Cauvery Conflict : ಕಾವೇರಿ ಹೋರಾಟಕ್ಕೆ ಬಾರದ ಜಗ್ಗೇಶ್ ಆಸ್ಪತ್ರೆಗೆ ದಾಖಲು.? ಆತಂಕದಲ್ಲಿ ಅಭಿಮಾನಿಗಳು.!

Cauvery Conflict : ರಾಜ್ಯಾದ್ಯಂತ ಕಾವೇರಿ ವಿಚಾರ ಸಾಕಷ್ಟು ಬಿಸಿಯನ್ನು ಹುಟ್ಟು ಹಾಕಿದೆ. ಈ ಬೆನ್ನಲ್ಲೇ ಚಿತ್ರ ನಟರು ಸಹ ಕಾವೇರಿ ಹೋರಾಟಕ್ಕೆ ದುಮುಕಿದ್ದಾರೆ. ಹಿಂದಿನಿಂದಲೂ ಕಾವೇರು ವಿಚಾರವಾಗಿ ಧ್ವನಿಯೆತ್ತುತ್ತಾ ಬಂದಿರುವ ನಟ ಜಗ್ಗೇಶ್ ನಿನ್ನೆ ಕರ್ನಾಟಕ ಬಂದ್ ಸಮಯದಲ್ಲಿ ಎಲ್ಲೂ ಸಹ ಕಾಣಿಸಿಕೊಂಡಿಲ್ಲ. ಆದರೆ ಇದಕ್ಕೆ ಇಂಬು ಕೊಡುವಂತೆ ಇದೀಗ ಕೆಲವೊಂದಿಷ್ಟು ಆಸ್ಪತ್ರೆಯಲ್ಲಿರುವ ಅವರ ಫೋಟೋವನ್ನು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಅವರು ಎಲ್ಲಿದ್ದಾರೆ.? ಯಾವ ಆಸ್ಪತ್ರೆಯಲ್ಲಿದ್ದಾರೆ.? ಯಾಕೆ ಆಸ್ಪತ್ರೆಯಲ್ಲಿದ್ದಾರೆ.? ಎನ್ನುವ ಆತಂಕ ಇದೀಗ ಅವರ ಅಭಿಮಾನಿಗಳಿಗೆ ಕಾಡಲಾರಂಭಿಸಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : ಇಲ್ಲೊಬ್ಬ ವ್ಯಕ್ತಿ ಕಳೆದ 24 ವರ್ಷಗಳಿಂದ ಕೇವಲ ಎಳನೀರು ಕುಡಿದು ಬದುಕುತ್ತಿದ್ದಾರೆ!‌ ಯಾಕೆ ಗೊತ್ತೆ.?

Jaggesh, who did not come to the Cauvery fight, was admitted to the hospital

ಆದರೆ ಈ ಬಗ್ಗೆ ಈಗ ಸ್ವತಃ ಜಗ್ಗೇಶ್ ಅವರೇ ಟ್ವೀಟ್ ಮಾಡಿದ್ದಾರೆ. ತಮಗೆ ಯಾವ ಅನಾರೋಗ್ಯ ಕಾಡುತ್ತಿದೆ ಅಂತ ಸ್ಪಷ್ಟಪಡಿಸಿದ್ದಾರೆ. ಜಗ್ಗೇಶ್ ಅವರು ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದು ಕೆಲಕಾಲ ಆತಂಕಕ್ಕೆ ಕೂಡ ಕಾರಣವಾಗಿತ್ತು. ಆದರೆ ಜಗ್ಗೇಶ್ ಅವರು ತಮ್ಮ ಸಿಟಿ ಸ್ಕ್ಯಾನ್ ಮಾಡುತ್ತಿರುವ ಫೋಟೋವನ್ನು ಅವರೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮಗಿರುವ ಆರೋಗ್ಯ ಸಮಸ್ಯೆಯ ಬಗ್ಗೆಯೂ ಕೂಡ ಬರೆದುಕೊಂಡಿದ್ದಾರೆ.

Whatsapp Group Join
Telegram channel Join

ಎಲ್ 4 ಮತ್ತು ಎಲ್ 5 (L4L5 compression) ಕಂಪ್ರೆಶನ್ ನಿಂದ ಬಳಲುತ್ತಿದ್ದೇನೆ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ. ಹೀಗಾಗಿ ತಮಗೆ ಯಾವ ಕಾರ್ಯದಲ್ಲಿಯೂ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ತಮಗೆ ಬೆಡ್ ರೆಸ್ಟ್ ಮಾಡಲು ವೈದ್ಯರು ಸಲಹೆ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾವೇರಿ ಜಲ ವಿವಾದಕ್ಕೆ ಸಂಬಂಧ ಪಟ್ಟಂತೆ ಬಾಹರೀ ಹೋರಾಟಗಳು ನಡೆಯುತ್ತಿದೆ. ಇದಕ್ಕೆ ಕರ್ನಾಟಕ ಚಲನಚಿತ್ರದವರು ಭಾಗಿಯಾಗುತ್ತಿಲ್ಲ ಎನ್ನುವ ಆರೋಪಗಳು ಕೂಡ ಕೇಳಿಬಂದಿದ್ದವು.

ಇದನ್ನೂ ಕೂಡ ಓದಿ : Oldage Scheme : 60 ವರ್ಷ ಮೇಲ್ಪಟ್ಟವರಿಗೆ ಸಿಹಿಸುದ್ಧಿ / ಏನಿದು ಸ್ಕೀಮ್.? ಬೇಗ ಚೆಕ್ ಮಾಡಿ

Jaggesh, who did not come to the Cauvery fight, was admitted to the hospital

ಕೊನೆಗೆ ಶುಕ್ರವಾರ ನಡೆದ ಕರ್ನಾಟ ಬಂದ್ ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ನಟರಾದ ಶಿವರಾಜ್ ಕುಮಾರ್, ದರ್ಶನ್, ಧ್ರುವ ಸರ್ಜಾ, ವಿಜಯ ರಾಘವೇಂದ್ರ ಶ್ರೀಮುರಳಿ, ವಶಿಷ್ಠ ಸಿಂಹ, ಚಿಕ್ಕಣ್ಣ ಸೇರಿದಂತೆ ಹಲವಾರು ಕಲಾವಿದರು ಭಾಗಿಯಾಗಿದ್ದರು. ಆದರೆ ರಾಜ್ಯಸಭಾ ಸದಸ್ಯರಾಗಿರುವ ನಟ ಜಗ್ಗೇಶ ಅವರು ಇತ್ತೀಚಿಗೆ ಎಲ್ಲಿಯೂ ಕೂಡ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡುವ ಸಂಬಂಧ ಜಗ್ಗೇಶ್ ಅವರು ಫೋಟೋಗಳನ್ನೂ ಅಪ್ ಲೋಡ್ ಮಾಡುವ ಮೂಲಕ ಟ್ವೀಟ್ ಮಾಡಿದ್ದಾರೆ. ತಮಗಿರುವ ತೊಂದರೆಯನ್ನು ಹೇಳಿಕೊಂಡಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply