Spandana : ವಿಧಿ ತುಂಬಾನೇ ಕ್ರೂರಿ. ಚೆನ್ನಾಗಿರುವ ದಂಪತಿಗಳನ್ನ ನೋಡಿ ಸಹಿಸುವುದಿಲ್ಲ. ಹೌದು, ಚಿರು-ಮೇಘನಾ ದಂಪತಿಗಳಿಂದ ಚಿರುವನ್ನ ದೂರ ಮಾಡಿದ. ಅಪ್ಪು-ಅಶ್ವಿನಿ ಅವರಿಂದ ಅಪ್ಪು ಅವರನ್ನ ದೂರ ಮಾಡಿದ. ಇದೀಗ ವಿಜಯ್ ರಾಘವೇಂದ್ರ ಅವರಿಂದ ಅವರ ಮುದ್ದಿನ ಪತ್ನಿ ಸ್ಪಂದನ ಅವರನ್ನ ದೂರ ಮಾಡಿದ್ದಾನೆ. ಮತ್ತೊಂದು ಅಚ್ಚರಿಯ ವಿಷಯವೇನೆಂದರೆ, ಈ ಮೂರು ಜನರಿಗೂ ಕೂಡ ಹೃದಯಾಘಾತವಾಗಿರುವುದು ನೋವಿನ ಸಂಗತಿಯಾಗಿದೆ.
ಇದನ್ನೂ ಕೂಡ ಓದಿ : Labour Card Facillity : ಲೇಬರ್ ಕಾರ್ಡ್ ಇದ್ದವರಿಗೆ ಬಂಪರ್ ಸುದ್ಧಿ.! ಉಚಿತ ಮನೆ ಸೌಲಭ್ಯ ಪಡೆಯಬಹುದು.?
ತನ್ನ ಪತ್ನಿ ಮಗನ ಜೊತೆ ಖುಷಿಯಿಂದ ಜೀವನ ಸಾಗಿಸುತ್ತಿದ್ದ ವಿಜಯ್ ರಾಘವೇಂದ್ರ ಅವರಿಗೆ ಇದೀಗ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ. ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಬ್ಯಾಂಕಾಕ್ ಗೆ ತಮ್ಮ ಕಸಿನ್ಸ್ ಜೊತೆ ಟ್ರಿಪ್ ಗೆ ಹೋಗಿದ್ದರು. ಆದರೆ ವಿಧಿಯ ಕೈವಾಡ ಸ್ಪಂದನ ಬೆಂಗಳೂರಿಗೆ ಹಿಂತಿರುಗುವ ಮೊದಲೇ ಅವರನ್ನು ಎಲ್ಲರಿಂದ ದೂರ ಮಾಡಿಬಿಟ್ಟ. ಸ್ಪಂದನ ಹೃದಯಾಘಾತದಿಂದ ನಿಧನರಾಗಿದ್ದು, ಈ ಅಕಾಲಿಕ ಅಗಲಿಕೆ ಎಲ್ಲರಿಗೂ ಆಘಾತವನ್ನು ಉಂಟು ಮಾಡಿದೆ.
ಇದನ್ನೂ ಕೂಡ ಓದಿ : UPI Payments : ಯುಪಿಐ ಪೇಮೆಂಟ್ಸ್ ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಬಿಗ್ ಶಾಕಿಂಗ್ ಸುದ್ಧಿ / ಹೊಸ ರೂಲ್ಸ್ ಜಾರಿಗೆ
ಸ್ಪಂದನ ನಿಧನದ ಹಿನ್ನೆಲೆಯಲ್ಲಿ ವಿಜಯ ರಾಘವೇಂದ್ರ ಅವರ ಸಹೋದರ ನಟ ಶ್ರೀ ಮುರಳಿ ಮೊದಲ ಪ್ರತಿಕ್ರಿಯೆ ನೀಡಿದ್ದು, ಸ್ಪಂದನ ನಿಧನವನ್ನು ಖಚಿತಪಡಿಸಿದ್ದಾರೆ. ಅತ್ತಿಗೆ ಸ್ಪಂದನ ಅವರ ನಿಧನದ ಕುರಿತು ಮಾತನಾಡಿರುವ ನಟ ಶ್ರೀಮುರಳಿ, ನನಗೆ ಅಣ್ಣ ಫೋನ್ ಮಾಡಿ ಹೇಳಿರುವುದು ಇಷ್ಟೇ.. ಕಸಿನ್ಸ್ ಜೊತೆಗೆ ಅತ್ತಿಗೆ ಟ್ರಿಪ್ ಹೋಗಿದ್ದಾರೆ. ಎಲ್ಲಾ ಸೇರಿ ಸಮಯ ಕಳೆಯುವಾಗ ಅತ್ತಿಗೆ, ಮಲಗಿದವರು ಮತ್ತೆ ಎದ್ದಿಲ್ಲ. ಇದು ಲೊ ಬಿಪಿ ಅಂತ ನಾವು ಅಂದುಕೊಳ್ಳುತ್ತಿದ್ದೇವೆ. ಬಂದ ಮೇಲೆ ಮಿಕ್ಕಿದ ಮಾಹಿತಿ ಗೊತ್ತಾಗುತ್ತದೆ ಎಂದು ತನ್ನ ಅತ್ತಿಗೆಯನ್ನ ನೆನೆದು ಕಣ್ಣೀರು ಹಾಕಿದ್ದಾರೆ. ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..