Meghana Raj : ಗಾಯದ ಮೇಲೆ ತುಪ್ಪ ಸುರಿಯಬೇಡಿ / ನನಗೆ ಯಾರ ಸಿಂಪತಿ ಬೇಕಿಲ್ಲ ಎಂದು ಕಣ್ಣೀರಿಟ್ಟ ಮೇಘನಾ ರಾಜ್.!

Meghana Raj : ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಅವರು ಇದೀಗ ಕಣ್ಣೀರು ಹಾಕಿರುವ ಘಟನೆ ನಡೆದಿದೆ. ಹಾಗಾದ್ರೆ ಆಗಿದ್ದೇನು.? ನಟಿ ಮೇಘನಾ ರಾಜ್ ಅವರು ಕನ್ನಡ ರೇಡಿಯೋ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಾನು ಸ್ಟ್ರಾಂಗ್ ಆಗಿದ್ದೀನಿ. ವೀಕ್ ಆಗಿದ್ದೀನಿ ಅಂತ ಜನರು ಮಾತನಾಡುತ್ತಿದ್ದರು. ನಾನು ಸ್ಟ್ರಾಂಗ್ ಆಗಿರಬೇಕು ಎಂದು ಆಯ್ಕೆ ಮಾಡಿಕೊಂಡಿದ್ದಕ್ಕೆ ಜನರು ನನ್ನನ್ನು ಪದೇ ಪದೇ ಸ್ಟ್ರಾಂಗ್ ಎಂದು ಹೇಳುತ್ತಿದ್ದರು. ಏನೇ ಕಷ್ಟ ಬರಲಿ, ನಾನು ನಗು ನಗುತ್ತಾ ಜೀವನ ಸಾಗಿಸುತ್ತಿರುವೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Bank Janardhan : ಅಪ್ಪು ನಂತರ ಮತ್ತೊಬ್ಬ ದೊಡ್ಡ ನಟನಿಗೆ ಹೃದಯಾಘಾತ.! ಕಣ್ಣೀರಿಟ್ಟ ಕನ್ನಡ ಚಿತ್ರರಂಗ ಹಾಗು ಸಿನಿಪ್ರಿಯರು

ಎರಡನೇ ಮದುವೆ ಅಥವಾ ಜೀವನ ಮುಂಬರುವ ವರ್ಷಗಳಲ್ಲಿ ಪ್ರೀತಿ, ಮದುವೆ ಅಂತ ಜನರು ಹೇಳುತ್ತಾರೆ. ಆದರೆ ನಿಜಕ್ಕೂ ನಾನು ರೆಡಿಯಾಗಿದ್ದೀನಾ.? ಅನ್ನುವುದು ನನಗೆ ಗೊತ್ತಿಲ್ಲ. ನನ್ನ ಜೀವನದಲ್ಲಿ ಯಾರಾದರು ಕಾಲಿಟ್ಟರೆ, ಅಥವಾ ಬಂದಾಗ ಹೇಳಲು ಉತ್ತರವಿರುತ್ತದೆ. ನನ್ನ ಸುತ್ತಮುತ್ತ ಮತ್ತೊಂದು ಮದುವೆ ಮಾತುಕತೆ ನಡೆಯುತ್ತಿರುತ್ತದೆ. ನನ್ನ ಬಳಿ ಯಾರೂ ಹೇಳಿಲ್ಲ, ಕೇಳಿಲ್ಲ ಅಂತಿಲ್ಲ. ಆದರೆ ಮಾನಸಿಕವಾಗಿ ನಾನು ರೆಡಿಯಾಗಿಲ್ಲ. ಆ ಸಮಯಕ್ಕೆ ಸರಿಯೆನಿಸಿದ್ದು ಮಾಡುತ್ತೀನಿ ಎಂದು ಮೇಘನಾ ರಾಜ್ ಹೇಳಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Kisan Pension Scheme : ಪ್ರತೀ ತಿಂಗಳು ರೈತ ಹಾಗು ರೈತನ ಪತ್ನಿಗೆ ₹3,000/- ರೂಪಾಯಿ ಪಿಂಚಣಿ ಸೌಲಭ್ಯ

ಕೆಲವೊಂದು ಸಲ ನಮಗೆ ಸಿಂಪತಿ ಬೇಕಾಗಲ್ಲ. ಯಾಕಂದ್ರೆ ಅಯ್ಯೋ, ಹೀಗಾಯ್ತು.. ಅಗಾಯ್ತು ಅಂತಾರೆ. ಅದನ್ನು ಕೇಳಿಸಿಕೊಳ್ಳಲು ಆಗಲ್ಲ. ಒಂದು ವಿಚಾರದ ಮೇಲೆ ಮೊದಲೇ ಬೇಸರವಿರುತ್ತದೆ. ಪದೇ ಪದೇ ಅದನ್ನೇ ಯಾಕೆ ಮಾತನಾಡುತ್ತಾರೆ ಗೊತ್ತಾಗಲ್ಲ. ಹೂವು ಅರಳುವುದಕ್ಕೆ ಶುರು ಮಾಡುತ್ತಿರುವಾಗ ಪದೇ ಪದೇ ಮಾತನಾಡಿ, ಹೂವು ಒಣಗಿಸುವುದು ತಪ್ಪು. ನಿಜಕ್ಕೂ ನನ್ನ ಬಗ್ಗೆ ಕಾಳಜಿ ಇದ್ದರೆ ಹೇಗಿದ್ದೀಯಾ.? ಏನಾದರೂ ತಿನ್ನುತ್ತೀರಾ.? ಸಿನಿಮಾ ನೋಡೋಣಾ.? ಅಂತೆಲ್ಲಾ ಕೇಳಿದರೆ, ನನ್ನನ್ನು ಅದರಿಂದ ಹೊರಬರಲು ಸಹಾಯ ಮಾಡುತ್ತಿದ್ದೀರಿ.. ಅದು ಬಿಟ್ಟು ಅಯ್ಯೋ., ಪಾಪ ಅಂದು ಹುಣ್ಣಾದ ಗಾಯಕ್ಕೆ ತುಪ್ಪ ಸುರಿಯಬೇಡಿ ಎಂದು ಮೇಘನಾ ರಾಜ್ ಕಣ್ಣೀರು ಹಾಕಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply