Kiccha Sudeep : ಹೊಸ ಚಿತ್ರದ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ಕಿಚ್ಚ ಸುದೀಪ್!

Kiccha Sudeep : ವಿಕ್ರಾಂತ್ ರೋಣ ಸಿನಿಮಾದ ಬಳಿಕ ಕಿಚ್ಚ ಸುದೀಪ್ ಯಾವುದೇ ಸಿನಿಮಾವನ್ನ ಘೋಷಿಸಿರಲಿಲ್ಲ. ಬರೋಬ್ಬರಿ ಒಂದು ವರ್ಷ ಬ್ರೇಕ್ ತೆಗೆದುಕೊಂಡಿದ್ದರು ಕಿಚ್ಚ. ಇದೆಲ್ಲದರ ನಡುವೆ ಕಿಚ್ಚನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾದ ಕುರಿತು ಕುತೂಹಲದಿಂದ ಕಾಯುತ್ತಿದ್ದಾರೆ.

ಇದನ್ನೂ ಕೂಡ ಓದಿ : ಮಹಿಳೆಯನ್ನು ಮುಟ್ಟದೆ ಏಕಕಾಲಕ್ಕೆ 60 ಮಕ್ಕಳ ತಂದೆಯಾದವನ ರೋಚಕ ಕಥೆ ಇದು!

ಸ್ವತಃ ಕಿಚ್ಚ ಸುದೀಪ್ ಅವರೇ ತಮ್ಮ ಮುಂದಿನ ಚಿತ್ರದ ಕುರಿತು ಟ್ವಿಟರ್ ನಲ್ಲಿ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. ನನ್ನ ಮುಂದಿನ ಚಿತ್ರದ ಬಗ್ಗೆ ನೀವು ಮಾಡುತ್ತಿರುವ ಮೀಮ್ಸ್ ಗಳು, ಟ್ವೀಟ್ ಗಳು ಪ್ರತಿಯೊಂದು ನನಗೆ ಅರ್ಥವಾಗುತ್ತೆ. ಹಾಗಾಗಿ ನಾನು ಮುಂದಿನ ಸಿನಿಮಾದ ಕುರಿತು ಒಂದು ಸ್ಪಷ್ಟನೆ ಕೊಡಲು ಬಯಸುತ್ತೇನೆ.

ವಿಕ್ರಾಂತ್ ರೋಣ ಸಿನಿಮಾದ ನಂತರ ನಾನು ಸುದೀರ್ಘ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದೆ. ಇದರ ನಡುವೆ ಬಿಗ್ ಬಾಸ್ ಕೂಡ ಕೂಡ ಬಂದಿದ್ದರಿಂದ ಬ್ರೇಕ ತೆಗೆದುಕೊಳ್ಳಲೇ ಬೇಕಾಯಿತು. ಅದರ ಜೊತೆಗೆ ನಾನು ಇಷ್ಟ ಪಡುವ ಕ್ರಿಕೆಟ್ ನಲ್ಲಿ ಮುಳುಗಿಹೋಗಿದ್ದೆ. ಈವಾಗ ಸಧ್ಯಕ್ಕೆ ಮೂರು ಕಥೆಗಳನ್ನು ನಾನು ಫೈನಲ್ ಮಾಡಿದ್ದೇನೆ. ಅಂದ್ರೆ, ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಆದ್ರೆ, ಈ ಕಥೆಗಳಿಗೆ ಭಾರೀ ಸಿದ್ಧತೆ ಮಾಡಬೇಕಾಗಿದೆ. ಅದಕ್ಕಾಗಿ ಮೂರು ತಂಡಗಳು ಸಹ ಅದರ ತಯಾರಿಯಲ್ಲಿದೆ. ಸಧ್ಯದಲ್ಲೇ ನಿಮ್ಮೆಲ್ಲರ ಮುಂದೆ ಸಿನಿಮಾ ಘೋಷಣೆ ಮಾಡುತ್ತೇನೆ’ ಎಂದಿದ್ದಾರೆ ಕಿಚ್ಚ ಸುದೀಪ್.

ಇದನ್ನೂ ಕೂಡ ಓದಿ :- Katera : KGF ಅನ್ನೂ ಮೀರಿಸುತ್ತಂತೆ ಕಾಟೇರ! ಪ್ರಶಾಂತ್ ನೀಲ್ ಗೆ ಠಕ್ಕರ್ ಕೊಡಲು ರೆಡಿ ಅಂದ್ರಾ ತರುಣ್ ಸುಧೀರ್!

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply