ಆಕರ್ಷಕ ಗಡ್ಡ ಬೆಳೆಸಲು ಹೀಗೆ ಮಾಡಿ – ಪ್ಯಾಚ್ ಪ್ಯಾಚ್ ಇರುವ ಗಡ್ಡವನ್ನು ಫಿಲ್ ಮಾಡಲು ಬೆಸ್ಟ್ ಮನೆಮದ್ದು

ಈಗಿನ ಹೊಸ ಟ್ರೆಂಡ್ ಅಂದರೆ ಸಖತ್ ಸ್ಟೈಲಿಷ್ ಗಡ್ಡ. ಬಹಳಷ್ಟು ಜನ ತಮಗೆ ಇಷ್ಟ ಅಂತ ಗಡ್ಡ ಬಿಡ್ತಾರೆ. ಕೆಲವರು ಹುಡುಗಿಯರಿಗೆ ಗಡ್ಡ ಬಿಟ್ಟಿರೋ ಹುಡುಗರು ಇಷ್ಟ ಆಗ್ತಾರೆ ಅಂತ ಗಡ್ಡ ಬಿಡ್ತಾರೆ. ನಿಜವಾಗಲೂ ಗಡ್ಡ ಫುಲ್ ಸಖತ್ತಾಗಿ ಬಂದರೆ ಚೆನ್ನಾಗಿ ಕಾಣಿಸುತ್ತಾರೆ.


ಕೆಲವರಿಗೆ ಗಡ್ಡ ಸರಿಯಾಗಿ ಬರುವುದಿಲ್ಲ. ಪ್ಯಾಚ್.. ಪ್ಯಾಚ್ ಆಗಿ ಬರುತ್ತೆ ಇದು ಅಸಹ್ಯವಾಗಿಸುತ್ತೆ. ಪದೇ ಪದೇ ಶೇವ್ ಮಾಡಿ ಗ್ಯಾಪ್ ಗ್ಯಾಪ್ ಇರುವ ಗಡ್ಡ ಫಿಲ್ ಆಗುತ್ತೆ ಅಂತ ಹೇಳ್ತಾರೆ, ಆದರೆ ಅದು 100% ಸುಳ್ಳು. ಈ ಸರಳ ಮನೆಮದ್ದಿನಿಂದ ಆಕರ್ಷಕ ಗಡ್ಡವನ್ನು ಹೇಗೆ ಬೆಳೆಸಬಹುದು ಎಂದು ನೋಡಿ ಟ್ರೈ ಮಾಡಿ.

ಕೇವಲ 2-3 ದಿನ ಟ್ರೈ ಮಾಡಿ ವರ್ಕ್ ಆಗ್ತಿಲ್ಲ ಅಂತ ಬೇಜಾರಾಗಬೇಡಿ. ಕನಿಷ್ಟ ಪಕ್ಷ ಒಂದು ತಿಂಗಳಾದ್ರು ಇದನ್ನು ಟ್ರೈ ಮಾಡಬೇಕು. ಕೊಟ್ಟಿರುವ ಎಲ್ಲ ಟಿಪ್ಸ್ ಫಾಲೋ ಮಾಡಿ.


ದಿನಾಲು ಪ್ಯಾಚ್ ಪ್ಯಾಚ್ ಆಗಿರೋ ಜಾಗದಲ್ಲಿ ಹರಳೆಣ್ಣೆಯನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಮುಖಕ್ಕೆ ಮಾಡುವ ಮಸಾಜ್ ನಿಮ್ಮ ಮುಖದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತೆ ಇದು ಗಡ್ಡವನ್ನು ಸರಿಯಾಗಿ ಬೆಳೆಯಲು ಸಹಾಯ ಮಾಡುತ್ತೆ. ಈಗಾಗಲೇ ಬೆಳೆದಿರುವ ಗಡ್ಡವನ್ನು ಕಟ್ ಮಾಡಬೇಡಿ ಬೆಳೆಯಲು ಬಿಡಿ.

ಪ್ರತಿ ದಿನ ಈರುಳ್ಳಿ ರಸವನ್ನು ಪ್ಯಾಚ್ ಪ್ಯಾಚ್ ಆಗಿರೋ ಜಾಗದಲ್ಲಿ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಕನಿಷ್ಠ 30 ನಿಮಿಷ ಇರಲು ಬಿಡಿ. ಇದು 100% ಪ್ಯಾಚ್ ಪ್ಯಾಚ್ ಆಗಿರೋ ಗಡ್ಡವನ್ನು ಫಿಲ್ ಮಾಡಿ ಆಕರ್ಷಕ ಗಡ್ಡ ಬೆಳೆಯಲು ಸಹಕರಿಸುತ್ತೆ. ಇದು ಆಕರ್ಷಕ ಗಡ್ಡ ಬೆಳೆಸಲು ಬೆಸ್ಟ್ ಮನೆಮದ್ದು.


ನಿಮ್ಮ ಆಹಾರದಲ್ಲಿ ವಿಟಮಿನ್ ಎ, ಬಿ, ಸಿ, ಮತ್ತು ಇ ಯನ್ನು ಸೇರಿಸಿ, ಈ ವಿಟಮಿನ್ ಗಳು ಕೂದಲು ಬೆಳೆಯಲು ಬಾದಾಮಿ, ಮೊಟ್ಟೆಯನ್ನು ತಿನ್ನಿ. ಪ್ರೊಟೀನ್ ಹೆಚ್ಚಾಗಿರುವ ಆಹಾರ ಸೇವಿಸುವುದರಿಂದ ನಿಮ್ಮ ಗಡ್ಡವನ್ನು ಬೇಗ ಬೆಳೆಸಬಹುದು. ಬಾದಾಮಿ, ಮೊಟ್ಟೆಯನ್ನು ತಿನ್ನಿ. ಪ್ರೊಟೀನ್ ಹೆಚ್ಚಾಗಿರುವ ಆಹಾರ ಸೇವಿಸುವುದರಿಂದ ನಿಮ್ಮ ಗಡ್ಡವನ್ನು ಬೇಗ ಬೆಳೆಸಬಹುದು.

ದಿನಾಲು ಬಾಚಣಿಕೆಯಿಂದ ಕೋಂಬ್ ಮಾಡ್ತಾ ಇರಿ, ಇದರಿಂದ ಗಡ್ಡ ಬೆಳೆಯಲು ಸಹಕಾರಿ. ನಿದ್ದೆಯನ್ನು ಚೆನ್ನಾಗಿ ಮಾಡಿ ಇದು ಬಹಳ ಮುಖ್ಯ.

ನೋಡಿದ್ರಲ್ಲಾ ಸ್ನೇಹಿತರೆ, ಈ ಮಾಹಿತಿ ಇಷ್ಟವಾದ್ರೆ ಲೈಕ್ ಮತ್ತು ಶೇರ್ ಮಾಡಿ. ಧನ್ಯವಾದಗಳು

Leave a Reply