ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಇನ್ನಿಲ್ಲ.! ತೀವ್ರ ಹೃದಯಾಘಾತಕ್ಕೆ ಸ್ಪಂದನ ಬಲಿ.!

ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವಿದೇಶ ಪ್ರವಾಸಕ್ಕೆ ತೆರಳಿದ್ದ ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ ಪತ್ನಿ ನಿಧನರಾಗಿದ್ದು, ಅವರ ಕುಟುಂಬವನ್ನು ಆಘಾತಕ್ಕೀಡುಮಾಡಿದೆ. ಸ್ಪಂದನ ಅವರು ಕುಟುಂಬದ ಜೊತೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದರು. ಅವರ ಪಾರ್ಥಿವ ಶರೀರವನ್ನು ನಾಳೆ ಬೆಂಗಳೂರಿಗೆ ತರಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಕೂಡ ಓದಿ : Labour Card Facillity : ಲೇಬರ್ ಕಾರ್ಡ್ ಇದ್ದವರಿಗೆ ಬಂಪರ್ ಸುದ್ಧಿ.! ಉಚಿತ ಮನೆ ಸೌಲಭ್ಯ ಪಡೆಯಬಹುದು.?

WhatsApp Group Join Now
Telegram Group Join Now

ವಿಜಯ ರಾಘವೇಂದ್ರ ಹಾಗು ಸ್ಪಂದನ ಅವರು, ಕನ್ನಡ ಚಿತ್ರ ರಂಗದ ಕ್ಯೂಟ್ ದಂಪತಿಗಳಾಗಿದ್ದರು. ಸ್ಪಂದನ ಅವರು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ ಅವರ ಮಗಳಾಗಿದ್ದರು. ವಿಜಯ ರಾಘವೇಂದ್ರ ಹಾಗು ಸ್ಪಂದನ ಇಬ್ಬರೂ ಪರಸ್ಪರ ಪ್ರೀತಿಸಿ, 2007 ರಲ್ಲಿ ಮದುವೆಯಾಗಿದ್ದರು. ಸ್ಪಂದನ ಅವರು ಕ್ರೇಝಿ ಸ್ಟಾರ್ ರವಿಚಂದ್ರನ್ ಅಭಿನಯದ ಅಪೂರ್ವ ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ಇದೀಗ ವಿಜಯ್ ಅವರ ತಂದೆ ಚಿನ್ನೇ ಗೌಡ, ಸಹೋದರ ಶ್ರೀ ಮುರಳಿ ಹಾಗು ಸ್ಪಂದನ ತಂದೆ ಬಿ.ಕೆ ಶಿವರಾಂ ಅವರು ಬ್ಯಾಂಕಾಕ್ ಗೆ ತೆರಳಲಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..