ಪ್ರೇಮಿಗಳ ದಿನದಂದು ಈ ತೃತೀಯಲಿಂಗಿ ಜೋಡಿ ಮಾಡಿದ್ದೇನು ಗೊತ್ತೆ.?

Know what this transgender couple did on Valentine's Day

ಪ್ರೇಮಿಗಳ ದಿನದನಂದು ಕೇರಳದಲ್ಲೊಂದ ತೃತೀಯಲಿಂಗಿ ಜೋಡಿಯ ಮದುವೆ ನಡೆದಿದೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪ್ರೇಮಿಗಳ ದಿನದಂದೇ (Valentines day) ಇವರಿಬ್ಬರ ಮದುವೆ (Marriage) ನಡೆದಿದೆ. ಕೇರಳದ ಪಾಲಕ್ಕಾಡ್‌ನಲ್ಲಿ ಪ್ರೇಮಿಗಳ ದಿನದಂದು ಟ್ರಾನ್ಸ್‌ಜೆಂಡರ್‌ಗಳಾದ ಪ್ರವೀಣ್ ನಾಥ್ ಮತ್ತು ರಿಶಾನಾ ಐಶು ವಿವಾಹವಾಗಿದ್ದಾರೆ. ತೃತೀಯಲಿಂಗಿಗಳಾಗಿರುವ ಇವರ ಮದುವೆಗೆ ಆರಂಭದಲ್ಲೇ ಮನೆ ಮಂದಿ ವಿರೋಧ ವ್ಯಕ್ತಪಡಿಸಿದ್ದರು. ನಂತರ ಎರಡೂ ಕುಟುಂಬದವರ ಒಪ್ಪಿಗೆಯಿಂದಲೇ ಪ್ರೇಮಿಗಳ ಮದುವೆ ನಡೆದಿದೆ. ಇದನ್ನೂ ಕೂಡ ಓದಿ : Savji Dholakia | ಭಾರತದ ದೊಡ್ಡ ಶ್ರೀಮಂತನ ಮಗ … Read more

ಬಸ್ ನಲ್ಲೆ ಜಿಪ್ ತೆಗೆದ ಕಾಮುಕನಿಂದ ಅನುಚಿತ ವರ್ತನೆ.!

ಬೆಂಗಳೂರು: ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರೊಂದಿಗೆ ಕಾಮುಕರು ಅನುಚಿತವಾಗಿ ವರ್ತಿಸಿದ ಅನೇಕ ಘಟನೆ ನಡೆದಿವೆ. ಅಂತಹ ಮತ್ತೊಂದು ಘಟನೆಯ ವರದಿ ಇಲ್ಲಿದೆ ನೋಡಿ. ಬೆಂಗಳೂರಿನಲ್ಲಿ ಬಿ.ಎಂ.ಟಿ.ಸಿ. ಬಸ್ ನಲ್ಲಿ ಯುವತಿಯ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ, ಜಿಪ್ ತೆಗೆದು ಅನುಚಿತವಾಗಿ ವರ್ತಿಸಿದ್ದಾನೆ. ನಿನ್ನೆ ರಾತ್ರಿ 8 ಗಂಟೆಗೆ ಕೋರಮಂಗಲದ 100 ಅಡಿ ರಸ್ತೆಯಲ್ಲಿ ಬಸ್ ನಲ್ಲಿ ಪ್ರಯಾಣಿಸುವಾಗ ಯುವತಿ ಪಕ್ಕದಲ್ಲಿ ಸುಮಾರು 65 ವರ್ಷದ ಹಿರಿಯ ವ್ಯಕ್ತಿಯೊಬ್ಬ ನಿಂತಿದ್ದಾನೆ. ಕುಳಿತುಕೊಳ್ಳಲು ಯುವತಿ ಸೂಚಿಸಿದರೂ, ನಿರಾಕರಿಸಿದ ವ್ಯಕ್ತಿ, ಜಿಪ್ ತೆಗೆದು ಅನುಚಿತವಾಗಿ … Read more

‘ಭೂತಕೋಲ’ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ – ಮತ್ತೆ ನಾಲಿಗೆ ಹರಿಬಿಟ್ಟ ನಟ ಚೇತನ್

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಬ್ಲಾಕ್ ಬಸ್ಟರ್ ಸಿನಿಮಾ ‘ಕಾಂತಾರ’ ಚಿತ್ರ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿರುವ ನಡುವೆಯೇ ಸಿನಿಮಾದಲ್ಲಿನ ದೈವಾರಾಧನೆ, ಭೂತಕೋಲ ವಿಚಾರವು ಸಾಕಷ್ಟು ಜನಪ್ರಿಯತೆ ಪಡೆಯುತ್ತಿವೆ. ಇದೀಗ ಇದೇ ವಿಚಾರವಾಗಿ ಭೂತಕೋಲದ ಬಗ್ಗೆ ನಟ ಅಹಿಂಸಾ ಚೇತನ್ ನೀಡಿರುವ ಹೇಳಿಕೆ ಹೊಸದೊಂದು ವಿವಾದಕ್ಕೆ ಕಾರಣವಾಗಿದೆ. ‘ಭೂತಕೋಲ’ ಇದು  ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ. ಅದು ಹಿಂದೂ ಧರ್ಮಕ್ಕಿಂತ ಹಿಂದಿನದ್ದು ಎಂದು ನಟ ಚೇತನ್ ತಿಳಿಸಿದ್ದಾರೆ. ರಿಷಬ್ ಶೆಟ್ಟಿಯ ‘ಕಾಂತಾರ’ ಸಿನಿಮಾದಲ್ಲಿ … Read more

ರೈತರಿಗೆ ಖುಷಿಸುದ್ಧಿ.! ಇಂದು ಖಾತೆಗೆ ಜಮಾ ಆಗಲಿದೆ ಹಣ – ಮೋದಿಯಿಂದ ‘ಒಂದು ದೇಶ – ಒಂದು ರಸಗೊಬ್ಬರ’ ಯೋಜನೆಗೆ ಚಾಲನೆ

ಪ್ರಧಾನಿ ಮೋದಿಯವರು ಆರಂಭಿಸಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತಿನ ಹಣವನ್ನು ಫಲಾನುಭವಿಯಾದ ಎಲ್ಲಾ ರೈತರ ಖಾತೆಗೆ ಇಂದು ವರ್ಗಾವಣೆ ಮಾಡಲಾಗುವುದು. ಸುಮಾರು 16,000ಕೋಟಿ ರೂ. ಗಳನ್ನು ಸುಮಾರು ಎರಡು ಕೋಟಿ ಫಲಾನುಭವಿ ರೈತರ ಖಾತೆಗೆ ಜಮಾ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ನಡೆಯಲಿರುವ ಕೃಷಿ ಸಮ್ಮೇಳನ ಕಾರ್ಯಕ್ರಮದಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಿದ್ದಾರೆ. ಹಾಗೇ ಇದೇ ಸಂದರ್ಭದಲ್ಲಿ ‘ಒಂದು ದೇಶ – ಒಂದು ರಸಗೊಬ್ಬರ’ ಎಂಬ … Read more

ಯುವತಿಯೊಂದಿಗೆ ಪರಾರಿಯಾಗಿದ್ದ ವ್ಯಕ್ತಿ ಬಂಧನ – ಹೊಸ ಮತಾಂತರ ವಿರೋಧಿ ಕಾನೂನಿನಡಿ ಮೊದಲ ಬಂಧನ

ಹೊಸದಾಗಿ ಪರಿಚಯಿಸಲಾದ ರಾಜ್ಯ ಮತಾಂತರ ವಿರೋಧಿ ಕಾನೂನು-ಕರ್ನಾಟಕ ಧರ್ಮ ಸ್ವಾತಂತ್ರ್ಯದ ಹಕ್ಕು ಕಾಯ್ದೆ-2022 ಅನ್ನು ಉಲ್ಲಂಘಿಸಿ ಮತ್ತೊಂದು ಧರ್ಮಕ್ಕೆ ಮತಾಂತರಿಸಿದ ಆರೋಪದ ಮೇಲೆ ಬಾಲಕಿಯೊಂದಿಗೆ ಓಡಿಹೋದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 8 ರಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವು ಸೆಪ್ಟೆಂಬರ್ 30 ರಂದು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದ ಹೊಸದಾಗಿ ಜಾರಿಗೆ ತಂದ ಕಾನೂನಿನಡಿಯಲ್ಲಿ ಮೊದಲನೆಯದು. ಎರಡು ಪ್ರತ್ಯೇಕ ಪ್ರಕರಣಗಳು – ಶಂಕಿತ ಅಪಹರಣ ಮತ್ತು ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಮತ್ತೊಂದು – … Read more