MGNREGA Labour Work : ನರೇಗಾ ಕಾರ್ಮಿಕರಿಗೆ ಬಂಪರ್ | ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ | ಹಳ್ಳಿಯ ಜನರು ತಪ್ಪದೆ ನೋಡಿ

MGNREGA Labour Work : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್ ನೀಡಿದೆ. ಇಲ್ಲಿಯವರೆಗೂ ಕೂಡ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಹಾಗೂ ರಾಜ್ಯ ಸರ್ಕಾರ ನಿಗದಿಪಡಿಸಿರುವ ದಿನಗೂಲಿ ಹಣದಲ್ಲಿ ಭಾರಿ ದೊಡ್ಡ ಬದಲಾವಣೆಯನ್ನು ಮಾಡಿ ಹೆಚ್ಚಳವನ್ನು ಮಾಡಿ ಕೇಂದ್ರ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಅಂದರೆ ಗ್ರಾಮ ಮಟ್ಟದಲ್ಲಿ 100 ದಿನಗಳ ಗ್ಯಾರಂಟಿ ಉದ್ಯೋಗ ಕೆಲಸಕ್ಕೆ ವಿಧಿಸಲಾಗಿರುವ ಕೂಲಿ ಹಣವನ್ನ ಭಾರಿ ಪ್ರಮಾಣದಲ್ಲಿ ಕೇಂದ್ರ ಸರ್ಕಾರವು ಹೆಚ್ಚಳ ಮಾಡಿ ಕೆಲಸ ಮಾಡುವ ಬಡ ಕಾರ್ಮಿಕರಿಗೆ ಹಾಗೂ ಬಡಜನರಿಗೆ ಮತ್ತು ಬಡ ಗ್ರಾಮೀಣ ಜನತೆಗೆ ಬಂಪರ್ ಗಿಫ್ಟ್ ನೀಡಿದೆ.

ಇದನ್ನೂ ಕೂಡ ಓದಿ : Scholarship : ಕಲಿಕಾ ಭಾಗ್ಯ ಯೋಜನೆ ಅಡಿಯಲ್ಲಿ ರಾಜ್ಯದ ಬಡ ಮಕ್ಕಳಿಗೆ ಸಿಗಲಿದೆ ₹50,000/- ವರೆಗೆ ಉಚಿತ ಸ್ಕಾಲರ್ಶಿಪ್.! ಇಂದೇ ಅರ್ಜಿ ಸಲ್ಲಿಸಿ!

ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ 2024-25 ರ ಆರ್ಥಿಕ ವರ್ಷಕ್ಕೆ ಮಹಾತ್ಮಾ ಗಾಂಧಿ ನರೇಗಾ ಕೃಷಿ ಕಾರ್ಮಿಕರ ವೇತನ ದರಗಳಲ್ಲಿ ಮೂರರಿಂದ 10%ರಷ್ಟು ಹೆಚ್ಚಳವನ್ನ ಕೇಂದ್ರವು ಸೂಚಿಸಿದೆ. ಈ ಹೊಸ ತೀರ್ಮಾನದ ಪ್ರಕಾರ ಕಾರ್ಮಿಕರ ದಿನಗೂಲಿ ಏಪ್ರಿಲ್ 1, 2024 ರಿಂದ ಜಾರಿಗೆ ಬಂದಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ 2025ರ ಸೆಕ್ಷನ್ 6 ರ ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅದು ಕೇಂದ್ರವು ಅಧಿಸೂಚನೆ ಮೂಲಕ ತನ್ನ ಫಲಾನುಭವಿಗಳಿಗೆ ಕೂಲಿ ದರವನ್ನು ನಿರ್ದಿಷ್ಟ ಪಡಿಸಬಹುದು ಎಂದು ಹೇಳುತ್ತದೆ. ಮತ್ತು ಹೊಸ ವೇತನ ದರಗಳು ಏಪ್ರಿಲ್ 1, 2024 ರಿಂದ ಜಾರಿಗೆ ಬರುತ್ತವೆ.

ಇದನ್ನೂ ಕೂಡ ಓದಿ : SSLC Result 2024 : ರಾಜ್ಯದ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ.! ಯಾವ ದಿನಾಂಕ ಗೊತ್ತಾ.? ಡೈರೆಕ್ಟ್ ಲಿಂಕ್

2024-25 ರ ಆರ್ಥಿಕ ವರ್ಷಕ್ಕೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಅಡಿಯಲ್ಲಿ ಕೌಶಲ್ಯ ರಹಿತ ಕೈಯಿಂದ ಕೆಲಸ ಮಾಡುವ ಕಾರ್ಮಿಕರಿಗೆ ಹೊಸ ವೇತನ ದರಗಳನ್ನು ಕೇಂದ್ರವು ಬುಧವಾರ ಪ್ರಕಟಿಸಿದೆ. ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಕರ್ನಾಟಕ ರಾಜ್ಯದ ಗ್ರಾಮೀಣ ಜನತೆಗೆ ಕೇವಲ 33 ರೂಪಾಯಿಗಳನ್ನು ಹೆಚ್ಚಳ ಮಾಡಿ ಪ್ರಸ್ತುತ ಈಗ ಸದ್ಯಕ್ಕೆ 349 ರೂಪಾಯಿಗಳನ್ನಾಗಿ ವೇತನವನ್ನು ನಿಗದಿಗೊಳಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಿಂದ ಈ ಹಣ ಯಾವುದಕ್ಕೂ ಸಾಲುವುದಿಲ್ಲ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply