Darshan | ಡಿ ಬಾಸ್ ಬರ್ತ್ ಡೇ ಗೆ ಬಿಗ್ ಅನೌನ್ಸ್! ಸತ್ಯಕಥೆ ಆಧಾರಿತ ಚಿತ್ರದಲ್ಲಿ ದರ್ಶನ್! । | Darshan Thoogudeep

ದರ್ಶನ್(darshan) ಅಭಿನಯದ ‘ಕ್ರಾಂತಿ’ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ಅನ್ನ ಧೂಳೀಪಟ ಮಾಡಿದೆ. ಈಗಾಗಲೇ ಕೇವಲ 4 ದಿನಗಳಲ್ಲಿ 100 ಕೋಟಿ ಕ್ಲಬ್ ಅನ್ನ ಸೇರಿರುವಂತಹ ಈ ಸಿನಿಮಾ ಒಂದಿಷ್ಟು ಮಿಶ್ರ ಪ್ರತಿಕ್ರಿಯೆಯನ್ನ ಕೂಡ ಪಡೆದುಕೊಂಡಿದೆ. ಒಂದಿಷ್ಟು ಮಂದಿ ಆಟ ಇನ್ನೂ ಕೂಡ ನಿಂತಿಲ್ಲ ಎಂದು ಹೇಳ್ತಾ ಇದ್ದಾರೆ. ಹೀಗೆ ಹೇಳುವುದಕ್ಕೆ ಕಾರಣವಾಗಿರುವುದು ಡಿ ಬಾಸ್ ಅವರ D56 ಚಿತ್ರ. ಇನ್ನೂ ಕೂಡ ಸಿನಿಮಾದ ಟೈಟಲ್ ರಿವೀಲ್ ಆಗಿಲ್ಲ. ಹೀಗಾಗಿ ಇದು ದರ್ಶನ್ ಅವರ 56ನೇ ಸಿನಿಮಾ ಆಗಿರುವುದರಿಂದ ಸದ್ಯಕ್ಕೆ D56 ಅಂತ ಹೆಸರನ್ನ ಇಡಲಾಗಿದೆ.

Darshan | ಡಿ ಬಾಸ್ ಬರ್ತ್ ಡೇ ಗೆ ಬಿಗ್ ಅನೌನ್ಸ್! ಸತ್ಯಕಥೆ ಆಧಾರಿತ ಚಿತ್ರದಲ್ಲಿ ದರ್ಶನ್! | Darshan Thoogudeep

ಇದನ್ನೂ ಓದಿ : ಆಕರ್ಷಕ ಗಡ್ಡ ಬೆಳೆಸಲು ಹೀಗೆ ಮಾಡಿ – ಪ್ಯಾಚ್ ಪ್ಯಾಚ್ ಇರುವ ಗಡ್ಡವನ್ನು ಫಿಲ್ ಮಾಡಲು ಬೆಸ್ಟ್ ಮನೆಮದ್ದು

WhatsApp Group Join Now
Telegram Group Join Now
darshan

ಒಂದು ಮಾಹಿತಿಯ ಪ್ರಕಾರ ಫೆಬ್ರವರಿ 16ರಂದು ಡಿ ಬಾಸ್ ದರ್ಶನ್ ಅವರ ಹುಟ್ಟುಹಬ್ಬ ಇದೆ. ಇದೇ ಸಂದರ್ಭದಲ್ಲಿ ಈ ಚಿತ್ರದ ಟೈಟಲ್ ಅನೌನ್ಸ್ ಆಗುತ್ತೆ ಅಂತ ಹೇಳಲಾಗ್ತಾ ಇದೆ. ಇನ್ನು ಈ ಸಿನಿಮಾದ ಬಗ್ಗೆ ಹೇಳುವುದಾದರೆ ಇದು ನೈಜ ಘಟನೆ ಆಧಾರಿತ ಸಿನಿಮಾ ಇದನ್ನ ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಪೋಸ್ಟರ್ ಅನ್ನ ರಿವೀಲ್ ಮಾಡುವ ಮೂಲಕ ಹೇಳಲಾಗಿದೆ. ಇನ್ನು ಈ ಚಿತ್ರದ ಕಥೆ ಏನು ಅಂತ ಹೇಳೋದಾದರೆ 1970ರ ದಶಕದಲ್ಲಿ ನಡೆದ ನೈಜ ಘಟನೆ ಆಧಾರಿತ ರಕ್ತ ಸಿಕ್ತ ಅಧ್ಯಾಯದ ಒಂದು ಕಥೆ. ಆದರೆ ಆ ರಕ್ತ ಸಿಕ್ತ ಅಧ್ಯಾಯ ಏನು ಅಂತ ಕೇಳಿದ್ರೆ ಯಾವುದಕ್ಕೂ ಸದ್ಯಕ್ಕೆ ಉತ್ತರವಿಲ್ಲ. ಈಗಾಗಲೇ ಪೋಸ್ಟರ್ ಸಿಕ್ಕಾಪಟ್ಟೆ ಹವವನ್ನ ಕ್ರೀಯೇಟ್ ಮಾಡಿದೆ.

darshan

ಈ ಚಿತ್ರದ ನಿರ್ಮಾಪಕರು ಧೀರ ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡುತ್ತಾ ಇದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುವಂತಹ ಈ ಸಿನಿಮಾಗೆ ತರುಣ್ ಸುಧೀರ್ ಅವರು ಆಕ್ಷನ್ ಕಟ್ ಹೇಳಲಿದ್ದಾರೆ. ತರುಣ್ ಸುಧೀರ್ ಅವರ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಈಗಾಗಲೇ ರಾಬರ್ಟ್ ಸಿನಿಮಾವನ್ನ ನಿರ್ದೇಶನ ಮಾಡಿ ಗೆದ್ದು ಬೀಗಿದವರು. ಇದೀಗ ಮತ್ತೊಮ್ಮೆ ಡಿ ಬಾಸ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಈ ಸಿನಿಮಾದಲ್ಲಿ ಡಿ ಬಾಸ್ ಅವರಿಗೆ ನಾಯಕಿಯಾಗಿ ಮಾಲಾಶ್ರೀ ಅವರ ಪುತ್ರಿ ರಾಧನಾ ಅವರು ಬಣ್ಣ ಹಚ್ಚಿದ್ದಾರೆ. ಈ ಮೂಲಕ ರಾಧನಾ ರಾಮ್ ಅವರು ಮೊತ್ತ ಮೊದಲ ಬಾರಿಗೆ ಬೆಳ್ಳಿ ಪರದೆಗೆ ಎಂಟ್ರಿ ಕೊಡ್ತಾ ಇದ್ದಾರೆ. ಇನ್ನು ಫೆಬ್ರವರಿ 16ಕ್ಕೆ ಈ ಚಿತ್ರದ ಟೈಟಲ್ ಅನೌನ್ಸ್ ಆಗುತ್ತೆ. ಆದರೆ ಈ ಚಿತ್ರದ ಕಥೆ ಏನು.? ತಿರುಳೇನು.? ಹೀಗೆ ಒಂದಿಷ್ಟು ಅಂತೇ ಕಂತೆಗಳಿಗೆ ಈ ಸಿನಿಮಾ ನಿರ್ಮಾಣವಾಗಿ ಬಿಡುಗಡೆ ಆದ ಬಳಿಕವಷ್ಟೇ ಉತ್ತರ ಸಿಗಲಿದೆ.

WhatsApp Group Join Now
Telegram Group Join Now

ಇದನ್ನೂ ಓದಿ : ದೇಶ ವಿದೇಶಗಳನ್ನು ಸುತ್ತುತ್ತಿರುವ ಪ್ರಸಿದ್ಧ ಯೂಟ್ಯೂಬರ್ ಡಾ ಬ್ರೋ. ಗಗನ್ ನಿಜವಾಗಿಯೂ ಯಾರು ಗೊತ್ತಾ?

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply