ರೈತರಿಗೆ ಖುಷಿಸುದ್ಧಿ.! ಇಂದು ಖಾತೆಗೆ ಜಮಾ ಆಗಲಿದೆ ಹಣ – ಮೋದಿಯಿಂದ ‘ಒಂದು ದೇಶ – ಒಂದು ರಸಗೊಬ್ಬರ’ ಯೋಜನೆಗೆ ಚಾಲನೆ

ಪ್ರಧಾನಿ ಮೋದಿಯವರು ಆರಂಭಿಸಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತಿನ ಹಣವನ್ನು ಫಲಾನುಭವಿಯಾದ ಎಲ್ಲಾ ರೈತರ ಖಾತೆಗೆ ಇಂದು ವರ್ಗಾವಣೆ ಮಾಡಲಾಗುವುದು.

ಸುಮಾರು 16,000ಕೋಟಿ ರೂ. ಗಳನ್ನು ಸುಮಾರು ಎರಡು ಕೋಟಿ ಫಲಾನುಭವಿ ರೈತರ ಖಾತೆಗೆ ಜಮಾ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ನಡೆಯಲಿರುವ ಕೃಷಿ ಸಮ್ಮೇಳನ ಕಾರ್ಯಕ್ರಮದಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಿದ್ದಾರೆ.

WhatsApp Group Join Now
Telegram Group Join Now

ಹಾಗೇ ಇದೇ ಸಂದರ್ಭದಲ್ಲಿ ‘ಒಂದು ದೇಶ – ಒಂದು ರಸಗೊಬ್ಬರ’ ಎಂಬ ಯೋಜನೆಗೆ ಕೂಡ ಚಾಲನೆ ನೀಡಲಿದ್ದು, ಇನ್ನು ಮುಂದೆ ಎಲ್ಲಾ ರಸಗೊಬ್ಬರ ಕಂಪನಿಗಳು ‘ಭಾರತ್ ಬ್ರಾಂಡ್’ ಹೆಸರಿನಲ್ಲಿ ಯೂರಿಯಾ ಗೊಬ್ಬರ ಮಾರಾಟ ಮಾಡಲಿವೆ. ಹಾಗೆ ದೇಶದಾದ್ಯಂತ 600 ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಲೋಕಾರ್ಪಣೆ ಮಾಡಲಾಗುವುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

WhatsApp Group Join Now
Telegram Group Join Now

Leave a Reply