Kantara : ರಿಷಬ್ ಶೆಟ್ಟಿಗೆ ಮತ್ತೊಂದು ಅವಾರ್ಡ್ ತಂದುಕೊಟ್ಟ ‘ಕಾಂತಾರ’!

Kantara : ರಿಷಬ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಕಾಂತಾರ’ ಸಿನಿಮಾ ದೇಶಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ‘ಕಾಂತಾರ’ ಚಿತ್ರ ರಿಷಬ್ ಶೆಟ್ಟಿಯವರಿಗೆ ಖ್ಯಾತಿಯ ಜೊತೆಗೆ ಸಾಕಷ್ಟು ಪ್ರಶಸ್ತಿಗಳನ್ನು ಸಹ ನೀಡುತ್ತಿದೆ. ರಿಷಬ್ ಶೆಟ್ಟಿಯವರಿಗೆ ಕಾಂತಾರ ಸಿನಿಮಾ ಈಗ ಮತ್ತೊಂದು ಅವಾರ್ಡ್ ತಂದುಕೊಟ್ಟಿದೆ.

ಇದನ್ನೂ ಕೂಡ ಓದಿ : ಕಾಂತಾರ – 2 ಗೆ ಇಷ್ಟೊಂದು ಸಂಭಾವನೆ ಕೇಳಿದ್ರಾ ರಿಷಬ್ ಶೆಟ್ಟಿ.!

‘ಕಾಂತಾರ’ ಚಿತ್ರಕ್ಕಾಗಿ ನಿರ್ದೇಶಕ ಕಮ್ ನಟ ರಿಷಬ್ ಶೆಟ್ಟಿಯವರಿಗೆ ‘ಓಟಿಟಿ ಪ್ಲೇ ಗೇಮ್ ಚೇಂಜರ್ ಆಫ್ ದಿ ಇಯರ್’ ಪ್ರಶಸ್ತಿ ನೀಡಲಾಗಿದೆ. ರಿಷಬ್ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ಪ್ರಶಸ್ತಿ ಪಡೆದ ಸಂಭ್ರಮವನ್ನ ಹಂಚಿಕೊಂಡಿದ್ದಾರೆ.

ಇನ್ನೊಂದು ವಿಶೇಷವೇನೆಂದರೆ, ರಿಷಬ್ ಶೆಟ್ಟಿಯವರು ಈ ಪ್ರಶಸ್ತಿ ಸಮಾರಂಭಕ್ಕೆ ದೇಸಿ ಉಡುಗೆಯಾದ ಪಂಚೆಯಲ್ಲೇ ಹೋಗಿದ್ದು, ಇಂಗ್ಲಿಷ್ ಹಾಗು ಹಿಂದಿ ಮಿಶ್ರಿತ ಭಾಷೆಯಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಕಾಂತಾರ ಯಶಸ್ಸಿನಿಂದ ರಿಷಬ್ ಅವರ ನೇಮ್, ಫೇಮ್ ಬದಲಾಗಿರುವುದಂತೂ ಸತ್ಯ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply