Health Tips : ಪುರುಷರ ಬೀಜಗಳು ದಿನಕ್ಕೆ ಎಷ್ಟು ಲಕ್ಷ ವೀರ್ಯಾಣು ಉತ್ಪಾದನೆ ಮಾಡುತ್ತದೆ ಗೊತ್ತಾ.?

Health Tips : ನಮಸ್ಕಾರ ಸ್ನೇಹಿತರೇ, ವೃಷಣಗಳು ಅಂದರೆ, ಆಡುಭಾಷೆಯಲ್ಲಿ ಬೀಜಗಳು ಎಂದು ಕರೆಯುತ್ತೇವೆ. ಪ್ರತೀ ಪುರುಷನಲ್ಲಿ ಎರಡು ಬೀಜಗಳು ಇರುತ್ತವೆ. ಇವು ವೃಷಣ ಚೀಲದ ಒಳಗಡೆ ಬಲ ಭಾಗದಲ್ಲಿರುವುದಕ್ಕಿಂತ ಎಡಭಾಗದಲ್ಲಿರುವುದು ಸ್ವಲ್ಪ ಕೆಳಗಿರುತ್ತದೆ.

ಹಾಗು ಮೊಟ್ಟೆಯಾಕಾರದಲ್ಲಿದ್ದು, ಹೆಣ್ಣಿನ ಅಂಡಾಶಯಕ್ಕೆ ಸಮನಾಗಿರುವ ಗ್ರಥಿಗಳಾಗಿವೆ. ಇದರ ಗಾತ್ರ 2 ರಿಂದ 4 ಸೆಂ.ಮೀ ಹಾಗು ತೂಕ 30 ರಿಂದ 50 ಗ್ರಾಂ ನಷ್ಟಿರುತ್ತದೆ. ವೀರ್ಯವನ್ನು ಉತ್ಪಾದನೆ ಮಾಡುವುದೇ ವೃಷಣಗಳ ಕಾರ್ಯವಾಗಿದ್ದು, ದಿನಕ್ಕೆ 50 ದಶಲಕ್ಷ ವೀರ್ಯಾಣು ಉತ್ಪಾದನೆ ಮಾಡುವಂತಹ ಸಾಮರ್ಥ್ಯವನ್ನು ವೃಷಣಗಳು ಹೊಂದಿರುತ್ತವೆ.

ಇದನ್ನೂ ಕೂಡ ಓದಿ : PM-Kisan Samman Nidhi : ರೈತರಿಗೆ ಗುಡ್ ನ್ಯೂಸ್.! ಪಿಎಂ ಕಿಸಾನ್ 15ನೇ ಕಂತು ಇನ್ನು ಮೂರು ದಿನಗಳಲ್ಲಿ ರೈತರ ಖಾತೆಗೆ ಜಮಾ.!

ವೀರ್ಯಾಣು ಉತ್ಪತ್ತಿಗೆ ದೇಹದ ಶಾಖಕ್ಕಿಂತ 10 ರಿಂದ 20ರಷ್ಟು ಕಡಿಮೆ ಇರಬೇಕು. ಅದಕ್ಕಾಗಿ ಇವು ದೇಹದಿಂದ ಹೊರಗೆ ವೃಷಣ ಚೀಲದಲ್ಲಿವೆ. ಮತ್ತು ವೀರ್ಯದ ಉತ್ಪಾದನೆ ದೇಹದ ಹಾಗು ಧರಿಸುವ ವಸ್ತ್ರದ ಶಾಖದ ಪರಿಣಾಮವಾಗಿ ಕಡಿಮೆಯಾಗಲೂಬಹುದು. ಉತ್ಪತ್ತಿಯಾದ ವೀರ್ಯವು ವೀರ್ಯನಾಳದ ಮೂಲಕ ವೀರ್ಯಕೋಶವನ್ನು ಸೇರುತ್ತದೆ. ಮತ್ತೆ ವೀರ್ಯ ಸ್ಕಲನದ ಸಮಯದಲ್ಲಿ ವೀರ್ಯಕೋಶದ ಗ್ರಂಥಿಯ ಜೊತೆ ಸೇರಿ, ಮೂತ್ರನಾಳದ ಮೂಲಕ ಹೊರಬರುತ್ತದೆ.

ಇದನ್ನೂ ಕೂಡ ಓದಿ : Drought Relief : 2023-24ನೇ ಸಾಲಿನ ರಾಜ್ಯದ ರೈತರ ಬರ ಪರಿಹಾರ ಹಣ ಬಿಡುಗಡೆ / ಹಣ ಪಡೆಯಲು ಈ ದಾಖಲೆ ಇದ್ದರೆ ಸಾಕು

ಹಾಗು ವೀರ್ಯಕೋಶವು 4 ರಿಂದ 8ಮೀ.ಲಿ ನಷ್ಟು ವೀರ್ಯ ಹಿಡಿದಿರುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಇವುಗಳ ಲೈಂಗಿಕ ಕ್ರಿಯೆಯ ವೇಳೆ ದೊಡ್ಡದಾಗುತ್ತವೆ. ಹೌದು, ಗಂಡಸರು ಲೈಂಗಿಕ ಪ್ರಚೋದನೆಗೆ ಒಳಗಾದಾಗ ರಕ್ತವು ಅವನ ಶಿಶ್ನಕ್ಕೆ ಹರಿಯುತ್ತದೆ. ಈ ಸಮಯದಲ್ಲಿ ರಕ್ತವು ವೃಷಣಗಳಿಗೂ ಹರಿಯುತ್ತವೆ. ಇದು ಪುರುಷರ ವೃಷಣಗಳು ಸುಮಾರು ಗಾತ್ರದ ಅರ್ಧದಷ್ಟು ಹಿಗ್ಗುವಂತೆ ಮಾಡುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply