ನವಗ್ರಹ 2 ಮಾಡಲ್ಲಮ್ಮ – ದರ್ಶನ್ ನೋವಿನ ಮಾತುಗಳು.! ಈ ಕಾರಣಕ್ಕೆ ಮಾಡಲ್ವಂತೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾವನ್ನು ಸೋಲಿಸಲು ಎಷ್ಟೇ ಜನ ಪ್ರಯತ್ನಪಟ್ಟರು ಕೂಡ ಅದು ಸಾಧ್ಯವಾಗಲಿಲ್ಲ. ಇಂದಿಗೂ ಕೂಡ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಬಾಕ್ಸ್ ಆಫೀಸ್ ನಲ್ಲೂ ಕೂಡ ಒಳ್ಳೆ ಕಲೆಕ್ಷನ್ ಮಾಡಿ ದೊಡ್ಡ ಸಡ್ಡು ಮಾಡುತ್ತಿದೆ ಕ್ರಾಂತಿ ಸಿನಿಮಾ.

Whatsapp Group Join
Telegram channel Join

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಅಂತ ಚಿತ್ರ ತಂಡ ಘೋಷಿಸಿದೆ. ಇನ್ನು ಕೇಕ್ ಕೂಡ ಕಟ್ ಮಾಡಿ ಚಿತ್ರತಂಡ ಸಂಭ್ರಮಿಸಿದೆ. ನಟ ದರ್ಶನ್ ಸಧ್ಯ ಡಿ56 ಸಿನಿಮಾ ಕಡೆ ಮುಖ ಮಾಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಈಗ ಸೀಕ್ವೆಲ್ ಸಿನಿಮಾಗಳ ಆರ್ಭಟ ನಡೆಯುತ್ತಿದೆ. ಕಥೆಯನ್ನು ಹಿಗ್ಗಿಸಿ ಎರೆಡೆರೆಡು ಸಿನಿಮಾ ಮಾಡಿ ಬಾಕ್ಸ್ ಆಫೀಸ್ ದೋಚುವಲ್ಲಿ ಲೆಕ್ಕಾಚಾರ ಜೋರಾಗಿದೆ. ಈಗಾಗಲೇ ಈ ಹಾದಿಯಲ್ಲಿ ಬಾಹುಬಲಿ, ಕೆಜಿಎಫ್ ಸರಣಿ ಸಿನಿಮಾಗಳು ಹಿಟ್ ಆಗಿವೆ.

ಇದನ್ನೂ ಓದಿ : ಡಿ ಬಾಸ್ ದರ್ಶನ್ ಅವರ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳು (2002-2023)

Whatsapp Group Join
Telegram channel Join
Darshan Navagraha 2 movie will not be made

ಕಬ್ಜ ಸೇರಿದಂತೆ ಒಂದಷ್ಟು ಸಿನಿಮಾಗಳು ಮುಂದಿನ ದಿನಗಳಲ್ಲಿ ಎರೆಡೆರಡು ಭಾಗಗಳಾಗಿ ತೆರೆಗೆ ಬರುವುದು ಪಕ್ಕಾ ಆಗಿದೆ. ಮತ್ತೊಂದೆಡೆ ನಟ ದರ್ಶನ್ ಅಭಿನಯದ ನವಗ್ರಹ ಸೀಕ್ವೆನ್ಸ್ ಬರುತ್ತೆ ಅಂತ ಅಭಿಮಾನಿಗಳು ಕಾಯುತ್ತಾ ಇದ್ದಾರೆ. ಇತ್ತೀಚೆಗೆ ನಟ ದರ್ಶನ್ ಸೀಕ್ವೆಲ್ ಸಿನಿಮಾಗಳನ್ನ ಮಾಡುವುದರ ಬಗ್ಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಾತುಗಳನ್ನ ಕೇಳಿದ ಮೇಲೆ ಅಭಿಮಾನಿಗಳು ಆ ಆಸೆಯನ್ನ ಬಿಟ್ಟು ಬಿಡುವುದೇ ಒಳ್ಳೆಯದು ಅನಿಸುತ್ತೆ. ಆರ್ ಜೆ ಸುನೀಲ ಪ್ರಾಂಕ್ ಕಾಲ್ಸ್ ಯುಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ನಟ ದರ್ಶನ ಅವರು ಮಾತನಾಡಿದ್ದಾರೆ, ಅಭಿಮಾನಿಗಳು ಕೇಳಿದ ಪ್ರಶ್ನೆಗಳನ್ನು ನಿರೂಪಕ ದರ್ಶನ್ ಮುಂದೆ ಇಟ್ಟಾಗ, ಸಾಕಷ್ಟು ಜನ ನವಗ್ರಹ ಸೀಕ್ವೆಲ್ ಮಾಡ್ತೀರಾ.? ಅನ್ನುವ ಪ್ರಶ್ನೆಯನ್ನ ಕೇಳ್ತಿದ್ದಾರೆ ಅಂದಿದ್ದಕ್ಕೆ ನಟ ದರ್ಶನ ಅವರು ನಾನು ಸೀಕ್ವೆಲ್ ಸಿನಿಮಾಗಳನ್ನ ಮಾಡುವುದಿಲ್ಲ ನನಗೆ ಇಂಟರೆಸ್ಟ್ ಇಲ್ಲ, ಒಂದು ಸಿನಿಮಾವನ್ನ ಸೀಕ್ವೆಲ್ ಮಾಡಿದಾಗ ಕಥೆಯನ್ನ ಹೇಳ್ತೀರ, ಈಗ ಒಂದು ಸಿನಿಮಾವನ್ನೇ ಮಾಡ್ತೀರ, ಇನ್ನೂ ಎರಡು ವರ್ಷ ಆದಮೇಲೆ ಇನ್ನೊಂದು ಸಿನಿಮಾವನ್ನ ಮಾಡ್ತೀರ, ಅಷ್ಟರಲ್ಲಿ ಸಿನಿಮಾವನ್ನ ಜನ ಮರೆತೇ ಹೋಗಿರುತ್ತಾರೆ, ಎರೆಡನನ್ನೂ ಸೇರಿಸಿ ಒಂದೇ ಸಿನಿಮಾ ಮಾಡಿ ಕ್ರಿಸ್ಪಿಯಾಗಿ ಕೊಡಿ, ಸೀಕ್ವೆಲ್ ಸಿನಿಮಾವನ್ನ ಮಾಡುವಷ್ಟು ಟೈಮ್ ಇಲ್ಲ, ತಾಳ್ಮೆ ಕೂಡ ಇಲ್ಲ ಅಂತ ದರ್ಶನ್ ಹೇಳಿದ್ದಾರೆ.

ಇದನ್ನೂ ಓದಿ : ರಾಕಿಂಗ್ ಸ್ಟಾರ್ ಯಶ್ ಅವರ ಹಿಟ್ ಮತ್ತು ಫ್ಲಾಪ್ ಸಿನಿಮಾಗಳು

ನಟ ದರ್ಶನ್, ಸಾಕಷ್ಟು ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಆದರೆ, ಅದರಲ್ಲಿ ನವಗ್ರಹ ಬಹಳ ವಿಭಿನ್ನವಾಗಿ ನಿಲ್ಲುತ್ತೆ. ಮೈಸೂರು ಅರಮನೆಯ ಅಂಬಾರಿಯನ್ನ ಕದಿಯುವ ರೋಚಕ ಕಥೆ ಸಿನಿರಸಿಕರಿಗೆ ಇಷ್ಟವಾಗಿತ್ತು. ದಿನಕರ್ ತೂಗುದೀಪ್ ನಿರ್ದೇಶನದ ಈ ಕಥೆ ಸಖತ್ ಸೌಂಡ್ ಮಾಡಿತ್ತು. ದರ್ಶನ ನೆಗೆಟಿವ್ ಶೇಡ್ ರೋಲ್ ನಲ್ಲಿ ಅಬ್ಬರಿಸಿದ್ದರು. ಹೀಗಾಗಿ ಈ ಸಿನಿಮಾ ಸೀಕ್ವೆಲ್ ನೋಡಬೇಕನ್ನುವುದು ಅಭಿಮಾನಿಗಳ ಆಶಯವಾಗಿದೆ.

Darshan Navagraha 2 movie will not be made

ಹದಿನಾಲ್ಕು ವರ್ಷಗಳ ಹಿಂದೆ ಬಂದಿದ್ದ ಆಕ್ಷನ್ ಥ್ರಿಲ್ಲರ್ ನವಗ್ರಹ ಚಿತ್ರವನ್ನ, ತಮ್ಮದೇ ಬ್ಯಾನರ್ ನಲ್ಲಿ ದರ್ಶನ್ ನಿರ್ಮಿಸಿದ್ದರು. ಕನ್ನಡ ಚಿತ್ರರಂಗದ ಖ್ಯಾತ ಖಳನಟರ ಮಕ್ಕಳು ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದರು. ಸೃಜನ್ ಲೋಕೇಶ್, ವಿನೋದ್ ಪ್ರಭಾಕರ್, ತರುಣ್ ಸುಧೀರ್, ನಾಗೇಂದ್ರ ಅರಸ್, ಶರ್ಮಿಳಾ ಮಾಂಡ್ರೆ, ವರ್ಷ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ವಿ. ಹರಿಕೃಷ್ಣ ಮ್ಯೂಸಿಕ್ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿತ್ತು.

ಇದನ್ನು ಕೂಡ ಓದಿ : ಕ್ರಾಂತಿ 10th ಡೇ ಬಾಕ್ಸ್ ಆಫೀಸ್ ಕಲೆಕ್ಷನ್ । Darshan Thoogudeepa

ಬಹಳ ದಿನಗಳಿಂದ ನವಗ್ರಹ ಸೀಕ್ವೆಲ್ ಬರುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದರು. ದಿನಕರ್ ತೂಗುದೀಪ್ ಅವರ ಬಳಿ ಈ ಬೇಡಿಕೆಯನ್ನ ಇಡ್ತಾ ಇದ್ದರು. ಒಂದಲ್ಲ ಒಂದು ದಿನ ಇಂತಹದ್ದೊಂದು ಪ್ರಾಜೆಕ್ಟ್ ಗೆ ಕಾಲ ಕೂಡಿ ಬರಬಹುದು ಅಂತ ಕೆಲವರು ಅಂದುಕೊಂಡಿದ್ದರು. ಆದರೆ, ಈಗೆ ದರ್ಶನ್ ರವರೇ ನಾನು ಸೀಕ್ವೆಲ್ ಸಿನಿಮಾಗಳನ್ನ ಮಾಡುವುದಿಲ್ಲ, ಅದರ ಬಗ್ಗೆ ನನಗೆ ಇಂಟರೆಸ್ಟ್ ಕೂಡ ಇಲ್ಲ ಅಂತ ಹೇಳಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

ಇದನ್ನೂ ಓದಿ : ಶ್ರೀ ಮುರುಳಿ ಅವರು ನಟಿಸಿರುವ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2003-2023)

ಇನ್ನು ನಿಮ್ಮ ಪ್ರಕಾರ ದರ್ಶನ್, ನವಗ್ರಹ – 2 ಸಿನಿಮಾವನ್ನ ಮಾಡಬೇಕಾ.? ಅಥವಾ ಬೇಡವಾ.? ಅಂತ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನ ಕಾಮೆಂಟ್ ಮೂಲಕ ತಿಳಿಸಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply