*ದರ್ಶನ್ 3 ವರ್ಷ ಫುಲ್ ಬ್ಯುಸಿ ಕಾಲ್ ಶೀಟ್ ಗೆ ಮುಗಿಬಿದ್ದ ನಿರ್ಮಾಪಕರು… । Darshan । D Boss Upcoming Movies

Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇನ್ನೂ 3 ವರ್ಷಗಳ ಕಾಲ ಸಖತ್ ಬ್ಯುಸಿ ಆಗಿರುತ್ತಾರೆ. 56 ರಿಂದ 60 ರ ವರೆಗೂ ಅವರ ಸಿನಿಮಾ ಲಿಸ್ಟ್ ಇದೆ. ದರ್ಶನ್ ಜೊತೆ ಸಿನಿಮಾ ನಿರ್ಮಾಣ ಮಾಡುವುದಕ್ಕೆ ನಿರ್ಮಾಪಕರು ತುದಿಗಾಲಲ್ಲಿ ನಿಂತಿರುತ್ತಾರೆ. ಮಾಸ್ ಅಂಡ್ ಕ್ಲಾಸ್ ಆಗಿರುವ ನಟ ದರ್ಶನ್ ಅವರು ಹಾಗೆಯೇ ಇವರ ಅಭಿಮಾನಿಗಳು ಸಹ ಮಾಸ್ ಆಗಿದ್ದಾರೆ. ಮಾಸ್ ಆಗಿರುವ ದರ್ಶನ್ ಅವರ ಸಿನಿಮಾಗೆ ಹಣ ಹೂಡಿದರೆ ಬಂಡವಾಳ ವಾಪಾಸ್ ಬರುವುದರಲ್ಲಿ ಯಾವುದೇ ಡೌಟ್ ಇಲ್ಲಾ.

ಇದನ್ನೂ ಕೂಡ ಓದಿ : Darshan | ಪವಿತ್ರ ಗೌಡ ಕಂಡರೆ ದರ್ಶನ್ ಅವರಿಗೆ ಏಕೆ ಅಷ್ಟೊಂದು ಇಷ್ಟ ಗೊತ್ತಾ.? | ಈ ಪವಿತ್ರ ಗೌಡ ಯಾರು.?

WhatsApp Group Join Now
Telegram Group Join Now
ದರ್ಶನ್ 3 ವರ್ಷ ಫುಲ್ ಬ್ಯುಸಿ । ಕಾಲ್ ಶೀಟ್ ಗೆ ಮುಗಿಬಿದ್ದ ನಿರ್ಮಾಪಕರು

ಇತ್ತೀಚಿಗೆ ನಟ ದರ್ಶನ್ ಅವರ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸಿದೆ. ಹೀಗಾಗಿ ನಿರ್ಮಾಪಕರು ಕಾಲ್ ಶೀಟ್ ಗಾಗಿ ಕಾಯುತ್ತಾ ಇದ್ದಾರೆ. ದರ್ಶನ್ ಹುಟ್ಟುಹಬ್ಬದಂದೇ ಕೆಲ ನಿರ್ಮಾಪಕರು ತಮ್ಮ ನಿರ್ಮಾಣ ಸಂಸ್ಥೆಯಿಂದ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆದರೆ ಆ ನಿರ್ಮಾಪಕರ ನಂಬರ್ ಎಷ್ಟು ಎಂದು ಸುಳಿವು ಸಿಕ್ಕಿಲ್ಲಾ. 56ನೇ ಸಿನಿಮಾ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ರಾಬರ್ಟ್ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಾಟೇರ ಸಿನಿಮಾ ಎಂದು ಈಗಾಗಲೇ ಅನೌನ್ಸ್ ಆಗಿದ್ದು, 57,58,59 ಹಾಗೂ 6೦ ನೇ ಸಿನಿಮಾ ಯಾವ ಯಾವ ನಿರ್ಮಾಪಕರು ನಿರ್ಮಾಣ ಮಾಡುತ್ತಾರೆ ಎನ್ನುವ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ಇದೆ.

ದರ್ಶನ್ ನಟಿಸಲಿರುವ ಮುಂದಿನ 4 ಸಿನಿಮಾಗಳ ಪಟ್ಟಿ ಓಡಾಡುತ್ತಿದೆ. ಇದರಲ್ಲಿ 56 ನೇ ಸಿನಿಮಾ ಕಾಟೇರ, ನಂತರ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಪಟ್ಟಿ ಮಾಡಲಾಗಿತ್ತು. ಈ ಪಟ್ಟಿಯ ಪ್ರಕಾರ ದರ್ಶನ್ ಅವರ 57ನೇ ಸಿನಿಮಾವನ್ನ ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಕಾಟೇರ ಮುಗಿಯುತ್ತಿದ್ದಂತೆ ಮಿಲನ ಪ್ರಕಾಶ್ ಟೀಮ್ ಸೇರಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಶನ್ ವರ್ಕೌಟ್ ಆಗುತ್ತಿದೆ. ರಾಬರ್ಟ್ ಬಳಿಕ ಕಾಟೇರ ಸಿನಿಮಾದಲ್ಲಿ ಬ್ಯುಸಿ ಆಗಿದಾರೆ. ಈ ಸಿನಿಮಾ ಕೂಡ ಕ್ರೇಜ್ ಹುಟ್ಟಿಸಿದೆ. ಕಾಟೇರ ರಿಲೀಸ್ ಆಗುತ್ತಿದ್ದಂತೆ ದರ್ಶನ್ ರವರು 57ನೇ ಸಿನಿಮಾಗೆ ಗ್ಯಾಪ್ ಸಿಗುತ್ತೆ. ಆ ಬಳಿಕ 58ನೇ ಸಿನಿಮಾವನ್ನ ತರುಣ್ ಸುಧೀರ್ ರವರೇ ನಿರ್ದೇಶನ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

WhatsApp Group Join Now
Telegram Group Join Now
ದರ್ಶನ್ 3 ವರ್ಷ ಫುಲ್ ಬ್ಯುಸಿ । ಕಾಲ್ ಶೀಟ್ ಗೆ ಮುಗಿಬಿದ್ದ ನಿರ್ಮಾಪಕರು

ಇನ್ನೂ ಈ ಸಿನಿಮಾವನ್ನ ದರ್ಶನ್ ಗೆಳೆಯ ಸಚ್ಚಿದಾನಂದ ಇಂಡಿವಾಲು ನಿರ್ಮಾಣ ಮಾಡುತ್ತಾರಂತೆ. ಇನ್ನೂ 59ನೇ ಸಿನಿಮಾವನ್ನ ಧ್ರುವ ದಾಸ್ ನಿರ್ಮಾಣ ಮಾಡುತ್ತಿದ್ದಾರೆ. ಅವರು ಈ ಹಿಂದೆ ರಮ್ಯಾ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಶನ್ ಸಿನಿಮಾ ಆರ್ಯನ್ ನಿರ್ಮಾಣ ಮಾಡಿದ್ದಾರೆ. ಅದೇ ನಿರ್ಮಾಪಕರು ಈಗ ದರ್ಶನ್ ಸಿನಿಮಾವನ್ನ ನಿರ್ಮಾಣಮಾಡುತ್ತಾರೆ. ಅದು 59ನೇ ಸಿನಿಮಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹೇಳುತ್ತಿದೆ.

ಇದನ್ನೂ ಕೂಡ ಓದಿ : ಮೇಘಾ ಶೆಟ್ಟಿ ಮಾಡಿದ್ದರಲ್ಲಿ ತಪ್ಪೇನಿದೆ.? ಸುಮ್ಮನೆ ಹೇಳಬೇಡ – ಹೆಂಡತಿ ವಿರುದ್ಧ ನಟ ದರ್ಶನ್ ಬೇಸರ.! । Darshan Birthday Party

WhatsApp Group Join Now
Telegram Group Join Now

ಹುಟ್ಟುಹಬ್ಬದ ದಿನ ದರ್ಶನ್ ಮನೆಯಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಕಾಣಿಸಿಕೊಂಡಿದ್ದಾರೆ. ಅಂದೇ ಅವರು ಕೂಡ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 6೦ನೇ ಸಿನಿಮಾ ಆಗುತ್ತೆ ಎನ್ನಲಾಗುತ್ತಿದೆ. ಅಂದ ಹಾಗೆ ದರ್ಶನ್ ಅವರ 6೦ನೇ ಸಿನಿಮಾ ರಿಲೀಸ್ ಆಗೋಕೆ ಈಗಿನ ಲೆಕ್ಕಾಚಾರದ ಪ್ರಕಾರ ಇನ್ನೂ 3 ವರ್ಷ ಬೇಕಾಗುತ್ತೆ. ಇನ್ನೂ ದರ್ಶನ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ನೀವು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ಆಗಿದ್ದರೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮೂಲಕ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply