓದಿ : ಹೆಣ್ಣುಮಕ್ಕಳು ರಾತ್ರಿ ನೈಟಿ ಧರಿಸಿದರೆ ಇಷ್ಟೆಲ್ಲ ಪ್ರಯೋಜನವಿದೆ.!

WhatsApp Group Join Now
Telegram Group Join Now

ಕೊನೆಗೆ ಆತನ ಕೋರಿಕೆಯಂತೆ ಮಂಚ್ ಚಾಕೋಲೇಟ್ ಅನ್ನು ದೇವರಿಗೆ ಅರ್ಪಿಸಲಾಗಿತ್ತು. ಪವಾಡ ಎಂಬಂತೆ ಈ ಘಟನೆಯ ನಂತರ ಆತ ಗುಣಮುಖನಾಗಿಬಿಟ್ಟಿದ್ದ. ಈ ಮುಸ್ಲಿಮ್ ಬಾಲಕನ ವಿಷಯ ಊರೆಲ್ಲಾ ಹಬ್ಬತೊಡಗಿತ್ತು. ಹೀಗೆ ಬಾಲಮುರುಗನ್ ಪುಟ್ಟ ಬಾಲಕನಿಂದಾಗಿ ತನ್ನ ನೈವೇದ್ಯದಿಂದಾಗಿ “ಮಂಚ್ ಮುರುಗನ್” ಎಂದು ಈ ದೇವಾಲಯ ಖ್ಯಾತಿ ಪಡೆಯಿತು.

Munch chocolate is dear to this god! What is the glory of this temple?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply