Darshan Thoogudeepa : ವಿವಾದ ಸೃಷ್ಟಿಸಿದ ಡಿಬಾಸ್ ದರ್ಶನ್ ಹಾಗು ಧ್ರುವ ಸರ್ಜಾ ನಡೆ..! ಇದಕ್ಕೆ ಅಸಲಿ ಕಾರಣ ಏನು ಗೊತ್ತಾ.?

Darshan Thoogudeepa : ನಮಸ್ಕಾರ ಸ್ನೇಹಿತರೇ, ನಿಮಗೆಲ್ಲ ಗೊತ್ತಿರುವ ಹಾಗೆ ಕೆಲ ದಿನಗಳ ಹಿಂದೆ ಕರ್ನಾಟಕ ಬಂದ್ ಮಾಡಲಾಗಿತ್ತು. ಹಾಗು ಕಾವೇರಿಗಾಗಿ ಎಲ್ಲಾ ಸ್ಯಾಂಡಲ್ ವುಡ್ ನಟರು ಹೋರಾಡಿದ್ದರು. ಆ ಹೋರಾಟಕ್ಕೆ ಮೊದಲು ಬಂದವರೇ ಡಿಬಾಸ್ ದರ್ಶನ್ ಅವರು. ರೈತರಿಗೆ ಅನ್ಯಾಯವಾಗಿದೆ ಅಂತ ತಿಳಿದ ತಕ್ಷಣ ದರ್ಶನ್ ಅವರು ಟ್ವೀಟ್ ಮಾಡ್ತಾರೆ. ಹಾಗು ಕಾವೇರಿ ಹೋರಾಟಕ್ಕೆ ನನ್ನ ಸಪೋರ್ಟ್ ಕೂಡ ಇದೆ ಅಂತ ನೇರವಾಗಿಯೇ ಹೇಳಿದ್ದರು. ದರ್ಶನ್ ಅವರು ಬೆಂಬಲ ನೀಡಿದ ಬಳಿಕ ಕನ್ನಡದ ಬೇರೆ ನಟರು ಕೂಡ ರೈತರ ಸಪೋರ್ಟ್ ಗೆ ಬಂದಿದ್ದರು. ಹಾಗು ಕಾವೇರಿ ಹೋರಾಟಕ್ಕೆ ನಾವು ಕೂಡ ಸಿದ್ದ ಅಂತ ನೇರವಾಗಿ ಧುಮುಕಿದ್ದರು.

Whatsapp Group Join
Telegram channel Join

ಇದನ್ನೂ ಓದಿ : Cauvery Conflict : ಕಾವೇರಿ ಹೋರಾಟಕ್ಕೆ ಬಾರದ ಜಗ್ಗೇಶ್ ಆಸ್ಪತ್ರೆಗೆ ದಾಖಲು.? ಆತಂಕದಲ್ಲಿ ಅಭಿಮಾನಿಗಳು.!

ಕಾವೇರಿ ಹೋರಾಟದ ದಿನ ರೈತರ ಜೊತೆ ಎಲ್ಲಾ ಸ್ಯಾಂಡಲ್ ವುಡ್ ಕನ್ನಡ ನಟರು ಸೇರಿದ್ದರು. ಅದನ್ನು ನೋಡಿ ಇಡೀ ರಾಜ್ಯವೇ ಖುಷಿಪಟ್ಟಿತ್ತು. ಇದೇ ರೀತಿ ನಮ್ಮ ಸ್ಯಾಂಡಲ್ ವುಡ್ ಯಾವಾಗಲೂ ಚೆನ್ನಾಗಿಯೇ ಇರಬೇಕು ಹಾಗು ಇನ್ನಷ್ಟು ಮುಂದೆ ಹೋಗಬೇಕು ಅಂತ ಕೂಡ ಎಲ್ಲಾ ಜನರು ತುಂಬಾನೇ ಆಶಿಸಿದ್ದರು. ಡಿಬಾಸ್ ಹಾಗು ಶಿವಣ್ಣ ಅವರನ್ನು ಒಂದೇ ವೇದಿಕೆ ಮೇಲೆ ನೋಡಿದ ಎಲ್ಲಾ ಅಭಿಮಾನಿಗಳು ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟಿದ್ದರು. ಆದರೆ ಇದಾದ ಬಳಿಕ ಇನ್ನೊಂದು ವಿವಾದ ಎಲ್ಲಾ ಕಡೆ ಹರಿದಾಡುತ್ತಿದೆ. ಅದೇನೆಂದರೆ, ಡಿಬಾಸ್ ಹಾಗು ಧ್ರುವ ಸರ್ಜಾ ಅವರ ನಡುವಿನ ವಿವಾದ.

Whatsapp Group Join
Telegram channel Join

ಹೌದು, ಡಿಬಾಸ್ ಅವರು ವೇದಿಕೆ ಮೇಲೆ ಬರುತ್ತಿದ್ದಂತೆ ಧ್ರುವ ಸರ್ಜಾ ಅವರು ಅಲ್ಲಿಂದ ವೇದಿಕೆಯಿಂದ ಇಳಿದು ಹೋದರು. ಅದನ್ನು ನೋಡಿದ ಎಲ್ಲಾ ಡಿಬಾಸ್ ಹಾಗು ಧ್ರುವ ಸರ್ಜಾ ಅಭಿಮಾನಿಗಳು ಶಾಕ್ ಆಗಿದ್ದರು. ಮತ್ತೊಂದೆಡೆ ಅಲ್ಲಿ ಎಲ್ಲಾ ನಟರನ್ನು ದರ್ಶನ್ ಅವರು ಮಾತನಾಡಿಸುತ್ತಿದ್ದರು. ಆದರೆ ಧ್ರುವ ಸರ್ಜಾ ಅವರನ್ನ ಅಲ್ಲಿ ದರ್ಶನ್ ಅವರು ಮಾತನಾಡಿಸಲಿಲ್ಲ. ಧ್ರುವ ಸರ್ಜಾ ಅವರು ಕೂಡ ಹಾಗೆಯೇ ದರ್ಶನ್ ಅವರನ್ನ ನೋಡುತ್ತಿದ್ದಂತೆಯೇ ವೇದಿಕೆಯಿಂದ ಇಳಿದು ಬಂದಿದ್ದರು.

ಇದನ್ನೂ ಓದಿ : Meghana Raj : ಗಾಯದ ಮೇಲೆ ತುಪ್ಪ ಸುರಿಯಬೇಡಿ / ನನಗೆ ಯಾರ ಸಿಂಪತಿ ಬೇಕಿಲ್ಲ ಎಂದು ಕಣ್ಣೀರಿಟ್ಟ ಮೇಘನಾ ರಾಜ್.!

ಇದನ್ನು ನೋಡಿದ ಎಲ್ಲಾ ಸ್ಯಾಂಡಲ್ ವುಡ್ ಅಭಿಮಾನಿಗಳು ಇವರಿಬ್ಬರೂ ಚೆನ್ನಾಗಿಯೇ ಇದ್ದರು. ಇವರಿಬ್ಬರಿಗೇನಾಯ್ತು.? ಅಂತ ಯೋಚನೆ ಮಾಡುತ್ತಿದ್ದಾರೆ. ಇದನ್ನು ವೀಕ್ಷಿಸಿದ ದರ್ಶನ್ ಹಾಗು ಧ್ರುವ ಸರ್ಜಾ ಅಭಿಮಾನಿಗಳು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗು ಕಾಂಟ್ರವರ್ಸಿಯನ್ನ ಕ್ರಿಯೇಟ್ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಅಸಲಿ ಕಾರಣ ಇನ್ನೂ ಕೂಡ ತಿಳಿದುಬಂದಿಲ್ಲ. ಇವರಿಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವೇನು ಅನ್ನುವುದನ್ನ ಆಪ್ತ ಮೂಲಗಳಿಂದ ಇನ್ನಷ್ಟೇ ಬಹಿರಂಗವಾಗಬೇಕಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply