Daali Dhananjay : ಹೊಯ್ಸಳ ಸಿನಿಮಾದ ಮೊದಲನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ? Gurudev Hoysala 1st Day Collection

ಡಾಲಿ ಧನಂಜಯ್(Daali Dhananjay) ಅಭಿನಯದ 25ನೇ ಚಿತ್ರ ,ಗುರುದೇವ್ ಹೊಯ್ಸಳ, ನಿನ್ನೆ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗಿತ್ತು. ಗುರುದೇವ್ ಹೊಯ್ಸಳ(Gurudev Hoysala) ಸಿನಿಮಾ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಧನಂಜಯ್ ಗುರುದೇವ್ ಹೊಯ್ಸಳ ಎಂಬ ರಫ್ ಅಂಡ್ ಟಫ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ್ ಅವರಿಗೆ ಜೋಡಿಯಾಗಿ ನಟಿ ಅಮೃತ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಈ ಸಿನಿಮಾ ಬಿಡುಗಡೆಯಾದ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತಾ?

ಇದನ್ನೂ ಕೂಡ ಓದಿ : Kantara : ರಿಷಬ್ ಶೆಟ್ಟಿಗೆ ಮತ್ತೊಂದು ಅವಾರ್ಡ್ ತಂದುಕೊಟ್ಟ ‘ಕಾಂತಾರ’!

WhatsApp Group Join Now
Telegram Group Join Now

ಕಳೆದ ವಾರ ಕಿಚ್ಚ ಸುದೀಪ್ ಅವರು ಈ ಚಿತ್ರದ ಟ್ರೈಲರ್ ಅನ್ನ ಬಿಡುಗಡೆ ಮಾಡಿದ್ದು. ಪ್ರೇಕ್ಷಕರಿಂದ ಬಾರಿ ಮೆಚ್ಚುಗೆ ವ್ಯಕ್ತ ವಾಗಿತ್ತು. ಇದೊಂದು ಉತ್ತರ ಕರ್ನಾಟಕ ಭಾಷೆಯ ಸೊಗಡಿನ ಚಿತ್ರವಾಗಿದ್ದು, ಬಹುತೇಕ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ಆಗಿದೆ. ಈ ಸಿನಿಮಾಗೆ ಕನ್ನಡ ಚಿತ್ರರಂಗದ ಹಲವಾರು ನಟ ನಟಿಯರು ಶುಭಕೊರಿದ್ದು, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಥಿಯೇಟರ್ ಗೆ ಬಂದು ಅಭಿಮಾನಿಗಳ ಜೊತೆ ಸಿನಿಮಾ ನೋಡಿದ್ದಾರೆ. ಇನ್ನೂ ಕಿಚ್ಚ ಸುದೀಪ್ ಅವರು ಬಿಡುಗಡೆ ಮುನ್ನವೇ ಸಿನಿಮಾ ನೋಡಿದ್ದು, ಧನಂಜಯ್ ಅವರ ಪೊಲೀಸ್ ಪಾತ್ರಕ್ಕೆ ಫಿದಾ ಆಗಿದ್ದಾರಂತೆ. ಹಾಗು ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಚಿತ್ರ ತಂಡಕ್ಕೆ ಶುಭಾಶಯ ಕೋರಿದ್ದಾರೆ.

ಇದನ್ನೂ ಕೂಡ ಓದಿ : Kantara 2 : ಕಾಂತಾರ – 2 ಗೆ ಇಷ್ಟೊಂದು ಸಂಭಾವನೆ ಕೇಳಿದ್ರಾ ರಿಷಬ್ ಶೆಟ್ಟಿ.!

WhatsApp Group Join Now
Telegram Group Join Now

ಈ ಸಿನಿಮಾ ನೋಡಿರುವ ಪ್ರೇಕ್ಷಕರು ವಿಮರ್ಶಕರು ಬಹಳ ಇಷ್ಟ ಪಟ್ಟಿದ್ದು ಡಾಲಿ ಧನಂಜಯ್ ಅವರನ್ನ, ಮತ್ತು ಇಡೀ ಸಿನಿಮಾಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇಡೀ ರಾಜ್ಯಾದ್ಯಂತ 300 ಕ್ಕೂ ಅಧಿಕ ಥಿಯೇಟರ್ಗಳಲ್ಲಿ ಬಿಡುಗಡೆಯಾಗಿರುವ ಹೊಯ್ಸಳ ಸಿನಿಮಾ ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು. ಸುಮಾರು 2 ರಿಂದ 3ಕೋಟಿ ಕಲೆಕ್ಷನ್ ಮಾಡಿದೆ ಅಂತ ಗಾಂಧಿನಗರ ಸಿನಿ ಪಂಡಿತರು ಲೆಕ್ಕಾಚಾರ ಮಾಡಿದ್ದಾರೆ. ನಿಮ್ಮ ಪ್ರಕಾರ ಈ ಸಿನಿಮಾ ಹೇಗಿದೆ ಮತ್ತು ಎಷ್ಟು ಕಲೆಕ್ಷನ್ ಮಾಡುತ್ತದೆ ಕಾಮೆಂಟ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply