ಬಸ್ ನಲ್ಲೆ ಜಿಪ್ ತೆಗೆದ ಕಾಮುಕನಿಂದ ಅನುಚಿತ ವರ್ತನೆ.!

ಬೆಂಗಳೂರು: ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರೊಂದಿಗೆ ಕಾಮುಕರು ಅನುಚಿತವಾಗಿ ವರ್ತಿಸಿದ ಅನೇಕ ಘಟನೆ ನಡೆದಿವೆ. ಅಂತಹ ಮತ್ತೊಂದು ಘಟನೆಯ ವರದಿ ಇಲ್ಲಿದೆ ನೋಡಿ.

ಬೆಂಗಳೂರಿನಲ್ಲಿ ಬಿ.ಎಂ.ಟಿ.ಸಿ. ಬಸ್ ನಲ್ಲಿ ಯುವತಿಯ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ, ಜಿಪ್ ತೆಗೆದು ಅನುಚಿತವಾಗಿ ವರ್ತಿಸಿದ್ದಾನೆ. ನಿನ್ನೆ ರಾತ್ರಿ 8 ಗಂಟೆಗೆ ಕೋರಮಂಗಲದ 100 ಅಡಿ ರಸ್ತೆಯಲ್ಲಿ ಬಸ್ ನಲ್ಲಿ ಪ್ರಯಾಣಿಸುವಾಗ ಯುವತಿ ಪಕ್ಕದಲ್ಲಿ ಸುಮಾರು 65 ವರ್ಷದ ಹಿರಿಯ ವ್ಯಕ್ತಿಯೊಬ್ಬ ನಿಂತಿದ್ದಾನೆ. ಕುಳಿತುಕೊಳ್ಳಲು ಯುವತಿ ಸೂಚಿಸಿದರೂ, ನಿರಾಕರಿಸಿದ ವ್ಯಕ್ತಿ, ಜಿಪ್ ತೆಗೆದು ಅನುಚಿತವಾಗಿ ವರ್ತಿಸಿದ್ದಾನೆ. ಯುವತಿ ಜೋರು ಮಾಡಿದಾಗ, ಆಕೆಯ ಮೇಲೆಯೇ ರೇಗಾಡಿದ್ದಾನೆ. ಬೇಸತ್ತ ಯುವತಿ ಕೋರಮಂಗಲ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now

ದುನಿಯಾ ವಿಜಯ್ ಮತ್ತು ಅವರ ಪತ್ನಿ ಕೀರ್ತಿ ಯವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ? ಶಾಕ್ ಆಗ್ತೀರಾ.!

ಚಂದನವನದ ಮೋಸ್ಟ್ ಬ್ಯೂಟಿಫುಲ್ ಕಪಲ್ಸ್ ಎಂದೇ ಖ್ಯಾತರಾಗಿರುವ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಹಾಗೂ ಪತ್ನಿ ಕೀರ್ತಿ ಯವರ ಕುರಿತು ಯಾರಿಗೂ ತಿಳಿಯದಂತಹ ಕೆಲವೊಂದು ಸ್ವಾರಸ್ಯಕರ ಮಾಹಿತಿಯನ್ನ ತಿಳಿಸುತ್ತೇವೆ. ತಮ್ಮ ಕಂಚಿನ ಕಣ್ಣೋಟದ ಮೂಲಕ ಅದೆಷ್ಟೋ ಜನರ ಮನಸ್ಸಿನಲ್ಲಿ ಭಯ ಹುಟ್ಟಿಸುವಂತೆ ಅಭಿನಯಿಸುವ ನಟ ದುನಿಯಾ ವಿಜಯ್ ರೌಡಿಸಂ ಕುರಿತಾದ ಚಿತ್ರಗಳ ಮೂಲಕ ಯಶಸ್ಸನ್ನು ಕಂಡವರು.

WhatsApp Group Join Now
Telegram Group Join Now

ದುನಿಯಾ, ಸಲಗ, ಶಿವಾಜಿನಗರ, ದನಕಾಯೋನು, ಜಾನಿ ಜಾನಿ ಎಸ್ ಪಾಪ, ಮಾಸ್ತಿಗುಡಿ, ಆರ್ ಎಕ್ಸ್ ಸೂರಿ  ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ಮಾಡಿ ತಮ್ಮದೇ ಆದಂತಹ ವಿಶೇಷ ಅಭಿಮಾನಿ ಬಳಗವನ್ನ ಸಂಪಾದಿಸಿರುವ ನಟ ದುನಿಯಾ ವಿಜಯ್ ಅವರ ಕುರಿತಾದ ಒಂದಲ್ಲ ಒಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಚರ್ಚೆಯಾಗುತ್ತಲೇ ಇರುತ್ತದೆ.

ತಮ್ಮ ಮಾಸ್ ನಟನೆಯ ಮೂಲಕ ಕನ್ನಡಿಗರ ಪ್ರೀತಿಯನ್ನು ಗಳಿಸಿರುವ ದುನಿಯಾ ವಿಜಯ್ ಯವರು ರಂಗ ಎಸ್ಸೆಸ್ಸೆಲ್ಸಿ, ಜೋಗಿ ಸೇರಿದಂತೆ ಅನೇಕ ಖ್ಯಾತ ನಟರ ಸಿನಿಮಾದಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡುತ್ತಾರೆ. ಆ ನಂತರ 2007ರಲ್ಲಿ ಬಿಡುಗಡೆಯಾದ ‘ದುನಿಯಾ’ ಎಂಬ ಚಿತ್ರ ವಿಜಯ್ ಅವರಿಗೆ ದೊಡ್ಡಮಟ್ಟದ ಯಶಸ್ಸು ತಂದುಕೊಡುತ್ತದೆ.

WhatsApp Group Join Now
Telegram Group Join Now

ಹೀಗೆ ಆಕ್ಷನ್ ಚಿತ್ರಗಳನ್ನೇ ತಮ್ಮ ಸಿನಿಮಾ ಸ್ಟೈಲ್ ಆಗಿ ಮಾಡಿಕೊಂಡ ದುನಿಯಾ ವಿಜಯ್ ಇಂದಿಗೂ ಸಹ ನಮ್ಮ ಕನ್ನಡದ ಟಾಪ್ ನಟರ ಸಾಲಿನಲ್ಲಿ ಸ್ಥಾನವನ್ನ ಅಲಂಕರಿಸಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ವಿಜಯ್ ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ, ನಾಗರತ್ನ ಎನ್ನುವವರನ್ನು ಶಾಸ್ತ್ರಬದ್ಧವಾಗಿ ಗುರುಹಿರಿಯರ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದಂತಹ ದುನಿಯಾ ವಿಜಯ್, 2016ರಲ್ಲಿ ಮಾಡೆಲ್ ಹಾಗು ನಟಿ ಆದಂತಹ ಕೀರ್ತಿ ಎಂಬುವವರೊಂದಿಗೆ ಎರಡನೇ ದಾಂಪತ್ಯ ಜೀವನ ಶುರು ಮಾಡುತ್ತಾರೆ.

ಇನ್ನು ದುನಿಯಾ ವಿಜಯ್ ಅವರಿಗೆ ಸಾಮ್ರಾಟ್ ವಿಜಯ್ ಹಾಗೂ ಮೋನಿಕ ವಿಜಯ್ ಎನ್ನುವ ಇಬ್ಬರು ಮುದ್ದಾದ ಮಕ್ಕಳಿದ್ದು, ನಟಿ ಕೀರ್ತಿ ಅವರು ಕೂಡ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಹಲವಾರು ಜಾಹೀರಾತುಗಳಲ್ಲಿ ಹಾಗೂ ನಟ ಕಿಚ್ಚ ಸುದೀಪ್ ನಟಿಸಿರುವ ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಎರಡನೇ ಹೀರೋಯಿನ್ ಆಗಿ ಸಹ ನಟಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರಿಗೆ ವಿಶೇಷ ಅಭಿಮಾನಿ ಬಳಗವೇ ಸೃಷ್ಟಿಯಾಗಿದ್ದು, ದುನಿಯಾ ವಿಜಯ್ ಹಾಗು ಕೀರ್ತಿ ಯವರ ಕುರಿತು ಒಂದಲ್ಲ ಒಂದು ವಿಶೇಷ ಮಾಹಿತಿ ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಹರಿದಾಡುತ್ತಲೇ ಇರುತ್ತದೆ.

ಅದರಂತೆ ಅವರಿಬ್ಬರ ನಡುವಿನ ವಯಸ್ಸಿನ ಅಂತರ ಕೂಡ ಭಾರಿ ಸದ್ದು ಮಾಡುತ್ತಿದೆಯೆಂದ್ರೆ ತಪ್ಪಾಗಲಾರದು. 48 ವರ್ಷದ ದುನಿಯಾ ವಿಜಯ್ ಅವರನ್ನು 32 ವರ್ಷ ಪ್ರಾಯದ ಕೀರ್ತಿ ಗೌಡ ಪ್ರೀತಿಸಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಅವರಿಬ್ಬರ ನಡುವೆ ಬರೋಬ್ಬರಿ ಹತ್ತು ವರ್ಷಗಳ ವಯಸ್ಸಿನ ಅಂತರವಿದೆ. ಪ್ರೀತಿಗೆ ವಯಸ್ಸು ಮುಖ್ಯವಲ್ಲ ಎಂದು ತೋರಿಸಿ ಕೊಟ್ಟಂತಹ ನಮ್ಮ ಚಂದನವನದ ಮುದ್ದಾದ ಜೋಡಿಗಳಾದ ದುನಿಯಾ ವಿಜಯ್ ಹಾಗು ಕೀರ್ತಿ ಗೌಡ ಅವರ ಕುರಿತು ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನ ತಪ್ಪದೇ ಕಾಮೆಂಟ್ ಮೂಲಕ ನಮಗೆ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply