Lunar Eclipse : ಚಂದ್ರಗ್ರಹಣ 2024 ಇಂದು ಹುಣ್ಣಿಮೆ – ಕರ್ನಾಟಕದಲ್ಲಿ ಗ್ರಹಣದ ಸಮಯ ಸಂಪೂರ್ಣ ಮಾಹಿತಿ.!

Lunar Eclipse : ಈ ವರ್ಷದ ಮೊದಲ ಚಂದ್ರಗ್ರಹಣ ಇದಾಗಿದ್ದು, ನಮ್ಮ ಭಾರತದಲ್ಲಿ ಗ್ರಹಣಕ್ಕೆ ವಿಶೇಷವಾದ ಸ್ಥಾನವಿದೆ. ಅದರಲ್ಲೂ ಮುಖ್ಯವಾಗಿ ಚಂದ್ರ ಗ್ರಹಣಕ್ಕೆ ಸಾಕಷ್ಟು ಪ್ರಮಾಣದ ಗೌರವ ಕೂಡ ಇದೆ. ಆದರೆ ಗ್ರಹಣವು ಹಿಂದೂ ಶಾಸ್ತ್ರಗಳಲ್ಲಿ ಅನೇಕ ರೀತಿಯಲ್ಲಿ ವಿಸ್ತರಿಸಿ ವಿವರಿಸಲಾಗಿದೆ. ಆದರೆ 2024 ರಲ್ಲಿ ಮೊದಲನೆಯದಾಗಿ ನಡೆಯುತ್ತಿರುವ ಈ ಚಂದ್ರ ಗ್ರಹಣವು ನಮ್ಮ ಕರ್ನಾಟಕದಲ್ಲಿ ಯಾವ ದಿನಾಂಕದಂದು ಯಾವ ಸಮಯದಲ್ಲಿ ನಡೀತಾ ಇದೆ.

ಹಾಗೂ ಕರ್ನಾಟಕದಲ್ಲಿ ಚಂದ್ರ ಗ್ರಹಣ ಗೋಚರಿಸುವ ಸ್ಥಳ ಯಾವ್ಯಾವು ಹಾಗು ಈ ಚಂದ್ರ ಗ್ರಹಣದಿಂದಾಗಿ ಯಾವ ರಾಶಿಗಳಿಗೆ ಶುಭ ಮತ್ತು ಅಶುಭ ಉಂಟಾಗಲಿದೆ. ಯಾವ ರಾಶಿ ಚಕ್ರಗಳ ಮೇಲೆ ಹೇಗೆ ಪರಿಣಾಮ ಉಂಟಾಗಲಿದೆ ಅನ್ನುವ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Poultry Farming : ಕೋಳಿ ಸಾಕಾಣಿಕೆ ಮಾಡಲು 25 ಲಕ್ಷ ಸಹಾಯಧನ ರೈತರಿಗೆ ನಿರುದ್ಯೋಗಿಗೆ ಗೃಹಿಣಿಯರಿಗೆ.!! #farming

ಹಿಂದೂ ಪಂಚಾಂಗದ ಪ್ರಕಾರ ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಎರಡು ಸೂರ್ಯ ಗ್ರಹಣಗಳು ಮತ್ತು ಎರಡು ಚಂದ್ರಗ್ರಹಣಗಳು. ಮೊದಲ ಸೂರ್ಯಗ್ರಹಣವು ಏಪ್ರಿಲ್ 8, 2024 ರಂದು ಗೋಚರಿಸುತ್ತದೆ. ಹಾಗೆ ಮೊದಲ ಚಂದ್ರಗ್ರಹಣವು ಹೋಳಿ ಹಬ್ಬದ ಅವಧಿಯಲ್ಲಿ ಇರುತ್ತದೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ 2024 ರ ಮೊದಲ ಚಂದ್ರಗ್ರಹಣವು ಮಾರ್ಚ್ 25 ರ ಸೋಮವಾರ ಸಂಭವಿಸಲಿದೆ ಎಂದು ತಜ್ಞರು ತಿಳಿಸಿದ್ದಾರೆ.

WhatsApp Group Join Now
Telegram Group Join Now

ಅದೇ ದಿನ ಹೋಳಿ ಹಬ್ಬ ಬಂದಿರುವುದರಿಂದ ಅದರ ಮಹತ್ವವನ್ನ ಹೆಚ್ಚಿಸುತ್ತೆ. ಗ್ರಹಣವು ಮಾರ್ಚ್ 25 ರಂದು ಬೆಳಿಗ್ಗೆ 10:24 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3:01 ನಿಮಿಷಕ್ಕೆ ಕೊನೆಗೊಳ್ಳಲಿದೆ. ಮಾರ್ಚ್ 25 ಪಾಲ್ಗುಣ ಮಾಸದ ಪೂರ್ಣಿಮಾ ತಿಥಿ. ಆದರೂ ಹೋಳಿ ಹಬ್ಬದ ಮೇಲೆ ಗ್ರಹಣದ ಪರಿಣಾಮಗಳು ಇರುವುದಿಲ್ಲ. ಆದ್ದರಿಂದ ನೀವು ಎಂದಿನಂತೆ ಹೋಳಿಯ ಸಾಮಾನ್ಯ ಆಚರಣೆಗಳನ್ನ ಆಚರಿಸಬಹುದು. ಭಾರತದಲ್ಲಿ ಚಂದ್ರಗ್ರಹಣವು ಗೋಚರಿಸದೇ ಇದ್ದರೂ ಅದರ ಖಗೋಳ ಪರಿಣಾಮಗಳು ಮುಖ್ಯವಾಗಿ ಈ ಮೂರು ರಾಶಿಗಳಾದ ಮೇಷ ರಾಶಿ, ಕರ್ಕ ರಾಶಿ ಹಾಗು ಕನ್ಯಾ ರಾಶಿಯ ಜನರ ಮೇಲೆ ಕಂಡು ಬರುತ್ತವೆ.

ಇದನ್ನೂ ಕೂಡ ಓದಿ : Drought Relief : ಬರಪೀಡಿತ ಜಿಲ್ಲೆಗಳ ರೈತರಿಗೆ – ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ – ₹6000 ಹಣ ಖಾತೆಗೆ ಜಮೆ.!

WhatsApp Group Join Now
Telegram Group Join Now

ಈ ರಾಶಿ ಚಕ್ರ ಚಿನ್ಹೆಗಳೊಂದಿಗೆ ಜನಿಸಿದವರು ತಮ್ಮ ಜೀವನದಲ್ಲಿ ಸುಧಾರಣೆಯನ್ನ ಕಾಣುತ್ತಾರೆ. ಅವರಿಗೆ ಈ ಸಮಯ ಮಂಗಳಕರವೆಂದು ನಂಬಲಾಗಿದೆ. ಹಣಕಾಸಿನ ಲಾಭ, ಗೌರವ ಹೆಚ್ಚಳ, ಉದ್ಯೋಗಳಲ್ಲಿ ಹೊಸ ಅವಕಾಶಗಳು ಮತ್ತು ಅವರ ಜೀವನದಲ್ಲಿ ಇತರ ಸಕಾರಾತ್ಮಕ ಬದಲಾವಣೆಗಳು ಕಾಣಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply